ಅಂತಃಕರಣ ಬರೆದ ಕ್ರಿಕೆಟ್ ಬುಕ್ ಸೂಪರ್ : ದೊಡ್ಡ ಗಣೇಶ್

'ಕ್ರಿಕೆಟ್ ಪ್ರಿಯರಿಗೆ ಮಾರ್ಗದರ್ಶಿಯಾದ ಪುಸ್ತಕ : ಅಂತಃಕರಣನ ಇಂಗ್ಲಿಷ್ ಕೃತಿ ಬಿಡುಗಡೆಗೊಳಿಸಿ ಮಾಜಿ ಕ್ರಿಕೆಟರ್ ದೊಡ್ಡಗಣೇಶ್ ಹೇಳಿದ್ದು ಹೀಗೆ...
"ಐಪಿಎಲ್ 2018 : ಆಕ್ಷನ್, ಆ್ಯಕ್ಷನ್ಸ್, ದಿ ಡ್ರೀಮ್ ಟೀಮ್ಸ್" ಕೃತಿಯು ಐಪಿಎಲ್ ಟೆಂಡರ್ ಕುರಿತಂತೆ ಅಪರೂಪದ ಒಳನೋಟಗಳುಳ್ಳ ಪುಸ್ತಕವಾಗಿದ್ದು ಕ್ರಿಕೆಟ್ ಪ್ರಿಯರಿಗೆ ಮಾರ್ಗದರ್ಶಿಯಾಗಿದೆ ಎಂದು ಪ್ರಸಿದ್ಧ ಕ್ರಿಕೆಟಿಗ ದೊಡ್ಡ ಗಣೇಶ್ ಅವರು
ಅಭಿಪ್ರಾಯಪಟ್ಟರು.
ಬೆಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ, ಬಾಲಸಾಹಿತಿ ಅಂತಃಕರಣ ಬರೆದಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹದ್ದೊಂದು ಪುಸ್ತಕ ಬರೆದಿರುವುದು ಅದ್ಭುತವಾದ ಸಂಗತಿಯಾಗಿದೆ. ಅಂತಃಕರಣನಿಗೆ ಕನ್ನಡಭಾಷೆಯಂತೆಯೇ ಇಂಗ್ಲಿಷಿನಲ್ಲಿಯೂ ಉತ್ತಮ ಹಿಡಿತವಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಐಪಿಎಲ್ ಪಂದ್ಯಗಳ ಬಗ್ಗೆ ಮಾತನಾಡಿದ ಅವರು ಕೆಲವು ನ್ಯೂನತೆಗಳ ನಡುವೆಯೂ ಯುವ ಕ್ರಿಕೆಟಿಗರಿಗೆ ಐಪಿಎಲ್ ಪಂದ್ಯಗಳು ಉತ್ತಮ ಅವಕಾಶವನ್ನು ನೀಡಿವೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಯಳಗಲ್ಲಿನ ಬೆನಕ ಬುಕ್ಸ್ ಬ್ಯಾಂಕ್ ಈ ಪುಸ್ತಕ ಪ್ರಕಟಿಸಿದ್ದು, ಪ್ರಕಾಶನ ಸಂಸ್ಥೆಯ ಡಾ.ಕೆ.ಶಿವರಾಮ್ ಅಧ್ಯಕ್ಷತೆ ವಹಿಸಿದ್ದರು. ತೀರ್ಥಹಳ್ಳಿಯ ಹಿರಿಯ ಪತ್ರಕರ್ತ ವೆಂಕಟೇಶ್, ಲೇಖಕ ಸರ್ಜಾಶಂಕರ ಹರಳಿಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಫ್ಯಾಂಟಸಿ ಲೀಗ್ ಆಡಿ, ಬಹುಮಾನ ಗೆಲ್ಲಿ
ಅಂತಃಕರಣ 3 ವಯಸ್ಸಿಗೆ ಕ್ರಿಕೆಟ್ ಪಂದ್ಯಗಳ ಸ್ಕೋರ್ ಕಾರ್ಡ್ ಬರೆಯಲಾರಂಭಿಸಿದ್ದರು. 11 ವರ್ಷ ವಯಸ್ಸಿಗೆ ಐದು ಪುಸ್ತಕ ರಚಿಸಿದರು. ಗೇಮ್ ಪಿರಿಯಡ್, ಮಿಂಚಿನ ಬೆಳಕು ಎಂಬ ಕವನ ಸಂಕಲನ,ಅಮ್ಮನ ಸಿಟ್ಟು ಎಂಬ ಕಥಾ ಸಂಕಲನ,ಮೆರವಣಿಗೆ, ರಾಮಾಪುರದ ಗೆಳೆಯರು ಮುಂತಾದ ಕೃತಿಗಳನ್ನು ರಚಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications