Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಖಲೀಲ್ ಅಹ್ಮದ್‌ಗೆ 5.25 ಕೋಟಿಗೆ ಗಾಳ ಹಾಕಿದ ಡೆಲ್ಲಿ, ಸೈನಿ ರಾಜಸ್ತಾನ್ ರಾಯಲ್ಸ್ ಪಾಲು

Khaleel and saini

ಭಾರತದ ಭವಿಷ್ಯದ ಬೌಲರ್‌ಗಳಾದ ನವದೀಪ್ ಸೈನಿ ಮತ್ತು ಎಡಗೈ ಬೌಲರ್‌ ಖಲೀಲ್ ಅಹ್ಮದ್‌ ಕ್ರಮವಾಗಿ ರಾಜಸ್ತಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹರಾಜಾಗಿದ್ದಾರೆ.

ರಾಜಸ್ತಾನ ಮೂಲದ ಬೌಲರ್ ಖಲೀಲ್ ಅಹ್ಮದ್ ಎಸ್‌ಆರ್‌ಎಚ್‌ನ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದನು. ಆದ್ರೆ ಐಪಿಎಲ್ 2022ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪಾಲಾದ ಖಲೀಲ್ 5.25 ಕೋಟಿ ರೂಪಾಯಿಗೆ ಕ್ಯಾಪಿಟಲ್ಸ್ ತಂಡಕ್ಕೆ ಹರಾಜಾಗಿದ್ದಾರೆ.

24 ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿರುವ ಖಲೀಲ್ ಅಹ್ಮದ್ 8.68 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಆರ್‌ಆರ್‌ ಮತ್ತು ಎಸ್‌ಆರ್‌ಎಚ್ ತಂಡದಲ್ಲಿ ಆಡಿದ್ದ ಈತ ಈ ಬಾರಿ ಡೆಲ್ಲಿ ಪರ ಆಡಲಿದ್ದಾರೆ.

ಇನ್ನು ಆರ್‌ಸಿಬಿ ತಂಡದ ಸ್ಪೀಡ್‌ಸ್ಟರ್ ನವದೀಪ್ ಸೈನಿ 2022ರ ಐಪಿಎಲ್ ಸೀನಸ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆಡಲಿದ್ದಾರೆ. 2.6 ಕೋಟಿ ರೂಪಾಯಿಗೆ ಆರ್ಆರ್ ತಂಡದ ಪಾಲಾಗಿರುವ ಸೈನಿ ಇದುವರೆಗೂ 28 ಐಪಿಎಲ್ ಪಂದ್ಯಗಳನ್ನ ಆಡಿದ್ದು 17 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಪರ ಹೆಚ್ಚು ಪಂದ್ಯಗಳನ್ನಾಡದ ಈತನನ್ನ ರೀಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಡಲಾಗಿತ್ತು.

ಪರಿಣಾಮ ಸೈನಿ ಈ ಬಾರಿ ಐಪಿಎಲ್ 15ನೇ ಸೀಸನ್‌ನಲ್ಲಿ ಆರ್‌ಆರ್ ಪರ ಕಣಕ್ಕಿಳಿಯಲಿದ್ದಾರೆ.

Story first published: Sunday, February 13, 2022, 14:21 [IST]
Other articles published on Feb 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+