ಐಪಿಎಲ್ 2019 ಹರಾಜು: ಎಲ್ಲಿ? ಯಾವಾಗ? ಯಾವ ವಾಹಿನಿಯಲ್ಲಿ ಪ್ರಸಾರ?

ಜೈಪುರ, ಡಿಸೆಂಬರ್ 17: ಈ ಬಾರಿ ಅವಧಿಗೂ ಮುನ್ನವೇ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2019ರ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನ ಬದಲಿಗೆ ಜೈಪುರದಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ.
2019ನೇ ಸಾಲಿನ 12ನೇ ಆವೃತ್ತಿಯ ಐಪಿಎಲ್ ಗಾಗಿ ಜೈಪುರದಲ್ಲಿ ಡಿಸೆಂಬರ್ 17 ಹಾಗೂ 18ರಂದು ಹರಾಜು ನಡೆಸಲಾಗುತ್ತದೆ.
ಈ ಮುಂಚೆ ಗೋವಾದಲ್ಲಿ ಹರಾಜು ಪ್ರಕ್ರಿಯೆ ಆಯೋಜಿಸಲು ಯತ್ನಿಸಲಾಗಿತ್ತು. ಆದರೆ, ಫ್ರಾಂಚೈಸಿಗಳ ಬೇಡಿಕೆಗೆ ಮಣಿದು ಜೈಪುರದಲ್ಲಿ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ.
ಇಷ್ಟಕ್ಕೂ ಈ ಬಾರಿ ಐಪಿಎಲ್ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತದಲ್ಲಿ ಆ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಈ ಬಾರಿ ಐಪಿಎಲ್ ಟೂರ್ನಮೆಂಟ್ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮತ್ತೊಮ್ಮೆ ದಕ್ಷಿಣ ಆಫ್ರಿಕಾ ಅಥವಾ ಯುಎಇಯಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆಗಳಿವೆ.
2009 ಹಾಗೂ 2014ರಲ್ಲಿ ಭಾರತದ ಹೊರಗೆ ಐಪಿಎಲ್ ಆಯೋಜಿಸಲಾಗಿತ್ತು. ಐಪಿಎಲ್ ಗೆ ಪುನರ್ ಪ್ರವೇಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಪ್ ಎತ್ತಿತ್ತು. ವಿಶ್ವಕಪ್ ಹಿನ್ನಲೆಯಲ್ಲಿ ಐಪಿಎಲ್ ಟೂರ್ನಮೆಂಟ್ ಏಪ್ರಿಲ್ -ಮೇ ಅವಧಿಯಲ್ಲಿ ನಡೆಸಲಾಗುತ್ತಿದೆ.

ಎಲ್ಲಿ ಪ್ರಸಾರವಾಗಲಿದೆ? ಯಾವ ಸಮಯ?
ಐಪಿಎಲ್ ಹರಾಜು 2019 ಪ್ರಕ್ರಿಯೆ ಡಿಸೆಂಬರ್ 17ರಂದು 2.30ರ ನಂತರ ನೇರ ಪ್ರಸಾರವಾಗಲಿದೆ.
ಸ್ಟಾರ್ ನೆಟ್ವರ್ಕ್ ನ್ ಸ್ಟಾರ್ ಸ್ಫೋರ್ಟ್ಸ್ 1 ಎಚ್ ಡಿ, ಫಸ್ಟ್, ಸೆಲೆಕ್ಟ್, ಎಚ್ ಡಿ ಚಾನೆಲ್ ಗಳಲ್ಲದೆ, ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ನಲ್ಲೂ ಲಭ್ಯವಿರಲಿದೆ.

ಈ ಬಾರಿ ಏನು ವಿಶೇಷ?
* ಆಟಗಾರರ ಸಂಬಳ ಮಿತಿಯನ್ನು 66 ಕೋಟಿ ರು ನಿಂದ 80 ಕೋಟಿ ರುಗೆ ಏರಿಸಲಾಗಿದೆ.
* ತಂಡದಲ್ಲಿನ ಸದಸ್ಯರ ಸಂಖ್ಯೆಯನ್ನು 27ರಿಂದ 25ಕ್ಕಿಳಿಸಲಾಗಿದೆ.
* ಪ್ರತಿ ತಂಡದಲ್ಲಿ 8 ವಿದೇಶಿ ಆಟಗಾರರನ್ನು ಹೊಂದಿರಬಹುದು.
* 18 ಮಂದಿ ಕನಿಷ್ಟ ಸಂಖ್ಯೆ ಮಿತಿಯನ್ನು ಹೊಂದಿರಬೇಕು.
* ಕ್ಯಾಪ್ಡ್ ಆಟಗಾರರ ಮೂಲ ಬೆಲೆಯನ್ನು 50 ರಿಂದ 75 ಲಕ್ಷಕ್ಕೆ ಏರಿಸಲಾಗಿದೆ.

ರೈಟ್ ಟು ಮ್ಯಾಚ್ ಕಾರ್ಡ್
ಪ್ರತಿ ತಂಡವು 5 ಆಟಗಾರರನ್ನು ನೇರವಾಗಿ ಉಳಿಸಿಕೊಳ್ಳಬಹುದು, ಅಥವಾ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಮೂರು ಆಟಗಾರರನ್ನು ಹರಾಜು ಸಂದರ್ಭದಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದು.
ಕ್ಯಾಪ್ಡ್ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದರೆ ಫ್ರಾಂಚೈಸಿಗಳು ಆರ್ ಟಿಎಂ ಕಾರ್ಡ್ ಬಳಸಿ ವಿದೇಶಿ ಅಥವಾ ಪ್ರಥಮ ಬಾರಿಗೆ ಆಡಲಿರುವ ಆಟಗಾರರನ್ನು ಮಾತ್ರ ತಂಡಕ್ಕೆ ಸೇರಿಸಿಕೊಳ್ಳಬಹುದು.
ಐಪಿಎಲ್ 2019 : ಜೈಪುರದಲ್ಲಿ 346 ಕ್ರಿಕೆಟರ್ಸ್ ಹರಾಜಿಗೆ

ಎಷ್ಟು ಆಟಗಾರರು ಹರಾಜಿಗೆ?
ಎಷ್ಟು ಆಟಗಾರರು?: ಪ್ರಮುಖ 70 ಆಟಗಾರರು ಹರಾಜಾಗುತ್ತಿದ್ದು, 50 ಮಂದಿ ಭಾರತೀಯರು 20 ಮಂದಿ ವಿದೇಶಿ ಆಟಗಾರರಿದ್ದಾರೆ. 145.25 ಕೋಟಿ ರು ಅದಲು ಬದಲಾಗಲಿದೆ.
ಜೈಪುರದಲ್ಲಿ ಡಿಸೆಂಬರ್ 18,2018ರಂದು ಒಟ್ಟಾರೆ, 346 ಕ್ರಿಕೆಟರ್ಸ್ ಹರಾಜಿಗೆ ಒಳಪಡಲಿದ್ದಾರೆ. 2 ಕೋಟಿ ರು ಮೂಲಬೆಲೆ ಎಂದು ನಿಗದಿ ಪಡಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications