IPL Auction 2023: ಎಲ್‌ಎಸ್‌ಜಿ ತಂಡಕ್ಕೆ 16 ಕೋಟಿ ರುಪಾಯಿಗೆ ಹರಾಜಾದ ನಿಕೋಲಸ್ ಪೂರನ್ ಪ್ರತಿಕ್ರಿಯೆ

2023ರ ಐಪಿಎಲ್ ಮಿನಿ ಹರಾಜು ಹಲವು ಆಟಗಾರರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದೆ. ಸ್ಯಾಮ್ ಕರನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಕ್ಯಾಮೆರೂನ್ ಗ್ರೀನ್ ಕೋಟಿ ಕೋಟಿ ಹಣ ಪಡೆದುಕೊಂಡರು. ಈ ಆಟಗಾರರು ಅಧಿಕ ಮೊತ್ತಕ್ಕೆ ಹರಾಜಾಗುತ್ತಾರೆ ಎಂದು ಮೊದಲೇ ನಿರ್ಧರಿಸಲಾಗಿತ್ತು.
ಆದರೆ, 2023ರ ಮಿನಿ ಹರಾಜಿನಲ್ಲಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದು ಮಾತ್ರ ನಿಕೋಲಸ್ ಪೂರನ್ ಹರಾಜು. ವೆಸ್ಟ್ ಇಂಡೀಸ್ ಬ್ಯಾಟರ್ ನಿಕೋಲಸ್ ಪೂರನ್‌ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ 16 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತು.
2023ರ ಮಿನಿ ಹರಾಜಿನಲ್ಲಿ ನಿಕೋಲಸ್ ಪೂರನ್ ನಾಲ್ಕನೇ ಅತಿ ಹೆಚ್ಚು ದುಬಾರಿ ಆಟಗಾರ ಎನಿಸಿಕೊಂಡರು. ಪೂರನ್ ಅವರನ್ನು ಖರೀದಿ ಮಾಡಲು, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ಆಸಕ್ತಿ ತೋರಿದವು. ಆದರೆ, ಅಂತಿಮವಾಗಿ ನಿಕೋಲಸ್ ಪೂರನ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡರು. ಇದು ವೆಸ್ಟ್ ಇಂಡೀಸ್ ಆಟಗಾರನೊಬ್ಬ ಪಡೆದ ದುಬಾರಿ ಮೊತ್ತವಾಗಿದೆ.
ದುಬಾರಿ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಸೇರಿದ ನಂತರ ನಿಕೋಲಸ್ ಪೂರನ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಅಧಿಕೃಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾತನಾಡಿರುವ ನಿಕೋಲಸ್ ಪೂರನ್ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗೆ ಕೃತಜ್ಞತೆ ತಿಳಿಸಿದ್ದಾರೆ.

ಧನ್ಯವಾದ ತಿಳಿಸಿದ ಪೂರನ್
"ನನ್ನ ಮೇಲೆ ನಂಬಿಕೆ ತೋರಿಸಿದ್ದಕ್ಕಾಗಿ ಮತ್ತು ನಿಮ್ಮ ಕುಟುಂಬದ ಭಾಗವಾಗಲು ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು, ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
"ಹೊಸ ಅಧ್ಯಾಯವನ್ನು ಆರಂಭಿಸಲು ಎದುರು ನೋಡುತ್ತಿದ್ದೇನೆ. ನಿಕೋಲಸ್ ಪೂರನ್ ಲಕ್ನೋಗೆ ಬರುತ್ತಿದ್ದಾರೆ ಎಂದು ಸೂಪರ್ ಜೈಂಟ್ಸ್ ಅಭಿಮಾನಿಗಳಿಗೆ" ಹೇಳಿದ್ದಾರೆ.
IPL 2023: ಈ ವಿಚಾರಕ್ಕಾಗಿ ಐಪಿಎಲ್ ಫ್ರಾಂಚೈಸಿಗಳ ಮೇಲೆ ಬಿಸಿಸಿಐ ಅಸಮಾಧಾನ; ವರದಿ

