
ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಫಿಲ್ ಸಾಲ್ಟ್
ಇಂಗ್ಲೆಂಡ್‌ನ ಬಿಗ್ ಹಿಟ್ಟರ್ ಫಿಲ್ ಸಾಲ್ಟ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರುಪಾಯಿ ಮೂಲ ಬೆಲೆಗೆ ಖರೀದಿ ಮಾಡಿದ್ದು ಉತ್ತಮ ನಿರ್ಧಾರ. ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಫಿಲ್ ಸಾಲ್ಟ್ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. 13 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅವರು 161.2 ಸ್ಟ್ರೈಕ್‌ರೇಟ್‌ನಲ್ಲಿ 245 ರನ್ ಗಳಿಸಿದ್ದಾರೆ.
ಬಿಗ್ ಬ್ಯಾಷ್ ಲೀಗ್‌ನಲ್ಲಿ 30 ಪಂದ್ಯಗಳನ್ನಾಡಿರುವ ಫಿಲ್ ಸಾಲ್ಟ್ 146.51 ಸ್ಟ್ರೈಕ್‌ರೇಟ್‌ನಲ್ಲಿ 671 ರನ್ ಗಳಿಸಿ ಗಮನ ಸೆಳೆದಿದ್ದಾರೆ. 2 ಕೋಟಿ ರುಪಾಯಿಗೆ ಫಿಲ್ ಸಾಲ್ಟ್ ಅವರಂತಹ ಆಟಗಾರರು ಉತ್ತಮ ಆಯ್ಕೆ. ಈಗಾಗಲೇ ಸ್ಫೋಟಕ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಫಿಲ್ ಸಾಲ್ಟ್ ಸೇರ್ಪಡೆ ಮತ್ತಷ್ಟು ಬಲ ನೀಡಿದೆ.
IPL 2023: 16ನೇ ಐಪಿಎಲ್ ಆವೃತ್ತಿ ಆರಂಭದ ದಿನಾಂಕ ಪಕ್ಕಾ?; ಈ ದಿನದಿಂದ ಅದ್ಧೂರಿ ಚಾಲನೆ

ಆದಿಲ್ ರಶೀದ್ ಖರೀದಿಸಿದ ಸನ್ ರೈಸರ್ಸ್ ಹೈದರಾಬಾದ್
ಸನ್‌ರೈಸರ್ಸ್ ಹೈದರಾಬಾದ್ ತಂಡವು 2023ರ ಮಿನಿ ಹರಾಜಿನಲ್ಲಿ ಪರ್ಸ್‌ನಲ್ಲಿ ಹೆಚ್ಚಿನ ಹಣ ಹೊಂದಿದ್ದ ಫ್ರಾಂಚೈಸಿಯಾಗಿತ್ತು. ಅವರು ಇಂಗ್ಲೆಂಡ್‌ನ ಹ್ಯಾರಿಬ್ರೂಕ್‌ರನ್ನು 13.5 ಕೋಟಿ ರುಪಾಯಿ ನೀಡಿ ಖರೀದಿ ಮಾಡಿದರು. ನಂತರ ಅವರು ಇಂಗ್ಲೆಂಡ್‌ನ ಅನುಭವಿ ಸ್ಪಿನ್ನರ್ ಆದಿಲ್ ರಶೀದ್‌ರನ್ನು 2 ಕೋಟಿ ಮೂಲ ಬೆಲೆಗೆ ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.
ರಶೀದ್ ಇಂಗ್ಲೆಂಡ್‌ನ ಅನುಭವಿ ಸ್ಪಿನ್ನರ್ ಆಗಿದ್ದಾರೆ. ರಶೀದ್ ಖಾನ್‌ರನ್ನು ತಂಡದಿಂದ ಬಿಡುಗಡೆ ಮಾಡಿದ ನಂತರ ಸನ್‌ರೈಸರ್ಸ್ ಹೈದರಾಬಾದ್ ಸ್ಪಿನ್ ಬೌಲಿಂಗ್ ದುರ್ಬಲವಾಗಿತ್ತು. ಆದಿಲ್ ರಶೀದ್ ಆಯ್ಕೆ ತಂಡದ ಉತ್ತಮ ನಿರ್ಧಾರವಾಗಿದೆ.

