IPLನಿಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಕಲಿತ ಪಾಠ

ಲಂಡನ್, ಮೇ 09: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಪದಾರ್ಪಣೆ ಮಾಡಿದ ವರ್ಷದಲ್ಲೇ ಧೂಳೆಬ್ಬಿಸಿರುವ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ರನ್ ಹೊಳೆಯನ್ನೇ ಹರಿಸಿದ್ದರು.
ಇದೇ ವೇಳೆ ಐಪಿಎಲ್‌ನಲ್ಲಿ ಮೊದಲ ಬಾರಿ ಆಡಿದ ಅನುಭವವನ್ನು ಹಂಚಿಕೊಂಡಿರುವ 29 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಟೂರ್ನಿಯ ಗುಣಮಟ್ಟವನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ ಐಪಿಎಲ್ ಮೂಲಕ ವೈಯಕ್ತಿಕವಾಗಿ ತಮ್ಮ ಬ್ಯಾಟಿಂಗ್ ತಂತ್ರಗಾರಿಕೆ ಅಭಿವೃದ್ಧಿ ಪಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಕೊಂಡಾಡಿದ್ದಾರೆ.
2019ರ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಪರ ಒಟ್ಟು 10 ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ ಬೈರ್‌ಸ್ಟೋವ್, ಒಂದು ಶತಕ ಸೇರಿದ 445 ರನ್‌ಗಳನ್ನು ಚಚ್ಚಿ ಅಬ್ಬರಿಸಿದ್ದರು. ಅಲ್ಲದೆ ಬೈರ್ ಸ್ಟೋವ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್‌ನ ಅದ್ಭುತ ಆರಂಭಿಕ ಬ್ಯಾಟಿಂಗ್ ಜೋಡಿ ಕೂಡ ಆಗಿದೆ. ಈ ಜೋಡಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದಲೇ ಹೈದರಾಬಾದ್ ತಂಡಕ್ಕೆ ಪ್ಲೇ ಆಫ್ಸ್ ಪ್ರವೇಶಿಸಲು ಸಾಧ್ಯವಾಯಿತು.
ಇನ್ನು ಐಪಿಎಲ್ ಮೂಲಕ ತಾವು ಕಲಿತ ಪಾಠದ ಕುರಿತಾಗಿ ಮಾತನಾಡಿರುವ ಇಂಗ್ಲಿಷ್ ಬ್ಯಾಟ್ಸ್‌ಮನ್, "ಐಪಿಎಲ್‌ಗೆ ನಿಮ್ಮ ತಂತ್ರಗಾರಿಕೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಹೋಗಲೇಬೇಕು. ಏಕೆಂದರೆ ನಿಮ್ಮ ತಂತ್ರಗಳನ್ನು ಪ್ರಯೋಗಿಸಲು ವಿಶ್ವ ದರ್ಜೆಯ ಗುಣಮಟ್ಟ ಅಲ್ಲಿ ಲಭ್ಯವಾಗುತ್ತದೆ. ಕಳೆದ ಬಾರಿ ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿದ ಜೋಸ್ ಬಟ್ಲರ್ ತಾಯ್ನಾಡಿಗೆ ಮರಳಿದಾಗ ಅವರಲ್ಲಿನ ಆತ್ಮವಿಶ್ವಾಸವನ್ನು ಕಂಡಿದ್ದೆ. ಐಪಿಎಲ್‌ನಲ್ಲಿರುವ ಸ್ಪರ್ಧಾತ್ಮಕತೆ ನಮ್ಮೊಳಗಿನ ಶ್ರೇಷ್ಠ ಆಟವನ್ನು ಹೊರಬರುವಂತೆ ಮಾಡುತ್ತದೆ,'' ಎಂದು ಹೇಳಿದ್ದಾರೆ.
ಕಳೆದ ಎರಡೂ ವರೆ ವರ್ಷಗಳಲ್ಲಿ ಜಾನಿ ಬೈರ್ ಸ್ಟೋವ್ ಇಂಗ್ಲೆಂಡ್ ತಂಡದ ಸ್ಟಾರ್ ಪರ್ಫಾರ್ಮರ್ ಆಗಿದ್ದಾರೆ. ಈ ಅವಧಿಯಲ್ಲಿ ಅವರು ಆಡಿದ 59 ಏಕದಿನ ಪಂದ್ಯಗಳಲ್ಲಿ 46.04ರ ಸರಾಸರಿಯಲ್ಲಿ ಬ್ಯಾಟ್ ಬೀಸುವ ಮೂಲಕ 6 ಶತಕಗಳನ್ನು ಸಿಡಿಸಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಿಂದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಮೇ 30ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಇಂಗ್ಲೆಂಡ್, ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications