ಐಪಿಎಲ್ ಹೆಸರಲ್ಲಿ ಕೊನೆಗೊಂದುಸಾರಿ ನಕ್ಕುಬಿಡೋಣ ಬನ್ನಿ..

ಐಪಿಎಲ್ ಆರಂಭದಿಂದಲೂ ಪ್ರತೀ ಪಂದ್ಯ ಮುಕ್ತಾಯವಾಗುವಾಗಲೂ ಏನಾದರೊಂದು ಕಾರಣಕ್ಕೆ ಒಬ್ಬರನ್ನು ಟ್ರೋಲ್ ಮಾಡಿ, ಇನ್ನೊಬ್ಬರು ಟ್ರೋಲ್ ಮಾಡಿದ್ದನ್ನು ನೋಡಿ ನಕ್ಕಿದ್ದೆವು. ಈಗ ಐಪಿಎಲ್ ಮುಗಿದಾಗಿದೆ. ಆದರೆ ಐಪಿಎಲ್ ಹೆಸರಲ್ಲಿ ಗಮ್ಮತ್ತು ಮಾಡೋದು ಇನ್ನೂ ನಿಂತಿಲ್ಲ. ಐಪಿಎಲ್ ಹೆಸರಲ್ಲಿ ಹುಟ್ಟಿದ ಈಚೀಚಿನ ತಮಾಷೆಗಳನ್ನೊಮ್ಮೆ ನೋಡಿ ನಕ್ಕು ಬಿಡೋಣ..
ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ಝರ್ಜರಿ ಜಯ ಗಳಿಸುವುದರೊಂದಿಗೆ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಈ ಫೈನಲ್ ಪಂದ್ಯ ನಡೆಯುತ್ತಿರುವಾಗಲೇ ವಿಭಿನ್ನ ರೀತಿಯ ತಮಾಷೆಗಳು ಸಾಮಾಜಿಕ ಜಾಲತಾಣಗಳಿಗೆ ಲಗ್ಗೆಯಿಟ್ಟವು. ಫೇಸ್ಬುಕ್, ಟ್ವಿಟರ್ ನಲ್ಲಿ ಹೆಚ್ಚು ಟ್ರೋಲ್ ಪೋಸ್ಟ್ ಗಳು ಕ್ರೀಡಾಭಿಮಾನಿಗಳನ್ನು, ಸಾಮಾನ್ಯ ನೆಟ್ಟಿಗರನ್ನೂ ಹಲ್ಲು ಪ್ರದರ್ಶಿಸುವಂತೆ ಮಾಡಿದ್ದವು.
ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಕೆಲವು ತಮಾಷೆಗಳನ್ನು ಹೆಕ್ಕಿ ತಂದು ನಿಮ್ಮ ಕಣ್ಣಮುಂದೆ ಹರವಿದ್ದೇವೆ. ಆಗಿದ್ದಾಗಲಿ, ಮನದ ದುಗುಡವನ್ನೊಮ್ಮೆ ಆಚೆಗಿಟ್ಟು ಮನಸಾರೆ ನಕ್ಕುಬಿಡೋಣ ಬನ್ನಿ..

ಐಪಿಎಲ್ ಮುಗಿದ ಮೇಲೆ
ಐಪಿಎಲ್ ಮುಗಿದ ಮೇಲೆ ಅಭಿಮಾನಿಗಳ ಪಾಡನ್ನು ತಮಾಷೆ ಮಾಡಲಾಗಿದೆ. ಐಪಿಎಲ್ ಮುಗಿದಿದ್ದು ಗೊತ್ತೇ ಆಗಲಿಲ್ಲ ಅನ್ನುವಂತಾಗಿದೆ. ಅದೇ ಇಲ್ಲಿ ತಮಾಷೆಯಾಗಿ ಹೊಮ್ಮಿದೆ.

ಅದೂ ಕಪ್ಪು, ಇದೂ ಕಪ್ಪು
ಐಪಿಎಲ್ ದಿನ ಮುಂಜಾನೆ ರೋನಾಲ್ಡೊ ಮುಂಚೂಣಿಯ ರಿಯಲ್ ಮ್ಯಾಡ್ರಿಡ್ ತಂಡ ಲಿವರ್ ಪೂಲ್ ಎದುರು ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಸಂಜೆ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಇದು ತಮಾಷೆಯಲ್ಲದಿದ್ದರೂ ಖುಷಿಯ ವಸ್ತುವಾಗಿ ಹೀಗೊಂದು ಪೋಸ್ಟ್ ಕಾಣಿಸಿಕೊಂಡಿತ್ತು.

ಕ್ಯಾಪ್ಟನ್ ಕೂಲ್ ಮತ್ತು ಕೊಹ್ಲಿಗೆ ಹೋಲಿಕೆ
ಐಪಿಎಲ್ ನಲ್ಲಿ ವಿಕೆಟ್ ಉರುಳಿದಾಗ ಕೊಹ್ಲಿ ಸಂಭ್ರಮಿಸುವ ಪರಿ ಮತ್ತು ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಾಗ ಧೋನಿ ರಿಯಾಕ್ಷನ್ ಅನ್ನು ತಮಾಷೆಯಾಗಿ ಬಿಂಬಿಸಲಾಗಿದೆ. ಕೂಲ್ ಕ್ಯಾಪ್ಟನ್ ಧೋನಿಯ ಸಿಂಪಲ್ ಸೆಲೆಬ್ರೇಷನ್ ಗೆ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದೆ.

ವಾಟ್ಸನ್ ತಮಾಷೆಗೆ ವಸ್ತುವಾಗಿದ್ದು
ನೆನ್ನೆ ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್ ವೇಳೆ ಶೇನ್ ವಾಟ್ಸನ್ ಆರಂಭದಲ್ಲಿ ಕೊಂಚ ಬಾಲ್ ವೇಸ್ಟ್ ಮಾಡಿದ್ದರು. ಅದರೆ ಮತ್ತೆ ಪಂದ್ಯಾಂತ್ಯದವರೆಗೂ ಬ್ಯಾಟಿಂಗ್ ಅಬ್ಬರ ನಡೆಸುತ್ತಲೇ ಬಂದರು. ಇದು ತಮಾಷೆಯಾಗಿ ವ್ಯಕ್ತವಾಗಿದ್ದು ಹೀಗೆ.
ಕೆಳಗಿನವುಗಳಿಗೆ ಕ್ಯಾಪ್ಶನ್ ನ ಅಗತ್ಯವಿಲ್ಲ ಬಿಡಿ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications