ಐಪಿಎಲ್: ರಹಾನೆ ಸ್ಫೋಟಕ ಶತಕ, ರಾಯಲ್ಸ್ ಎದುರು ಕ್ಯಾಪಿಟಲ್ಸ್‌ಗೆ ಜಯ

ಜೈಪುರ, ಏಪ್ರಿಲ್ 22: ಅಜಿಂಕ್ಯ ರಹಾನೆ ಅವರ ಸ್ಫೋಟಕ ಶತಕ ಹೊರತಾಗಿಯೂ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 22) ನಡೆದ ಐಪಿಎಲ್ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಜಯ ಗಳಿಸಿದೆ. ಶಿಖರ್ ಧವನ್ ಮತ್ತು ರಿಷಬ್ ಪಂತ್ ಅರ್ಧಶತಕದ ಬಲದೊಂದಿಗೆ ಡೆಲ್ಲಿ ತಂಡ ರಾಜಸ್ಥಾನ್ ನೀಡಿದ್ದ 192 ರನ್ ಗುರಿ ತಲುಪಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ಪರ ರಹಾನೆ 105 (63 ಎಸೆತ), ನಾಯಕ ಸ್ಟೀವ್ ಸ್ಮಿತ್ 50 (32) ರನ್ ಬಾರಿಸಿದ್ದರಿಂದ ಆರ್‌ಆರ್ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 191 ರನ್ ಬಾರಿಸಿತು. ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ 42, ಶಿಖರ್ ಧವನ್ 54, ರಿಷಬ್ ಪಂತ್ 78 (36) ರನ್ ಸೇರ್ಪಡೆಯೊಂದಿಗೆ 19.2 ಓವರ್‌ಗೆ 4 ವಿಕೆಟ್ ಕಳೆದು 193 ರನ್ ಸೇರಿಸಿತು.
ಆರ್‌ಆರ್ ಇನ್ನಿಂಗ್ಸ್ ಆರಂಭದಲ್ಲೇ ಸಂಜೂ ಸ್ಯಾಮ್ಸನ್ ರನ್‌ಔಟ್‌ಗೆ ಬಲಿಯಾಗಿ ಶೂನ್ಯ ಸಂಪಾದನೆಯಲ್ಲಿ ಪೆವಿಲಿಯನ್ ಸೇರಿದರು. ಆದರೂ ರಹಾನೆ ಮತ್ತು ನೂತನ ನಾಯಕ ಸ್ಟೀವನ್ ಸ್ಮಿತ್ 2ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ತಂಡದ ಬೃಹತ್ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿದರು.
ರಾಯಲ್ಸ್ ಪ್ಲೇಯಿಂಗ್ 11
ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ರಿಯಾನ್ ಪರಾಗ್, ಆಷ್ಟನ್ ಟರ್ನರ್, ಸ್ಟುವರ್ಟ್ ಬಿನ್ನಿ, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್, ಧವಳ್ ಕುಲಕರ್ಣಿ.
ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕಾಲಿನ್ ಇಂಗ್ರಮ್, ಕ್ರಿಸ್ ಮಾರಿಸ್, ಅಕ್ಷರ್ ಪಟೇಲ್, ಶೆರ್ಫೇನ್ ರುದರ್‌ಫೋರ್ಡ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಇಶಾಂತ್‌ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications