ಆಲ್‌ರೌಂಡರ್ ಜೇಸನ್ ಹೋಲ್ಡರ್ 8.75 ಕೋಟಿ ರೂಪಾಯಿಗೆ ಹರಾಜು: ಆರ್‌ಸಿಬಿ ಪ್ರಯತ್ನ ವಿಫಲ

ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಬರೋಬ್ಬರಿ 8.75 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜಾಯಿಂಟ್ಸ್ ತಂಡದ ಪಾಲಾಗಿದ್ದಾರೆ. ಭಾರತದ ಆಟಗಾರರ ಜೊತೆಗೆ ಏಕದಿನ ಸರಣಿಯಲ್ಲಿ ಮಿಂಚಿದ್ದ ವೆಸ್ಟ್ ಇಂಡೀಸ್ ಆಟಗಾರ ಜೇಸನ್ ಹೋಲ್ಡರ್ ಮೆಗಾ ಹರಾಜಿನಲ್ಲಿ ಆಕರ್ಷಿಸಿದ್ದಾರೆ. ಆಲ್‌ರೌಂಡರ್ ಫರ್ಫಾಮೆನ್ಸ್ ನೀಡಿದ ಜೇಸನ್ ಹೋಲ್ಡರ್ ವಿಕೆಟ್ ಕಬಳಿಸಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಮೊದಲ ಏಕದಿನ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದ್ರಾಬಾದ್ ಹಾಗೂ ಲಕ್ನೋ ಸೂಪರ್ ಜಾಯಿಂಟ್ಸ್ ಸತತವಾಗಿ ಬಿಡ್ ಮಾಡುವ ಮೂಲಕ ವೆಸ್ಟ್ ಇಂಡೀಸ್ ಆಲ್‌ರೌಂಡರ್‌ನನ್ನ ಕೊಂಡುಕೊಳ್ಳುವ ಪ್ರಯತ್ನ ನಡೆಸಿತು. ಆದ್ರೆ ಯಾವಾಗ ಜೇಸನ್ ಹೋಲ್ಡರ್ ಹಣ 8 ಕೋಟಿ ರೂಪಾಯಿ ದಾಟಿತೋ ಆರ್‌ಸಿಬಿ ಹಿಂದೆ ಸರಿಯಿತು. ಇನ್ನು ಸನ್‌ರೈಸರ್ಸ್ ಹೈದ್ರಾಬಾದ್ ಕೂಡ ಹೋಲ್ಡರ್‌ನನ್ನ ಮರು ಪಡೆಯುವಲ್ಲಿ ವಿಫಲಗೊಂಡಿತು.
ಪರಿಣಾಮ ವಿಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ 8.75 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜಾಯಿಂಟ್ಸ್ ತಂಡದ ಪಾಲಾಗಿದ್ದಾರೆ. ಇದಕ್ಕೂ ಮೂದಲು 1 ಕೋಟಿ ಮೂಲ ಬೆಲೆ ಹೊಂದಿದ್ದ ಕನ್ನಡಿಗ ಮನೀಶ್ ಪಾಂಡೆ 4.6 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜಾಯಿಂಟ್ಸ್ ಫ್ರಾಂಚೈಸಿ ಪಾಲಾಗಿದ್ದಾರೆ.
ಲಕ್ನೋ ಸೂಪರ್ ಜಾಯಿಂಟ್ಸ್ ಮತ್ತು ಅಹಮದಾಬಾದ್ ಟೈಟನ್ಸ್ ಈ ಬಾರಿ ಐಪಿಎಲ್‌ನಲ್ಲಿ ಭಾಗಿಯಾಗುತ್ತಿರುವ ಎರಡು ಹೊಸ ಫ್ರಾಂಚೈಸಿಗಳಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications