Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾದ ಅಲ್‌ರೌಂಡರ್ ಶಿವಂ ದುಬೆ: 4 ಕೋಟಿ ರೂಪಾಯಿ ಬಿಡ್

Shivam dube

ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಮೆಗಾ ಹರಾಜು ಪ್ರಕ್ರಿಯೆಯ 2ನೇ ದಿನದಲ್ಲಿ ಯುವ ಆಲ್‌ರೌಂಡರ್‌ ಶಿವಂ ದುಬೆ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್‌ ಪಾಳಯವನ್ನ ಸೇರಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಸ್ಪರ್ಧೆಯಲ್ಲಿ ಮೂಲ ಬೆಲೆ 50 ಲಕ್ಷ ರೂಪಾಯಿ ಹೊಂದಿದ್ದ ಶಿವಂ ದುಬೆ ಭರ್ಜರಿ 4 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೇರಿದ್ದಾರೆ. ಈ ಮೂಲಕ ಚೆನ್ನೈ ಆಲ್‌ರೌಂಡರ್ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆಡಿದ್ದ ಶಿವಂ ದುಬೆ ಅದಕ್ಕೂ ಮೊದಲಿನ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ರು. ಆದ್ರೆ 2022ರ ಐಪಿಎಲ್ ಸೀಸನ್‌ನಲ್ಲಿ ದುಬೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ.

ಒಂದು ಕಡೆ ಶಿವಂ ದುಬೆ 4 ಕೋಟಿ ರೂಪಾಯಿ ಹರಾಜು ಮೊತ್ತ ಪಡೆದ ಖುಷಿ ಒಂದೆಡೆಯಾದ್ರೆ, ಶಿವಂ ದುಬೆ ಮತ್ತು ಆತನ ಪತ್ನಿ ಪೋಷಕರಾದ ಖುಷಿಯಲ್ಲಿದ್ದಾರೆ. ಶಿವಂ ದುಬೆ ಅವರ ಪತ್ನಿ ಗಂಡು ಮಗುವಿಗೆ ಇಂದು ಜನ್ಮ ನೀಡಿದ್ದಾರೆ. ಈ ಮೂಲಕ ಆಲ್‌ರೌಂಡರ್ ದುಬೆಗೆ ಒಂದೇ ದಿನ ಎರಡು ಸಿಹಿ ಸುದ್ದಿ ಮೂಲಕ ದುಪ್ಪಟ್ಟು ಖುಷಿಯಾಗಿದೆ.

ಶಿವಂ ದುಬೆ ಕಳೆದ ಐಪಿಎಲ್ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಪರ 9 ಪಂದ್ಯಗಳಲ್ಲಿ 230 ರನ್ ಕಲೆಹಾಕಿದ್ದಾರೆ. ರಾಯಲ್ಸ್‌ ಗೆ ಐಪಿಎಲ್ 2021ರ ಸೀಸನ್‌ನಲ್ಲಿ 4.40 ಕೋಟಿಗೆ ಬಿಕರಿಯಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೇ 64 ರನ್ ಕಲೆಹಾಕಿದ್ರು. ಇದು ಕಳೆದ ಸೀಸನ್‌ನಲ್ಲಿ ಅವರ ಏಕೈಕ ಅರ್ಧಶತಕವಾಗಿತ್ತು.

Story first published: Sunday, February 13, 2022, 15:46 [IST]
Other articles published on Feb 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+