For Quick Alerts
ALLOW NOTIFICATIONS  
For Daily Alerts
 

ಗುಜರಾತ್ ತಂಡ ಸೇರಿದ ಕರ್ನಾಟಕದ ಅಭಿನವ್ ಮನೋಹರ್ ಬಗ್ಗೆ ತಿಳಿದುಕೊಳ್ಳಿ

ವಿಶ್ವದ ಅತಿದೊಡ್ಡ ಟಿ 20 ಲೀಗ್ 10 ಆರಂಭಕ್ಕೂ ಮುನ್ನ ಯಾವ ತಂಡಕ್ಕೆ ಯಾವ ಆಟಗಾರರು ಸೇರ್ಪಡೆಯಾಗಲಿದ್ದಾರೆ ಎಂಬುದು ಮುಂದಿನ ಎರಡು ದಿನಗಳ ಅತಿದೊಡ್ಡ ಹರಾಜಿನ ನಂತರ ತಿಳಿಯಲಿದೆ. ಮೊದಲ ದಿನದ ಹರಾಜಿನಲ್ಲೇ ಕರ್ನಾಟಕ ಮೂಲದ ಆಟಗಾರರಿಗೆ ಭರ್ಜರಿ ಬೆಲೆ ಸಿಕ್ಕಿದೆ. ರಾಬಿನ್ ಉತ್ತಪ್ಪ ಕೂಡಾ ಚೆನ್ನೈ ತಂಡಕ್ಕೆ ಮರಳಿದಿದ್ದಾರೆ. ಈ ಬಾರಿ ಎರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಂಡಿದ್ದು, ಎಲ್ಲರಿಗೂ ತಿಳಿದಿರುವ ವಿಷಯ, ಹೊಸ ತಂಡಗಳು ಯುವ ಆಟಗಾರರನ್ನು ಆಯ್ಕೆ ಮಾಡಿಕೊಂಡು ಹೊಸ ತಂಡ ಕಟ್ಟುವತ್ತ ಚಿತ್ತ ನೆಟ್ಟಿದ್ದರೆ, ಬೆಂಗಳೂರು ಫ್ರಾಂಚೈಸಿ ಮತ್ತೊಮ್ಮೆ ಸ್ಥಳೀಯ ಆಟಗಾರರಿಗೆ ಬಿಡ್ ಮಾಡದೆ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.

ಐಪಿಎಲ್ 2022 ಸಂಪೂರ್ಣ ಅಂಕಿ ಅಂಶ ಅಪ್ಡೇಟ್ಸ್

ಈ ನಡುವೆ ಕರ್ನಾಟಕದ ಸ್ಫೋಟಕ ಬ್ಯಾಟ್ಸ್ ಮನ್ ಅಭಿನವ್ ಮನೋಹರ್ ಸದಾರಂಗಾನಿಯನ್ನು ಗುಜರಾತ್ ಟೈಟನ್ಸ್ ತಂಡ ಬಿಡ್ ಮಾಡಿ ತಂಡಕ್ಕೆ ಸೇರಿಸಿಕೊಂಡಿದೆ. ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ನಡೆದಿರುವ ಐಪಿಎಲ್ ಮೆಗಾ ಹರಾಜು 2022 ಮೊದಲ ದಿನದಂದು ಅಭಿನವ್ ಬಿಕರಿಯಾಗಿದ್ದು, ಅಭಿನವ್ ಗಾಗಿ 2.6 ಕೋಟಿ ರು ಬಿಡ್ ಕೂಗಲಾಗಿದ್ದು, ಎಲ್ಲರ ಗಮನ ಸೆಳೆದಿತ್ತು. (ಚಿತ್ರಕೃಪೆ: ಅಭಿನವ್ ಇನ್ಸ್ಟಾಗ್ರಾಮ್ ಪುಟ)