ಧನ್ಯವಾದ ತಿಳಿಸಿದ ಪೂರನ್
"ನನ್ನ ಮೇಲೆ ನಂಬಿಕೆ ತೋರಿಸಿದ್ದಕ್ಕಾಗಿ ಮತ್ತು ನಿಮ್ಮ ಕುಟುಂಬದ ಭಾಗವಾಗಲು ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು, ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
"ಹೊಸ ಅಧ್ಯಾಯವನ್ನು ಆರಂಭಿಸಲು ಎದುರು ನೋಡುತ್ತಿದ್ದೇನೆ. ನಿಕೋಲಸ್ ಪೂರನ್ ಲಕ್ನೋಗೆ ಬರುತ್ತಿದ್ದಾರೆ ಎಂದು ಸೂಪರ್ ಜೈಂಟ್ಸ್ ಅಭಿಮಾನಿಗಳಿಗೆ" ಹೇಳಿದ್ದಾರೆ.

ನಿಕೋಲಸ್ ಪೂರನ್ ಸೇರಿದ ನಾಲ್ಕನೇ ತಂಡ
ನಿಕೋಲಸ್ ಪೂರನ್ 2017ರಲ್ಲಿ ಮೊದಲ ಬಾರಿಗೆ ಐಪಿಎಲ್‌ನ ಭಾಗವಾದರು. ಮುಂಬೈ ಇಂಡಿಯನ್ಸ್ 3 ಕೋಟಿ ರುಪಾಯಿಗೆ ಅವರನ್ನು ಖರೀದಿ ಮಾಡಿತು. ಆದರೆ, ಅವರು ಒಂದು ಪಂದ್ಯವನ್ನು ಆಡಲಿಲ್ಲ. 2019ರಲ್ಲಿ ನಿಕೋಲಸ್ ಪೂರನ್ 4.2 ಕೋಟಿ ರುಪಾಯಿಗೆ ಪಂಜಾಬ್ ಕಿಂಗ್ಸ್ ತಂಡ ಸೇರಿದರು. ಪಂಜಾಬ್ ಕಿಂಗ್ಸ್ ಪರವಾಗಿ ಅವರು ಮೊದಲ ಐಪಿಎಲ್ ಪಂದ್ಯವನ್ನಾಡಿದರು. ಮೂರು ಆವೃತ್ತಿಯಲ್ಲಿ ಅವರು ಪಂಜಾಬ್ ಕಿಂಗ್ಸ್ ಪರವಾಗಿ 26 ಪಂದ್ಯಗಳನ್ನು ಆಡಿದರು.
2022ರ ಮೆಗಾ ಹರಾಜಿನಲ್ಲಿ ನಿಕೋಲಸ್ ಪೂರನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 10.75 ಕೋಟಿ ರುಪಾಯಿಗೆ ಖರೀದಿ ಮಾಡಿತ್ತು. ಆದರೆ, 2022ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿತ್ತು. ಮಿನಿ ಹರಾಜಿನಲ್ಲಿ ಪೂರನ್‌ಗೆ ಅದೃಷ್ಟ ಒಲಿಯಿತು, 16 ಕೋಟಿ ರುಪಾಯಿ ಪಡೆದು, ಹಲವರ ಅಚ್ಚರಿಗೆ ಕಾರಣವಾದರು. ನಿಕೋಲಸ್ ಪೂರನ್ 44 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 151.24 ಸ್ಟ್ರೈಕ್ ರೇಟ್‌ನಲ್ಲಿ ನಾಲ್ಕು ಅರ್ಧ ಶತಕಗಳನ್ನು ಒಳಗೊಂಡಂತೆ 912 ರನ್ ಗಳಿಸಿದ್ದಾರೆ.

2023ರ ಐಪಿಎಲ್‌ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ
ಕೆಎಲ್ ರಾಹುಲ್ (ನಾಯಕ), ಆಯುಷ್ ಬದೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ನಿಕೋಲಸ್ ಪೂರನ್, ಜಯದೇವ್ ಉನಾದ್ಕತ್, ಯಶ್ ಠಾಕೂರ್, ರೊಮಾರಿಯೋ ಶೆಫರ್ಡ್, ಡೇನಿಯಲ್ ಸಾಮ್ಸ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್-ಉಲ್-ಹಕ್, ಯುದ್ವೀರ್ ಸಿಂಗ್ ಚರಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications