For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: RCB ಸೇರಿದ ಕರ್ನಾಟಕದ ಯುವ ಪ್ರತಿಭೆ ಅನೀಶ್ವರ್

ವಿಶ್ವದ ಅತಿದೊಡ್ಡ ಟಿ 20 ಲೀಗ್ 10 ಹರಾಜು ಪ್ರಕ್ರಿಯೆ ಇಂದು ಮುಕ್ತಾಯ ಕಾಣುವುದರೊಂದಿಗೆ ಯಾವ ತಂಡಕ್ಕೆ ಯಾವ ಆಟಗಾರರು ಸೇರ್ಪಡೆಯಾಗಿದ್ದಾರೆ ಎಂಬುದು ಬಹುತೇಕ ಅಂತಿಮಗೊಳ್ಳಲಿದೆ. ಮೊದಲ ದಿನದ ಹರಾಜಿನಲ್ಲೇ ಕರ್ನಾಟಕ ಮೂಲದ ಆಟಗಾರರಿಗೆ ಭರ್ಜರಿ ಬೆಲೆ ಸಿಕ್ಕಿತ್ತು. ಇಂದು ಕೂಡಾ ಬಹುತೇಕ ಕರ್ನಾಟಕದ ಎಲ್ಲಾ ಆಟಗಾರರು ಉತ್ತಮ ಬೆಲೆಗೆ ಸೇಲ್ ಆಗಿದ್ದಾರೆ.

ಐಪಿಎಲ್ 2022 ಹರಾಜಿನ ನಂತರ ತಂಡಗಳು ಹೀಗಿವೆ

ಗೌತಮ್ ಮಾತ್ರ ಕಳೆದ ವರ್ಷ ಕೋಟಿ ರು ಬೆಲೆಗೆ ಸೇಲ್ ಆಗಿದ್ದವರು ಈ ಬಾರಿ ಲಕ್ಷಕ್ಕೆ ಸೇಲ್ ಆಗಿದ್ದಾರೆ. ಈ ಬಾರಿ ಎರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಂಡಿದ್ದು, ಎಲ್ಲರಿಗೂ ತಿಳಿದಿರುವ ವಿಷಯ, ಹೊಸ ತಂಡಗಳು ಯುವ ಆಟಗಾರರನ್ನು ಆಯ್ಕೆ ಮಾಡಿಕೊಂಡು ಹೊಸ ತಂಡ ಕಟ್ಟುವತ್ತ ಚಿತ್ತ ನೆಟ್ಟಿದ್ದರೆ, ಬೆಂಗಳೂರು ಫ್ರಾಂಚೈಸಿ ಮತ್ತೊಮ್ಮೆ ಸ್ಥಳೀಯ ಆಟಗಾರರಿಗೆ ಬಿಡ್ ಮಾಡದೆ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿತ್ತು, ಆದರೆ, ಕೊನೆ ಹಂತದಲ್ಲಿ ಕರ್ನಾಟಕದ ಯುವ ಪ್ರತಿಭೆ ಅನೀಶ್ವರ್ ಗೌತಮ್ ನರೇಂದ್ರ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ.

ಕರ್ನಾಟಕದ ಎಡಗೈ ಸ್ಪಿನ್ನರ್

ಕರ್ನಾಟಕದ ಎಡಗೈ ಸ್ಪಿನ್ನರ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಆಟಗಾರರ ಹರಾಜು ಪಟ್ಟಿಯನ್ನು ಫೆಬ್ರವರಿ 1 ರಂದು ಪ್ರಕಟಿಸಲಾಯಿತು ಮತ್ತು ಒಟ್ಟು 590 ಕ್ರಿಕೆಟಿಗರನ್ನು 1214 ಆಟಗಾರರ ಮೂಲ ಪಟ್ಟಿಯಿಂದ ಹರಾಜಿನ ಸುತ್ತಿಗೆ ಹೋಗಲು ಇಚ್ಛೆಯ ಪಟ್ಟಿಯನ್ನು ಆಧರಿಸಿ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಮುಖ್ಯವಾಗಿ ಕೊನೆ ಹಂತದಲ್ಲಿ 10 ಹೊಸ ಆಟಗಾರರನ್ನು ಸೇರಿಸಲಾಯಿತು, ಅದರಲ್ಲಿ 3 ಆಸ್ಟ್ರೇಲಿಯನ್ನರು ಮತ್ತು 7 ಭಾರತೀಯರು ಸೇರಿದ್ದಾರೆ. ಫೆ.13ರಂದು ಎರಡನೇ ಸುತ್ತಿನ ಹರಾಜು ನಡೆಸಲಾಯಿತು.

600 ಆಟಗಾರರಲ್ಲಿ 229 ಆಟಗಾರರನ್ನು ಕ್ಯಾಪ್ ಮಾಡಲಾಗಿದೆ, 364 ಅನ್ ಕ್ಯಾಪ್ಡ್ ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರು. ಅಲ್ಲದೆ, 600 ಆಟಗಾರರಲ್ಲಿ 377 ಭಾರತೀಯ ಆಟಗಾರರು ಮತ್ತು ಉಳಿದ 223 ವಿದೇಶಿ ಆಟಗಾರರಿದ್ದರು. ಕರ್ನಾಟಕದ ಎಡಗೈ ಸ್ಪಿನ್ನರ್, ಬ್ಯಾಟ್ಸ್ ಮನ್ ಅನೀಶ್ವರ್ ಗೌತಮ್ ಅವರು ಮೂಲ ಬೆಲೆಗೆ ಸೇಲ್ ಆಗಿದ್ದಾರೆ.

20 ಲಕ್ಷ ರೂಪಾಯಿ ಮೂಲಬೆಲೆಯಲ್ಲಿದ್ದ ಕರ್ನಾಟಕದವರು

20 ಲಕ್ಷ ರೂಪಾಯಿ ಮೂಲಬೆಲೆಯಲ್ಲಿದ್ದ ಕರ್ನಾಟಕದವರು

ಐಪಿಎಲ್ ಹರಾಜಿನಲ್ಲಿ ಕನಿಷ್ಠ ಮೂಲ ಬೆಲೆಯೆಂದರೆ ಅದು 20 ಲಕ್ಷ ರೂಪಾಯಿ. ಕರ್ನಾಟಕದ ಒಟ್ಟು 22 ಆಟಗಾರರ 20 ಲಕ್ಷ ಮೂಲ ಬೆಲೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಅಭಿನವ್ ಮನೋಹರ್, ಕೆಸಿ ಕಾರ್ಯಪ್ಪ, ಶ್ರೇಯಸ್ ಗೋಪಾಲ್, ಜೆ ಸುಜಿತ್, ರೋಹನ್ ಕದಂ, ಪ್ರವೀಣ್ ದುಬೆ, ಲವ್ನಿತ್ ಸಿಸೋಡಿಯಾ, ವೈಶಾಕ್ ವಿಜಯ್ ಕುಮಾರ್, ಅನೀಶ್ವರ್ ಗೌತಮ್, ಬಿಆರ್ ಶರತ್, ಕೆಎಲ್ ಶ್ರೀಜಿತ್, ಕುಶಾಲ್ ವಾಧ್ವಾನಿ, ಆರ್ ಸಮರ್ಥ್, ಶುಭಾಂಗ್ ಹೆಗ್ಡೆ, ರೋನಿತ್ ಮೋರೆ, ವಿದ್ಯಾಧರ್ ಪಾಟೀಲ್, ವಿ ಕೌಶಿಕ್, ಎಂ ವೆಂಕಟೇಶ್, ಅನಿರುದ್ಧ್ ಜೋಶಿ, ಎಂಬಿ ದರ್ಶನ್, ಮನೋಜ್ ಭಾಂಡಗೆ, ದಿಕ್ಷಾಂಶು ನೇಗಿ ಇದ್ದರು.

ಗುಜರಾತ್ ತಂಡ ಸೇರಿದ ಕರ್ನಾಟಕದ ಅಭಿನವ್ ಮನೋಹರ್ ಬಗ್ಗೆ ತಿಳಿದುಕೊಳ್ಳಿ

ಟ್ವೀಟ್ ಮಾಡಿ ಅನೀಶ್ವರ್ ಸ್ವಾಗತಿಸಿದ ಆರ್ ಸಿ ಬಿ

20 ಲಕ್ಷ ರೂಪಾಯಿ ಮೂಲಬೆಲೆಗೆ ಆಯ್ಕೆಯಾದ ಕರ್ನಾಟಕ ಮೂಲದ ಅನೀಶ್ವರ್ ಗೌತಮ್ ಅವರನ್ನು ಸ್ವಾಗತಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇತ್ತೀಚೆಗೆ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಖುಷಿಯಲ್ಲಿದ್ದ ಅನೀಶ್ವರ್‌ಗೆ ಇಂದು ಆರ್‌ಸಿಬಿಗೆ ಆಯ್ಕೆಯಾಗಿದ್ದು, ಡಬ್ಬಲ್ ಖುಷಿ ತಂದಿದೆ ಎನ್ನಬಹುದು. ಎಲೈಟ್ ಸಿ ಗುಂಪಿನಲ್ಲಿರುವ ಕರ್ನಾಟಕಕ್ಕೆ ಜಮ್ಮು ಮತ್ತು ಕಾಶ್ಮೀರ, ರೈಲ್ವೇಸ್ ಹಾಗೂ ಪಾಂಡಿಚೇರಿ ಕೂಡಾ ಇದೆ.

