Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL ಪ್ರಸಾರ ಹಕ್ಕು: ಹರಾಜಿನ ಮೂಲಕ BCCIಗೆ 40,000 ಕೋಟಿ ರೂ. ಆದಾಯ?

BCCI

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ಗೆ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಈಗಾಗಲೇ ಆಟಗಾರರ ರೀಟೈನ್ ಪ್ರಕ್ರಿಯೆಯು ಮುಗಿದಿದೆ. ಏಪ್ರಿಲ್, 2, 2022ರಂದು ಮುಂದಿನ ಸೀಸನ್‌ ನಡೆಯಬಹುದು ಎಂದು ಅಂದಾಜಿಸಲಾಗಿದೆ.

ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಉದ್ಘಾಟನಾ ಪಂದ್ಯವನ್ನಾಡಲಿದ್ದು, ಚೆನ್ನೈನ ಚೆಪಾಕ್ ಅಂಗಳ ಆರಂಭಿಕ ಪಂದ್ಯದ ಆತಿಥ್ಯವಹಿಸಲಿದೆ.

ಈಗಾಗಲೇ ಅಕ್ಟೋಬರ್‌ನಲ್ಲಿ ಎರಡು ಹೊಸ ಐಪಿಎಲ್ ಫ್ರಾಂಚೈಸಿಗಳ ಮಾರಾಟದಿಂದ ಬಿಸಿಸಿಐ ಈಗಾಗಲೇ 12,725 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದೆ. ಮುಂದಿನ 30 ದಿನಗಳಲ್ಲಿ 40,000 ಕೋಟಿಗೂ ಹೆಚ್ಚು ಚೆಕ್ ಎನ್‌ಕ್ಯಾಶ್ ಆಗಲು ಕಾಯುತ್ತಿದೆ. ಐಪಿಎಲ್ ಮಾಧ್ಯಮ ಹಕ್ಕುಗಳ ಟೆಂಡರ್ ಅನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಬಿಸಿಸಿಐ ಘೋಷಿಸಿದ್ದು, ಭಾರತ ಕ್ರಿಕೆಟ್‌ಗೆ 40,000 ಕೋಟಿಗೂ ಹೆಚ್ಚು ಹಣವನ್ನು ಸುಲಭವಾಗಿ ಪಡೆಯಬೇಕು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಂದಾಜಿಸಿದ್ದಾರೆ.

ಒಟ್ಟು 50,000 ಕೋಟಿಗೂ ಅಧಿಕ ಆದಾಯ!

ಒಟ್ಟು 50,000 ಕೋಟಿಗೂ ಅಧಿಕ ಆದಾಯ!

ಮಾಧ್ಯಮ ಹಕ್ಕುಗಳ ಮಾರಾಟದಿಂದ ಬಿಸಿಸಿಐ 16,347 ಕೋಟಿ ರೂಪಾಯಿಯನ್ನ ಈಗಾಗಲೇ ಗಳಿಸಿದೆ. ಗಂಗೂಲಿಯವರ ಅಂದಾಜಿನ ಪ್ರಕಾರ, ಬಿಸಿಸಿಐ ಐಪಿಎಲ್ 2023 ರಿಂದ ಐಪಿಎಲ್ 2027 ರವರೆಗಿನ ಹಕ್ಕುಗಳ ಮೌಲ್ಯದಲ್ಲಿ ಸುಮಾರು ಮೂರು ಪಟ್ಟು ಏರಿಕೆ ಮಾಡಲು ನಿರೀಕ್ಷಿಸುತ್ತಿದೆ.

ಎರಡು ಐಪಿಎಲ್ ಫ್ರಾಂಚೈಸಿಗಳ ಮಾರಾಟದಿಂದ 12,725 ಕೋಟಿ ರೂಪಾಯಿ
ಮೀಡಿಯಾ ಪ್ರಸಾರ ಹಕ್ಕುಗಳ ಅಂದಾಜು ಆದಾಯ 40,000 ಕೋಟಿ ರೂಪಾಯಿಗೂ ಹೆಚ್ಚು!

50,000 ಕೋಟಿ ರೂಪಾಯಿ ಆದಾಯ ಬಂದ್ರೆ ನೆಕ್ಸ್ಟ್‌ ಲೆವೆಲ್ !

50,000 ಕೋಟಿ ರೂಪಾಯಿ ಆದಾಯ ಬಂದ್ರೆ ನೆಕ್ಸ್ಟ್‌ ಲೆವೆಲ್ !

"ಭಾರತೀಯ ಕ್ರಿಕೆಟ್‌ಗೆ 50,000 ಕೋಟಿ ಆದಾಯ ಬಂದ್ರೆ, ಬಿಸಿಸಿಐ ಕ್ರೀಡೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು. ಈಗಾಗಲೇ ಐಪಿಎಲ್ ಭಾರತೀಯ ಕ್ರಿಕೆಟ್‌ಗೆ ಹೆಚ್ಚಿನ ಲಾಭವನ್ನು ನೀಡಿದೆ ಮತ್ತು ಈ ಹಣದಿಂದ ಕ್ರೀಡೆಯು ಸಂಪೂರ್ಣವಾಗಿ ವಿಭಿನ್ನ ಹಂತಕ್ಕೆ ಹೋಗಬಹುದು "ಎಂದು ಗಂಗೂಲಿ ಸಂದರ್ಶನದಲ್ಲಿ ಹೇಳಿದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ಹೊಸ ಮಾಧ್ಯಮ ಹಕ್ಕು ಪಾಲುದಾರರನ್ನು ಅಂತಿಮಗೊಳಿಸಲು ಇ-ಹರಾಜು ಮಾಡ್ಯೂಲ್ ಅನ್ನು ನಿಯೋಜಿಸಲು ಬಿಸಿಸಿಐ ಸಿದ್ಧವಾಗಿದೆ.
ಬಿಸಿಸಿಐ ಈ ಹಿಂದೆ 2018 ರಲ್ಲಿ ಬಿಸಿಸಿಐ ಹೋಮ್ ಪಂದ್ಯಗಳ ಹಕ್ಕುಗಳ ಮಾರಾಟಕ್ಕಾಗಿ ಇ-ಹರಾಜು ಮಾಡ್ಯೂಲ್ ಅನ್ನು ಯಶಸ್ವಿಯಾಗಿ ಬಳಸಿತ್ತು.

74 ಪಂದ್ಯಗಳು 10 ತಂಡಗಳು

74 ಪಂದ್ಯಗಳು 10 ತಂಡಗಳು

ಇದುವರೆಗೂ ಐಪಿಎಲ್ ಸೀಸನ್‌ನಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನ ಆಡುತ್ತಿದ್ದವು. ಆದ್ರೆ ಈ ಸೀಸನ್‌ನಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗುವುದರಿಂದ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಜೂನ್‌ನ ಮೊದಲ ವಾರದಲ್ಲಿ ನಡೆಯಬಹುದು. ಅಂದರೆ ಜೂನ್ 4 ಇಲ್ಲವೆ 5ರಂದು ಫೈನಲ್ ಪಂದ್ಯ ನಡೆಯಲಿದೆ.

Story first published: Saturday, December 18, 2021, 17:11 [IST]
Other articles published on Dec 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+