IPL 2022: ಈ 3 ತಂಡಗಳು ಶಾರೂಖ್ ಖಾನ್ ಮೇಲೆ ಸಖತ್ ಬಿಡ್ ಮಾಡಲಿವೆ

ಐಪಿಎಲ್ 15ನೇ ಸೀಸನ್‌ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದ್ದು, ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಬಿಡ್ ನಡೆಯಲಿದೆ. ಈ ಬಾರಿ 10 ಫ್ರಾಂಚೈಸಿಗಳು 590 ಆಟಗಾರರ ಮೇಲೆ ಬಿಡ್ ಮಾಡಲಿವೆ.
ಒಟ್ಟು ಹರಾಜಿನಲ್ಲಿ ಶಾರ್ಟ್ ಲಿಸ್ಟ್ ಆಗಿರುವ ಆಟಗಾರರಲ್ಲಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರು ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರಾಗಿದ್ದಾರೆ. ಮೆಗಾ ಹರಾಜಿನ ದಿನ ಹತ್ತಿವಾಗುತ್ತಿದ್ದಂತೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂತ್ರಗಳನ್ನು ವೇಗಗೊಳಿಸುತ್ತಿವೆ. ಯಾವ ಆಟಗಾರನ ಮೇಲೆ ಬಿಡ್ ಮಾಡಬೇಕು, ಎಷ್ಟು ಖರ್ಚು ಮಾಡಬೇಕು ಎಂಬ ನಿಖರವಾದ ಲೆಕ್ಕಾಚಾರ ಹಾಕಿಕೊಳ್ಳುತ್ತಾರೆ.
ತಮಿಳುನಾಡು ಮೂಲದ ಸ್ಫೋಟಕ ಆಟಗಾರ ಶಾರೂಖ್ ಖಾನ್ ಮೇಲೆ ಅನೇಕ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಆದ್ರೆ ಈ ಮೂರು ತಂಡಗಳು ಮಾತ್ರ ಶಾರೂಕ್ ಖಾನ್‌ರನ್ನ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಸಾಕಷ್ಟು ಪ್ರಯತ್ನ ಪಡಲಿವೆ.
26 ವರ್ಷ ವಯಸ್ಸಿನ ದೇಶೀಯ ಸೂಪರ್‌ಸ್ಟಾರ್ ಶಾರೂಕ್ ಕಳೆದ ಐಪಿಎಲ್ ಸೀಸನ್‌ನಲ್ಲಿ (2021) ಪಂಜಾಬ್ ಕಿಂಗ್ಸ್ 5.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಶಾರೂಕ್ ಆಡಿದ 11 ಪಂದ್ಯಗಳಲ್ಲಿ 153 ರನ್ ಕಲೆಹಾಕಿದ್ದು, 134.21ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ರು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಧೋನಿ ರೀತಿಯ ಫಿನಿಷಿಂಗ್ ಟಚ್
ಕಳೆದ ವರ್ಷ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ಮಿಂಚಿನ ಬ್ಯಾಟಿಂಗ್ ನಡೆಸಿದ ತಮಿಳುನಾಡು ಬ್ಯಾಟ್ಸ್‌ಮನ್ ಶಾರೂಖ್ ಖಾನ್ ಫೈನಲ್‌ನಲ್ಲಿ ಸಿಕ್ಸರ್ ಸಿಡಿಸಿ ಐತಿಹಾಸಿಕ ಗೆಲುವನ್ನ ತಂದುಕೊಟ್ಟರು. ಶಾರೂಖ್‌ರ ಎಪಿಕ್ ರನ್ ಚೇಸ್ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಫಿನಿಷಿಂಗ್ ಸ್ಟೈಲ್ ನೆನಪಿಸುವಂತಿತ್ತು.
15 ಎಸೆತಗಳಲ್ಲಿ 33 ರನ್ ಸಿಡಿಸಿದ ಶಾರೂಖ್ ಖಾನ್ ಕೊನೆಯ ಎಸೆತವನ್ನ ಸಿಕ್ಸರ್‌ಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವನ್ನ ತಂದುಕೊಟ್ರು. ಅಂತಿಮ ಓವರ್‌ನಲ್ಲಿ 16 ರನ್ ತಲುಪುವಲ್ಲಿ ತಮಿಳುನಾಡು ಯಶಸ್ವಿಯಾಯಿತು. ಅದ್ರಲ್ಲೂ ಕೊನೆಯ ಎಸೆತದಲ್ಲಿ 5ರನ್‌ಗಳ ಒತ್ತಡವನ್ನ ಮೆಟ್ಟಿ ನಿಂತು ಶಾರೂಕ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ರು. ಜೊತೆಗೆ ತಮಿಳುನಾಡು ಮೂರನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನ ಮುಡಿಗೇರಿಸಿಕೊಂಡಿತು.
