Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲಿಮಿನೇಟರ್ ಪಂದ್ಯ: ರಾಜಸ್ಥಾನ್ ವಿರುದ್ಧ ಕೋಲ್ಕತ್ತಾ 25 ರನ್ ಗೆಲುವು

IPL Cricket: Jofra Removes Gill, Kolkata Five Down

ಕೋಲ್ಕತ್ತಾ, ಮೇ 23: ಆಂಡ್ರೆ ರಸೆಲ್ ಅಜೇಯ 49 ರನ್ ಮತ್ತು ನಾಯಕ ದಿನೇಶ್ ಕಾರ್ತಿಕ್ 52 ರನ್ ನೆರವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 25 ರನ್ ಜಯ ಸಾಧಿಸಿದೆ.

ಕೋಲ್ಕತ್ತಾ ನೀಡಿದ್ದ 170 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಪೇರಿಸಿ ಕೋಲ್ಕತ್ತಾ ಎದುರು ತಲೆ ಬಾಗಿತು. ಈ ಸೋಲಿನೊಂದಿಗೆ ರಾಜಸ್ಥಾನ್ ತಂಡದ ಐಪಿಎಲ್ ಹೋರಾಟ ಕೊನೆಗೊಂಡಿದೆ. ರಾಜಸ್ಥಾನ್ ಪರ ನಾಯಕ ರಹಾನೆ (46/41), ಸಂಜು ಸ್ಯಾಮ್ಸನ್ (52/38) ಮಾಡಿದ ಹೋರಾಟ ವ್ಯರ್ಥವಾಯಿತು.

ಈ ಜಯದೊಂದಿಗೆ ಕೋಲ್ಕತ್ತಾ ಕ್ವಾಲಿಫೈಯರ್ 2 ಪಂದ್ಯಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದೆ. ಕ್ವಾಲಿಫೈಯರ್ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

ಐಪಿಎಲ್ 2018ರ ಆವೃತ್ತಿಯ ಎಲಿಮಿನೇಟರ್ ಪಂದ್ಯಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು ಕೋಲ್ಕತ್ತಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಪೇರಿಸಿ ರಾಜಸ್ಥಾನ್ ಗೆ 170 ರನ್ ಗುರಿ ನೀಡಿತ್ತು.

ಸ್ಕೋರ್ ಕಾರ್ಡ್

ಟಾಸ್ ಟೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೋಲ್ಕತ್ತಾ ಆರಂಭದಲ್ಲೇ ಬೇಗನೆ ವಿಕೆಟ್ ಕಳೆದುಕೊಳ್ಳುತ್ತ ಬಂದು ನೀರಸ ಬ್ಯಾಟಿಂಗ್ ಗೆ ಸಾಕ್ಷಿಯಾಯಿತು. 16 ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ 116 ರನ್ ಪೇರಿಸಿತ್ತು. ಆದರೆ ಅಷ್ಟರಲ್ಲಾಗಲೇ ಕೋಲ್ಕತ್ತಾದ 5 ವಿಕೆಟ್ ಗಳು ಉರುಳಿದ್ದವು.

ಸುನೀಲ್ ನರೇನ್ 4 (2), ಕ್ರಿಸ್ ಲಿನ್ 18 (22), ರಾಬಿನ್ ಉತ್ತಪ್ಪ 3 (7), ನಿತೀಶ್ ರಾಣಾ 3 (5) ರನ್ ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ ಸಂಕಟಕ್ಕೀಡಾಗುವಂತಾಯಿತು.

ಕೋಲ್ಕತ್ತಾಕ್ಕೆ ಕೊಂಚ ಬಲ ತುಂಬಿದವರೆಂದರೆ ನಾಯಕ ದಿನೇಶ್ ಕಾರ್ತಿಕ್ ಮಾತ್ರ. 38 ಎಸೆತಗಳನ್ನು ಎದುರಿಸಿದ ಕಾರ್ತಿಕ್ 52 ರನ್ ಪೇರಿಸಿ ಲಾವ್ಲಿನ್ ಓವರ್ ನಲ್ಲಿ ರಹಾನೆಗೆ ಕ್ಯಾಚಿತ್ತ ಪೆವಿಲಿಯನ್ ಗೆ ನಡೆದರು.
ಸುಬ್ ಮಾನ್ ಗಿಲ್ ಅವರೂ 28 ರನ್ ನೀಡಿ ಔಟಾದರು.

ಆಂಡ್ರೆ ರಸೆಲ್ ಅಜೇಯ 49 (25) ರನ್ ಬಾರಿಸಿ ಕೊಂಚ ತಂಡದ ಗೆಲುವಿಗೆ ಸೆಣಸಾಡಿದರು. ಆರಂಭದಲ್ಲಿ ಕೋಲ್ಕತ್ತಾ ಬ್ಯಾಟ್ಸ್ಮನ್ ಗಳ ಕಳಪೆ ಬ್ಯಾಟಿಂಗ್ ನಿಂದಾಗಿ ತಂಡ ಸೋಲಿನ ಭೀತಿದೆ ಸಿಲುಕುವಂತಾಯಿತು. ಆದರೆ ಅಂತಿಮವಾಗಿ ಕೋಲ್ಕತ್ತಾ ಬೌಲರ್ ಗಳು ರಾಜಸ್ಥಾನ್ ತಂಡ ರನ್ ಗುರಿ ಮುಟ್ಟದಂತೆ ತಡೆಯುವಲ್ಲಿ ಯಶಸ್ವಿಯಾದರು.

Story first published: Wednesday, May 23, 2018, 23:55 [IST]
Other articles published on May 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+