
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನ ಹರಾಜು ಪ್ರಕ್ರಿಯೆಯಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದ್ದು, ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಸೀಸನ್‌ನಲ್ಲಿ 10 ಆಟಗಾರರು 10 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ. ಈ ಮೂಲಕ 10 ಯುವ ಆಟಗಾರರು 10 ಕೋಟಿ ರೂಪಾಯಿ ಕ್ಲಬ್ ಸೇರಿದ್ದಾರೆ.
ಐಪಿಎಲ್ 2022ರ ಹರಾಜಿನ ಮೊದಲ ದಿನದಲ್ಲಿ ಒಟ್ಟು 10 ಫ್ರಾಂಚೈಸಿಗಳು ಕೆಲವು ಪ್ರಮುಖ ಆಟಗಾರರನ್ನ ಪಡೆಯಲು ಸಾಕಷ್ಟು ಬಿಡ್ ನಡೆಸಿದರ ಪರಿಣಾಮವೇ ಅನೇಕ ಆಟಗಾರರ ಮೊತ್ತಕ್ಕೆ ಗಗನಕ್ಕೇರಿತು. ಅದ್ರಲ್ಲೂ ಮೂಲಕ ಬೆಲೆ 40 ಲಕ್ಷದಿಂ 1 ಕೋಟಿ ಮೂಲ ಬೆಲೆ ಹೊಂದಿದ್ದ ಆಟಗಾರರು 10 ಕೋಟಿ ರೂಪಾಯಿ ಬಿಡ್ ದಾಟಲು ಸಾಧ್ಯವಾಗಿದೆ.
ಅದ್ರಲ್ಲೂ ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಮೇಲಿನ ಹೂಡಿಕೆಯು ಈ ಬಾರಿಯ ಹರಾಜಿನ ಅತಿದೊಡ್ಡ ಖರೀದಿದಾರರಾಗಿದ್ದಾರೆ. ತಮ್ಮ ಮಾಜಿ ಆಟಗಾರನನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಮಾಡಿದ ಪ್ರಯತ್ನ ಸಾಕಷ್ಟು ಹೊಗಳಿಕೆಗೆ ಕಾರಣವಾಗಿದೆ. ಇಶನ್ ಕಿಶನ್ ಅಷ್ಟೇ ಅಲ್ಲದೆ ಐಪಿಎಲ್ 10 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಇತರ ಒಂಬತ್ತು ಆಟಗಾರರು ಸಹ ಇದ್ದಾರೆ. ಇದ್ರಲ್ಲಿ ಏಳು ಆಟಗಾರರು ಭಾರತದವರೇ ಆಗಿರುವುದು ವಿಶೇಷ. ಅವರು ಯಾರು? ಎಷ್ಟು ಮೊತ್ತಕ್ಕೆ ಯಾವ ಫ್ರಾಂಚೈಸಿ ಸೇರಿದ್ರು ಎಂಬುದರ ಪಟ್ಟಿ ಈ ಕೆಳಗಿದೆ.
10 ಕೋಟಿ ರೂಪಾಯಿ ಕ್ಲಬ್ ಸೇರಿದ 10 ಆಟಗಾರರು:
ಇಶಾನ್ ಕಿಶನ್ : 15.25 ಕೋಟಿ ರೂಪಾಯಿ (ಮುಂಬೈ ಇಂಡಿಯನ್ಸ್)
ದೀಪಕ್ ಚಹಾರ್: 14 ಕೋಟಿ ರೂಪಾಯಿ (ಚೆನ್ನೈ ಸೂಪರ್ ಕಿಂಗ್ಸ್)
ಶ್ರೇಯಸ್ ಅಯ್ಯರ್: 12.25 ಕೋಟಿ ರೂಪಾಯಿ (ಕೋಲ್ಕತ್ತಾ ನೈಟ್ ರೈಡರ್ಸ್)
ಶಾರ್ದೂಲ್ ಠಾಕೂರ್: 10.75 ಕೋಟಿ ರೂಪಾಯಿ (ಡೆಲ್ಲಿ ಕ್ಯಾಪಿಟಲ್ಸ್)
ಹರ್ಷಲ್ ಪಟೇಲ್: 10.75 ಕೋಟಿ ರೂಪಾಯಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ನಿಲೋಲಸ್ ಪೂರನ್: 10.75 ಕೋಟಿ ರೂಪಾಯಿ (ಸನ್‌ರೈಸರ್ಸ್ ಹೈದ್ರಾಬಾದ್)
ವಹಿಂದು ಹಸರಂಗ: 10.75 ಕೋಟಿ ರೂಪಾಯಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಲ್ಯೂಕಿ ಫರ್ಗುಸನ್: 10 ಕೋಟಿ ರೂಪಾಯಿ (ಗುಜರಾತ್ ಟೈಟನ್ಸ್)
ಪ್ರಸಿದ್ಧ ಕೃಷ್ಣ: 10 ಕೋಟಿ ರೂಪಾಯಿ (ರಾಜಸ್ತಾನ್ ರಾಯಲ್ಸ್)
ಅವೇಶ್ ಖಾನ್: 10 ಕೋಟಿ ರೂಪಾಯಿ (ಲಕ್ನೋ ಸೂಪರ್ ಜಾಯಿಂಟ್ಸ್)