ಅತ್ಯುತ್ತಮ ಬ್ಯಾಟರ್ ನಾರಾಯಣ್ ಜಗದೀಸನ್
ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದ ತಮಿಳುನಾಡು ಬ್ಯಾಟರ್ ಎನ್ ಜಗದೀಸನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ನಾರಾಯಣ್ ಜಗದೀಸನ್ ತಂಡದ ಬ್ಯಾಕಪ್ ಆಟಗಾರನಾಗಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ ಆಡಿದ ಜಗದೀಸನ್ 830 ರನ್ ಗಳಿಸಿದ್ದಾರೆ. . ವೆಂಕಟೇಶ್ ಅಯ್ಯರ್ ಮತ್ತು ಜಗದೀಸನ್ ಅವರ ಎಡಗೈ ಬಲಗೈ ಆರಂಭಿಕ ಸಂಯೋಜನೆಯು ಪವರ್‌ಪ್ಲೇನಲ್ಲಿ ಕೋಲ್ಕತ್ತಾ ತಂಡಕ್ಕೆ ಉತ್ತಮ ಆರಂಭ ನೀಡುತ್ತದೆ.

ಗುಜರಾತ್ ಟೈಟನ್ಸ್ ಸೇರಿದ ಕೇನ್ ವಿಲಿಯಮ್ಸನ್
ಕಳೆದ ಋತುವಿನಲ್ಲಿ 14 ಕೋಟಿ ರುಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದ ಕೇನ್ ವಿಲಿಯಮ್ಸನ್ ಈ ಬಾರಿ ಮೂಲ ಬೆಲೆ 2 ಕೋಟಿ ರುಪಾಯಿಗೆ ಮಾರಾಟವಾಗಿದ್ದಾರೆ. ವಿಲಿಯಮ್ಸನ್ ಅತ್ತುತ್ತಮ ಅನುಭವಿ ಬ್ಯಾಟರ್ ಆಗಿದ್ದು, 2 ಕೋಟಿ ರುಪಾಯಿಗೆ ಖರೀದಿ ಮಾಡಿರುವುದು ಉತ್ತಮ ನಿರ್ಧಾರ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದಾಗಿದ್ದು, ಆಂಕರ್ ಪಾತ್ರವನ್ನು ನಿಭಾಯಿಸಲಿದ್ದಾರೆ.

20 ಲಕ್ಷಕ್ಕೆ ಹರಾಜಾದ ಸಮರ್ಥ ವ್ಯಾಸ್
ಸನ್‌ರೈಸರ್ಸ್ ಹೈದರಾಬಾದ್ ತಂಡ ಸಮರ್ಥ ವ್ಯಾಸ್‌ರನ್ನು 20 ಲಕ್ಷ ರುಪಾಯಿ ಮೂಲ ಬೆಲೆಗೆ ಖರೀದಿ ಮಾಡಿತು. ಸೌರಾಷ್ಟ್ರ ತಂಡದ ಬ್ಯಾಟರ್ ಸಮರ್ಥ ವ್ಯಾಸ್ ಮಧ್ಯಮ ಕ್ರಮಾಂಕದ ವ್ಯಾಟರ್ ಆಗಿದ್ದಾರೆ. ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಅವರು ಫಿನಿಶರ್ ಪಾತ್ರವನ್ನು ನಿಭಾಯಿಸುವ ಸಾಧ್ಯತೆ ಇದೆ.
ವ್ಯಾಸ್ ಈ ವರ್ಷ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಫ್ರಾಂಚೈಸಿಯ ಗಮನ ಸೆಳೆದರು. 20 ಲಕ್ಷ ರುಪಾಯಿಗೆ ಅವರನ್ನು ಖರೀದಿ ಮಾಡಿದ್ದು, ಉತ್ತಮ ಆಯ್ಕೆಗಳಲ್ಲೊಂದಾಗಿದೆ.


Click it and Unblock the Notifications