364 ಅನ್ ಕ್ಯಾಪ್ಡ್ ಆಟಗಾರರಿದ್ದರು

364 ಅನ್ ಕ್ಯಾಪ್ಡ್ ಆಟಗಾರರಿದ್ದರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಆಟಗಾರರ ಹರಾಜು ಪಟ್ಟಿಯನ್ನು ಫೆಬ್ರವರಿ 1 ರಂದು ಪ್ರಕಟಿಸಲಾಯಿತು ಮತ್ತು ಒಟ್ಟು 590 ಕ್ರಿಕೆಟಿಗರನ್ನು 1214 ಆಟಗಾರರ ಮೂಲ ಪಟ್ಟಿಯಿಂದ ಹರಾಜಿನ ಸುತ್ತಿಗೆ ಹೋಗಲು ಇಚ್ಛೆಯ ಪಟ್ಟಿಯನ್ನು ಆಧರಿಸಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಮುಖ್ಯವಾಗಿ ಕೊನೆ ಹಂತದಲ್ಲಿ 10 ಹೊಸ ಆಟಗಾರರನ್ನು ಸೇರಿಸಲಾಯಿತು, ಅದರಲ್ಲಿ 3 ಆಸ್ಟ್ರೇಲಿಯನ್ನರು ಮತ್ತು 7 ಭಾರತೀಯರು ಸೇರಿದ್ದಾರೆ. ಫೆ.13ರಂದು ಎರಡನೇ ಸುತ್ತಿನ ಹರಾಜು ನಡೆಯಲಿದೆ.

600 ಆಟಗಾರರಲ್ಲಿ 229 ಆಟಗಾರರನ್ನು ಕ್ಯಾಪ್ ಮಾಡಲಾಗಿದೆ, 364 ಅನ್ ಕ್ಯಾಪ್ಡ್ ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರು. ಅಲ್ಲದೆ, 600 ಆಟಗಾರರಲ್ಲಿ 377 ಭಾರತೀಯ ಆಟಗಾರರು ಮತ್ತು ಉಳಿದ 223 ವಿದೇಶಿ ಆಟಗಾರರಿದ್ದು, ಈ ಪೈಕಿ 27 ವರ್ಷದ ಕರ್ನಾಟಕದ ಬ್ಯಾಟ್ಸ್‌ಮನ್ ಅಭಿನವ್ ಮನೋಹರ್ ಸದಾರಂಗನಿ ಅನ್ ಕ್ಯಾಪ್ಡ್ ಆಟಗಾರರಾಗಿ ಪಟ್ಟಿಯಲ್ಲಿದ್ದರು.

ಅಭಿನವ್ ಮನೋಹರ್

ಅಭಿನವ್ ಮನೋಹರ್

16 ಸೆಪ್ಟೆಂಬರ್ 1994 ರಂದು ಜನಿಸಿದ ಅಭಿನವ್ ಮನೋಹರ್ ಅವರು ಕಳೆದ ಸಾಲಿನ 2021-22 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನ ಮೊದಲ ಕ್ವಾರ್ಟರ್-ಫೈನಲ್‌ನಲ್ಲಿ ಕರ್ನಾಟಕ ಪರ 6 ನವೆಂಬರ್ 2021 ರಂದು ಟಿ20ಗೆ ಪದಾರ್ಪಣೆ ಮಾಡಿದರು.

ಬಲಗೈ ಬ್ಯಾಟ್ಸ್‌ಮನ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಅಸಾಧಾರಣವಾಗಿ ಬ್ಯಾಟಿಂಗ್ ಮಾಡಿ ಗಮನ ಸೆಳೆದರು ಮತ್ತು ಸೌರಾಷ್ಟ್ರ ವಿರುದ್ಧ 49 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳು ಸೇರಿದಂತೆ 70 ರನ್ ಚೆಚ್ಚಿದರು.

ಡಿಸೆಂಬರ್ 19, 2021 ರಂದು ರಾಜಸ್ಥಾನದ ವಿರುದ್ಧ 2021-22 ವಿಜಯ್ ಹಜಾರೆ ಟ್ರೋಫಿಯ ಪ್ರಾಥಮಿಕ ಕ್ವಾರ್ಟರ್-ಫೈನಲ್‌ನಲ್ಲಿ ಕರ್ನಾಟಕಕ್ಕಾಗಿ ತಮ್ಮ ಲಿಸ್ಟ್ ಎ ಚೊಚ್ಚಲ ಪಂದ್ಯವನ್ನಾಡಿದರು.

ಯಾವ ತಂಡದಲ್ಲಿ ಆಡಿದ್ದಾರೆ

ಯಾವ ತಂಡದಲ್ಲಿ ಆಡಿದ್ದಾರೆ

ಆದರೆ, ಇದಕ್ಕೂ ಮುನ್ನ ಅಭಿನವ್ ಮನೋಹರ್ ಸದಾರಂಗನಿ ತಮ್ಮ ವೃತ್ತಿ ಜೀವನದಲ್ಲಿ ಕರ್ನಾಟಕ, ಸದರ್ನ್ ಚಾಂಪ್ಸ್, ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಬಿಜಾಪುರ ಬುಲ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಬಳ್ಳಿ ಟೈಗರ್ಸ್ ತಂಡ ಪರ ಆಡಿದ ಅನುಭವ ಹೊಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2022 ಹರಾಜಿಗೆ ಶಾರ್ಟ್‌ಲಿಸ್ಟ್ ಮಾಡಿದ 600 ಆಟಗಾರರಲ್ಲಿ 229 ಆಟಗಾರರನ್ನು ಕ್ಯಾಪ್ ಮಾಡಲಾಗಿದೆ, 364 ಅನ್ ಕ್ಯಾಪ್ಡ್ ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರು. ಅಲ್ಲದೆ, 600 ಆಟಗಾರರಲ್ಲಿ 377 ಭಾರತೀಯ ಆಟಗಾರರು ಮತ್ತು ಉಳಿದ 223 ವಿದೇಶಿ ಆಟಗಾರರು.

ಅಭಿನವ್ ಗಾಗಿ ಯಾರು ಯಾರು ಬಿಡ್

ಅಭಿನವ್ ಗಾಗಿ ಯಾರು ಯಾರು ಬಿಡ್

ಐಪಿಎಲ್ ಹರಾಜಿನಲ್ಲಿ ಅಭಿನವ್ ರನ್ನು ಯಾರು ಖರೀದಿಸುತ್ತಾರೆ ಎಂಬ ಕುತೂಹಲ ಮೂಡಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬಿಡ್ಡಿಂಗ್ ವಾರ್ ನಡೆಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಡ್ ಮಾಡುವ ಸಾಹಸಕ್ಕೆ ಕೈ ಹಾಕಲಿಲ್ಲ. ಆದರೆ, ಕೊನೆ ಹಂತ ಬಿಡ್ ಮಾಡಲು ಶುರು ಮಾಡಿದ ಗುಜರಾತ್ ಟೈಟನ್ಸ್ ಅಂತಿಮವಾಗಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ, INR 2.60 ಕೋಟಿಗೆ ಅಭಿನವ್ ಮನೋಹರ್ ಸದಾರಂಗನಿ ಅವರನ್ನು ಗುಜರಾತ್ ಟೈಟನ್ಸ್ ಖರೀದಿಸಿದೆ.

ಚಿತ್ರದಲ್ಲಿ: ಕರ್ನಾಟಕದ ಪರ ಪದಾರ್ಪಣೆ ಪಂದ್ಯದ ಸಂದರ್ಭದಲ್ಲಿ ನಾಯಕ ಮನೀಶ್ ಪಾಂಡೆ ಜೊತೆ ಅಭಿನವ್
ಹಾರ್ದಿಕ್ ಪಾಂಡ್ಯ ನಾಯಕ

ಹಾರ್ದಿಕ್ ಪಾಂಡ್ಯ ನಾಯಕ

ಮೆಗಾ ಹರಾಜಿಗೂ ಮುನ್ನವೇ ಅಹಮದಾಬಾದ್ ಫ್ರಾಂಚೈಸಿ (ಗುಜರಾತ್ ಟೈಟನ್ಸ್) ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನಾಯಕ ಎಂದು ಘೋಷಣೆ ಮಾಡಿದೆ. ಬಿಸಿಸಿಐ ಎರಡು ಹೊಸ ತಂಡಗಳಿಗೆ ನೀಡಿದ್ದ ನೀಡಿದ ವಿಶೇಷ ಅಧಿಕಾರವನ್ನು ಬಳಸಿ ಅಹಮದಾಬಾದ್ ಫ್ರಾಂಚೈಸಿ 15 ಕೋಟಿ ರೂಪಾಯಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಮಿಸ್ಟರಿ ಸ್ಪಿನ್ನರ್ ರಶೀದ್ ಖಾನ್ ಹಾಗೂ ಕೆಕೆಆರ್ ಪರ ಆಡುತ್ತಿದ್ದ ಶುಭ್ಮನ್ ಗಿಲ್ ಅವರನ್ನು ಕೂಡ ತಂಡಕ್ಕೆ ಹರಾಜಿಗೂ ಮುನ್ನವೇ ಸೇರ್ಪಡೆಗೊಳಿಸಿದೆ. ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಮತ್ತು ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅಹಮದಾಬಾದ್ ತಂಡದ ಕೋಚ್‌ಗಳಾಗಿದ್ದರೆ, ವಿಕ್ರಂ ಸೋಲಂಕಿ ತಂಡದ ನಿರ್ದೇಶಕರಾಗಿದ್ದಾರೆ.

Story first published: Sunday, February 13, 2022, 15:49 [IST]
Other articles published on Feb 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+