ಅನೀಶ್ವರ್ ಅಂಕಿ ಅಂಶ

ಅನೀಶ್ವರ್ ಅಂಕಿ ಅಂಶ

ಬೆಂಗಳೂರಿನಲ್ಲಿ ಜನವರಿ 16, 2003ರಂದು ಜನಿಸಿದ ಅನೀಶ್ವರ್ ಗೌತಮ್ ನರೇಂದ್ರ ಅವರು ಚಿಕ್ಕಮಗಳೂರು ಮೂಲದವರು. ಎಡಗೈ ಬ್ಯಾಟ್ಸ್ ಮನ್, ಎಡಗೈ ಸಾಂಪ್ರದಾಯಿಕ ಸ್ಪಿನ್ ಬೌಲರ್ ಆಗಿದ್ದಾರೆ. ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿರುವ ಅನೀಶ್ವರ್‌ಗೆ ಅವಕಾಶ ಸಿಕ್ಕಿದ್ದು ಕಡಿಮೆ, ಎರಡು ಪಂದ್ಯಗಳಾಡಿದ್ದು, 133 ಸ್ಟ್ರೈಕ್ ರೇಟ್ ನಲ್ಲಿ 12 ರನ್ ಗಳಿಸಿದ್ದಾರೆ. ಐರ್ಲೆಂಡ್ ವಿರುದ್ಧ 2/11 ವಿಕೆಟ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 2/37 ಗಳಿಸಿದ್ದರು. ಇಂಡಿಯಾ ಬಿ ತಂಡದ ಪರ ಆಡಿ ಔಟಾಗದೆ 54, ಬಾಂಗ್ಲಾದೇಶ ವಿರುದ್ಧ 1/19 ವಿಕೆಟ್ ಗಳಿಸಿದ್ದಾರೆ.

Suresh Raina ಪರಿಸ್ಥಿತಿ ನೋಡಿ ನೊಂದ ಅಭಿಮಾನಿಗಳು | Oneindia Kannada

ಬೆಂಗಳೂರಲ್ಲಿ ಬಿಬಿಎ ವ್ಯಾಸಂಗ

ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸದ್ಯ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಏಕೈಕ ಕರ್ನಾಟಕ ಆಟಗಾರ ಎನಿಸಿಕೊಂಡಿದ್ದ ಅನೀಶ್ವರ್ ಅವರು ಕೋವಿಡ್ ಕಾಲದಲ್ಲಿ ಬೆಂಗಳೂರು ತೊರೆದು ತಾಯಿ ಶ್ವೇತಾ ಗೌತಮ್ ತವರು ಊರು ಚಿಕ್ಕಮಗಳೂರು ಸೇರಿದ್ದರು. ಕಾಫಿ ತೋಟಗಳ ನಡುವೆ ಮನೆ ಅಂಗಳದಲ್ಲೇ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದರು. ಹೈದರಾಬಾದಿನಿಂದ ಬೌಲಿಂಗ್ ಮಷಿನ್ ತರೆಸಿಕೊಂಡು ಬ್ಯಾಟಿಂಗ್ ಅಭ್ಯಾಸ ಮಾಡಿದ್ದರಂತೆ. ಮನೆಯವರ ಬೆಂಬಲದಿಂದ ಭಾರತ ತಂಡಕ್ಕೆ ಆಯ್ಕೆಯಾಗಿದ್ದಲ್ಲದೆ, ವಿಶ್ವಕಪ್ ಗೆದ್ದ ತಂಡದ ಭಾಗವೆನಿಸಿಕೊಂಡರು. ಇತ್ತೀಚೆಗೆ ಪ್ರಕಟಗೊಂಡ ಕರ್ನಾಟಕ ರಣಜಿ ತಂಡಕ್ಕೂ ಆಯ್ಕೆಯಾಗಿದ್ದಾರೆ. ಈಗ ಆರ್ ಸಿ ಬಿ ಪರ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದು, ದಿಗ್ಗಜ ಕ್ರಿಕೆಟರ್ಸ್ ಜೊತೆಯಲ್ಲಿ ಆಡುವ ಅವಕಾಶಕ್ಕಾಗಿ ಕಾದಿದ್ದಾರೆ.

Story first published: Monday, February 14, 2022, 9:33 [IST]
Other articles published on Feb 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+