ಐಪಿಎಲ್‌ನಲ್ಲಿ 40 ಲಕ್ಷ ರೂಪಾಯಿ ಮೂಲ ಬೆಲೆಯನ್ನ ಹೊಂದಿರುವ ಶಾರೂಖ್ ಖಾನ್ ಮೇಲೆ ಈ ಕೆಳಗಿನ ಮೂರು ತಂಡಗಳು ಕಣ್ಣಿಟ್ಟಿವೆ.

ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ಧೋನಿ ಬಹುದೊಡ್ಡ ಅಭಿಮಾನಿಯಾಗಿರುವ ಶಾರೂಖ್ ಖಾನ್ ತನ್ನ ಸ್ಫೂರ್ತಿ ಧೋನಿ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ಎಂ.ಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಮಿಳುನಾಡು ಮೂಲದ ಈ ಯುವ ಆಟಗಾರನ ಮೇಲೆ ಬಿಡ್ ಮಾಡುವ ಸಾಧ್ಯತೆ ಹೆಚ್ಚಿದೆ.
ಅದ್ರಲ್ಲೂ ಧೋನಿ ಯುವ ಆಟಗಾರರನ್ನ ಒಳಗೊಂಡ ತಂಡವನ್ನ ಆಡಿಸಲು ಇಷ್ಟಪಡುತ್ತಾರೆ. ಧೋನಿ ಮಾರ್ಗದರ್ಶನದಲ್ಲಿ ಶಾರೂಖ್ ಖಾನ್ ಮತ್ತಷ್ಟು ಶೈನ್ ಆಗಬಹುದು. ಹಾರ್ಡ್ ಹಿಟ್ಟರ್ ಆಗಿರುವ ಶಾರೂಕ್ ಸಿಎಸ್‌ಕೆ ಲೈನ್ ಅಪ್‌ಗೆ ಸೂಕ್ತವಾಗಿದ್ದಾರೆ. ಇದರ ಜೊತೆಗೆ ಆಫ್ ಬ್ರೇಕ್ ಬೌಲ್ ಮಾಡುವ ಸಾಮರ್ಥ್ಯ ಕೂಡ ಇವನಲ್ಲಿದೆ. ಹೀಗಾಗಿ ಈತನನ್ನ ಆಲ್‌ರೌಂಡರ್ ಆಗಿಯೂ ತಂಡ ಗುರುತಿಸಬಹುದು.
ಇದಕ್ಕಿಂತ ಹೆಚ್ಚಾಗಿ ಶಾರೂಖ್ ಖಾನ್ ಚೆನ್ನೈನಿಂದ ಬಂದವರು ಜೊತೆಗೆ ಅಲ್ಲಿನ ಪಿಚ್ ಮರ್ಮವನ್ನು ಸಹ ಅರಿತಿರುತ್ತಾರೆ. ಈ ವರ್ಷ ಚೆಪಾಕ್‌ನಲ್ಲಿ ಪಂದ್ಯಗಳು ನಡೆಯದಿದ್ದರೂ, ಭವಿಷ್ಯಕ್ಕಾಗಿ ಅವರನ್ನು ತಂಡದಲ್ಲಿ ಆಯ್ಕೆ ಮಾಡಬಹುದು. ಶಾರುಖ್ ಅವರು ತಮ್ಮ ತವರು ಫ್ರಾಂಚೈಸಿಯಿಂದ ಆಯ್ಕೆಯಾದರೆ ಹೆಚ್ಚು ಖುಷಿಪಡುತ್ತಾರೆ.
Chennai Super Kings Squad For IPL 2022: ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಸ್ಕ್ವಾಡ್ ಹೀಗಿದೆ

ರಾಜಸ್ತಾನ್ ರಾಯಲ್ಸ್
ರಾಜಸ್ತಾನ ರಾಯಲ್ಸ್ ತಂಡ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲೇ ಟ್ರೋಫಿ ಎತ್ತಿಹಿಡಿದ ಬಳಿಕ ಎಂದಿಗೂ ಮತ್ತೆ ಫೈನಲ್ ತಲುಪುವ ಸಾಹಸ ಮಾಡಲಿಲ್ಲ. ತಂಡವು 12 ಸೀಸನ್‌ಗಳಲ್ಲಿ ಮೂರು ಬಾರಿ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ. ಎರಡು ವರ್ಷಗಳ ನಿಷೇಧದ ನಂತರ 2018ರಲ್ಲಿ ಫ್ರಾಂಚೈಸಿ ಮರಳಿದ್ದು, 2021ರಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಅವರ ಖಾಯಂ ನಾಯಕ ಎಂದು ಹೆಸರಿಸಲಾಯಿತು.
ಇಬ್ಬರು ದೇಶೀಯ ಆಟಗಾರರು ಮತ್ತು ಓರ್ವ ವಿದೇಶಿ ಆಟಗಾರನನ್ನ RR ರೀಟೈನ್ ಮಾಡಿಕೊಂಡಿದೆ. 62 ಕೋಟಿ ರೂಪಾಯಿ ಉಳಿಸಿಕೊಂಡು ಐಪಿಎಲ್ ಹರಾಜು ಪ್ರವೇಶಿಸಲಿದೆ.
ತಂಡದ ಯುವ ನಾಯಕ, ಸ್ಫೋಟಕ ಆಟಗಾರ ಸಂಜು ಸ್ಯಾಮನ್ಸ ರಾಜಸ್ತಾನ್ ರಾಯಲ್ಸ್ ಪರ ರೀಟೈನ್ ಆದ ಮೊದಲ ಪ್ಲೇಯರ್ ಆಗಿದ್ದು, ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ರೀಟೈನ್ ಆದ ಎರಡನೇ ಆಟಗಾರನಾಗಿದ್ದಾನೆ. ಇನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಯಶಸ್ವಿ ಜೈಸ್ವಾಲ್ ರೀಟೈನ್ ಆದ ಮೂರನೇ ಆಟಗಾರನಾಗಿದ್ದಾನೆ.
ರಾಯಲ್ಸ್ ಕೂಡ ಹಾರ್ಡ್ ಹಿಟ್ಟಿಂಗ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅನ್ನು ಎದುರು ನೋಡುತ್ತಿದೆ. ಹೀಗಾಗಿ ಶಾರೂಖ್ ಖಾನ್ ಗಾಗಿ ರಾಜಸ್ತಾನ್ ರಾಯಲ್ಸ್ ಸಾಕಷ್ಟು ಬಿಡ್ ಮಾಡುವ ಸಾಧ್ಯತೆ ಹೆಚ್ಚಿದೆ.
ಕೊಹ್ಲಿ ಈಗಲೂ ನಾಯಕನೇ, ಆತ ನಾಯಕನಲ್ಲ ಎಂದು ಈ ಐವರು ಹೇಳಬೇಕಷ್ಟೇ ಎಂದ ಜಡೇಜಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು, ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಿಸಿ ಹೊರನಡೆದಿದ್ದಾರೆ. ಹೀಗಾಗಿ ಎಬಿಡಿಯ ಫಿನಿಷಿಂಗ್ ಟಚ್ ಇಲ್ಲದ ಆರ್‌ಸಿಬಿ ಓರ್ವ ಫಿನಿಷರ್ ಅನ್ನು ಹುಡುಕಾಡುತ್ತಿದೆ.
ಪ್ರತಿ ಬಾರಿಯ ಐಪಿಎಲ್ ಸೀಸನ್‌ನಲ್ಲೂ ತಂಡದ ಮಧ್ಯಮ ಕ್ರಮಾಂಕದ ಬಲವು ಯಾವಾಗಲೂ ಪ್ರಶ್ನಾರ್ಹವಾಗಿದೆ . ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಂತರ, ಎಬಿಡಿ ಆಡುತ್ತಿದ್ದ ಪಾತ್ರಕ್ಕೆ ಹೊಂದಿಕೊಳ್ಳುವ ಆಟಗಾರನ ಅಗತ್ಯವಿದೆ.
2020 ರಲ್ಲಿ ಪಂಜಾಬ್ ಕಿಂಗ್ಸ್ ಜೊತೆಗೆ ಶಾರೂಖ್ ಖಾನ್ ಮೇಲೆ ಬಿಡ್ಡಿಂಗ್ ಮಾಡಿದ್ದ ಆರ್‌ಸಿಬಿ, ಯಾವಾಗ ಬಿಡ್ ಐದು ಕೋಟಿ ರೂಪಾಯಿ ದಾಟಿತೋ, ಬಿಡ್ ಕೈ ಬಿಟ್ಟಿತು. ಹೀಗಾಗಿ ಪಂಜಾಬ್ ಪರ ಶಾರೂಖ್ ಆಡಿದ್ರು. ಆದ್ರೆ ಈ ಬಾರಿ ಶಾರೂಕ್ ಖಾನ್ ಮೇಲೆ ಆರ್‌ಸಿಬಿ ಹೆಚ್ಚು ಬಿಡ್ ಮಾಡುವ ಸಾಧ್ಯತೆ ಹೆಚ್ಚಿದೆ.
ಆರ್‌ಸಿಬಿ ಯಾವಾಗಲೂ ಮ್ಯಾಚ್ ವಿನ್ನರ್‌ಗಳನ್ನ ತಂಡದಲ್ಲಿ ಹೊಂದಲು ಬಯಸುತ್ತದೆ. ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ನಂತಹ ಆಟಗಾರರು ಬೇಕಾಗಿದ್ದು, ಶಾರೂಕ್ ಭವಿಷ್ಯದ ಆಟಗಾರನಾಗಿ ಉಳಿಸಿಕೊಳ್ಳಲು ಆರ್‌ಸಿಬಿ ಯೋಜಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications