Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಆಟಗಾರರ ಹರಾಜು 2023: ಈ ಮೂವರು ಆಸ್ಟ್ರೇಲಿಯಾ ಆಟಗಾರರು ಹರಾಜಾಗುವುದು ಅನುಮಾನ!

IPL Player Auction 2023 : These 3 Australian Players Can Remain Unsold In IPL Mini Auction

ಐಪಿಎಲ್‌ನ ಮೊದಲ ಆವೃತ್ತಿಯಿಂದ ಇದುವರೆಗೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಆಟಗಾರರು ಸಾಕಷ್ಟು ಪ್ರಭಾವ ಬೀರಿದ್ದಾರೆ. ಆಸ್ಟ್ರೇಲಿಯಾ ಆಟಗಾರರಿಗೆ ಐಪಿಎಲ್‌ನಲ್ಲಿ ಹೆಚ್ಚಿನ ಬೇಡಿಕೆ ಇದೆ. ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಶಾನ್ ಮಾರ್ಷ್ ಆರೆಂಜ್ ಕ್ಯಾಪ್ ಗೆದ್ದಿದ್ದರು.

ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಐಪಿಎಲ್‌ನಲ್ಲಿ ಸಾಕಷ್ಟು ಜನಪ್ರಿಯ ಆಟಗಾರರಾಗಿದ್ದಾರೆ. 2023ರ ಐಪಿಎಲ್‌ ಹರಾಜಿನಲ್ಲಿ 405 ಆಟಗಾರರು ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ. 10 ಫ್ರಾಂಚೈಸಿಗಳು ತಮ್ಮ ನೆಚ್ಚಿನ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಪೈಪೋಟಿ ನಡೆಸಲಿವೆ.

405 ಕ್ರಿಕೆಟಿಗರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು, ನಾಲ್ವರು ಅಸೋಸಿಯೇಟ್ ರಾಷ್ಟ್ರಗಳಿಂದ ಬಂದವರು. ವಿದೇಶಿ ರಾಷ್ಟ್ರಗಳಲ್ಲಿ ಇಂಗ್ಲೆಂಡ್‌ನಿಂದ 27 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ 22 ಆಟಗಾರರು, ಆಸ್ಟ್ರೇಲಿಯಾದ 21 ಆಟಗಾರರು, ವೆಸ್ಟ್ ಇಂಡೀಸ್‌ನ 20 ಆಟಗಾರರು ಈ ಬಾರಿಯ ಮಿನಿ ಹರಾಜಿನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್ ಅವರು ಮುಂಬರುವ ಆವೃತ್ತಿಯ ಪಂದ್ಯಾವಳಿಯಿಂದ ಹೊರಗುಳಿದಿದ್ದರೂ, ಕ್ಯಾಮರೂನ್ ಗ್ರೀನ್ ಮತ್ತು ಡೇನಿಯಲ್ ಸ್ಯಾಮ್ಸ್ ಸೇರಿದಂತೆ ಕೆಲವು ಆಸ್ಟ್ರೇಲಿಯನ್ನರು ಮಿನಿ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಪಡೆಯಬಹುದು. ಆದರೂ, ಈ ಬಾರಿಯ ಹರಾಜಿನಲ್ಲಿ ಈ ಮೂವರು ಆಸ್ಟ್ರೇಲಿಯಾ ಆಟಗಾರರು ಹರಾಜಾಗುವುದು ಅನುಮಾನವಾಗಿದೆ.

ಕೌಲ್ಟರ್-ನೈಲ್ ಹರಾಜಾಗುವುದು ಅನುಮಾನ

ಕೌಲ್ಟರ್-ನೈಲ್ ಹರಾಜಾಗುವುದು ಅನುಮಾನ

ಆಸ್ಟ್ರೇಲಿಯಾದ ವೇಗದ ಬೌಲರ್ ನಾಥನ್ ಕೌಲ್ಟರ್-ನೈಲ್ ಈ ಬಾರಿಯ ಮಿನಿ ಹರಾಜಿನಲ್ಲಿ 1.5 ಕೋಟಿ ರುಪಾಯಿ ಮೂಲ ಬೆಲೆ ನಿಗದಿಪಡಿಸಿಕೊಂಡಿದ್ದಾರೆ. 2019ರಲ್ಲಿ ಅವರು ಆಸ್ಟ್ರೇಲಿಯಾ ತಂಡಕ್ಕಾಗಿ ಆಡಿದ್ದರು. 2022ರ ಮೆಗಾ ಹರಾಜಿನಲ್ಲಿ ಅವರು 2 ಕೋಟಿ ರುಪಾಯಿ ಮೂಲಕ ಬೆಲೆಗೆ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡಿದ್ದರು.

ಆದರೆ, ಕಳೆದ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿರುವ ಅವರು ಗಾಯದಿಂದ ಹೊರಗುಳಿಯಬೇಕಾಯಿತು. 2023ರ ಮಿನಿ ಹರಾಜಿಗೆ ಮುನ್ನ ರಾಜಸ್ಥಾನ ರಾಯಲ್ಸ್ ತಂಡ ಅವರನ್ನು ಬಿಡುಗಡೆ ಮಾಡಿದೆ. ಐಪಿಎಲ್‌ನಲ್ಲಿ ಈವರೆಗೆ 39 ಪಂದ್ಯಗಳನ್ನಾಡಿರುವ ಅವರು 48 ವಿಕೆಟ್ ಪಡೆದಿದ್ದಾರೆ. 35 ವರ್ಷದ ವೇಗಿಯನ್ನು ಯಾವುದೇ ಫ್ರಾಂಚೈಸಿಗಳು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವಲ್ಲಿ ಆಸಕ್ತಿ ತೋರಿಸುವ ಸಾಧ್ಯತೆ ಕಡಿಮೆ ಇದೆ.

AUS vs SA: 2 ದಿನಗಳಲ್ಲಿ 34 ವಿಕೆಟ್‌ ಪತನ; ಮೊದಲ ಟೆಸ್ಟ್‌ನಲ್ಲಿ ಹರಿಣಗಳ ವಿರುದ್ಧ ಆಸೀಸ್‌ಗೆ ಗೆಲುವು

ಅನುಭವಿ ಆಲ್‌ರೌಂಡರ್ ಹೆನ್ರಿಕ್ಸ್

ಅನುಭವಿ ಆಲ್‌ರೌಂಡರ್ ಹೆನ್ರಿಕ್ಸ್

35 ವರ್ಷದ ಮೊಯ್ಸೆಸ್ ಹೆನ್ರಿಕ್ಸ್ ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್, ಅವರು ಪ್ರಸ್ತುತ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ತಂಡದ ನಾಯಕರಾಗಿದ್ದಾರೆ. 2023ರ ಮಿನಿ ಹರಾಜಿನಲ್ಲಿ ಅವರು 1 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದಾರೆ. ಈ ಬಾರಿ ಹರಾಜಿನಲ್ಲಿರುವ ಕೆಲವು ಅಂತರರಾಷ್ಟ್ರೀಯ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಎಂಟು ಆವೃತ್ತಿಯಲ್ಲಿ ಅವರು ಐಪಿಎಲ್‌ನ ಭಾಗವಾಗಿದ್ದರು, 2015 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಪರವಾಗಿ ಆಡಿದ್ದಾಗ, 41 ರ ಸರಾಸರಿಯಲ್ಲಿ ಮತ್ತು 136 ರ ಸ್ಟ್ರೈಕ್ ರೇಟ್‌ನಲ್ಲಿ 287 ರನ್‌ ಗಳಿಸಿದ್ದ ಅವರು 11 ವಿಕೆಟ್ ಪಡೆದಿದ್ದರು. ಫಾರ್ಮ್ ಮತ್ತು ಫಿಟ್ನೆಸ್ ಸಮಸ್ಯೆಯಿಂದಾಗಿ ಅವರು ಬಳಲುತ್ತಿದ್ದಾರೆ.

2022ರಲ್ಲಿ ಹೆನ್ರಿಕ್ಸ್ 11 ಟಿ20 ಪಂದ್ಯಗಳನ್ನಾಡಿದ್ದು, 22 ಸರಾಸರಿ ಮತ್ತು 113 ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 207 ರನ್‌ ಗಳಿಸಿದ್ದಾರೆ. ಫಾರ್ಮ್ ಮತ್ತು ಫಿಟ್ನೆಸ್ ಸಮಸ್ಯೆಯಿರುವ ಹೆನ್ರಿಕ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಹರಾಜಾಗುವುದು ಅನುಮಾನವಾಗಿದೆ.

ಉತ್ತಮ ಪ್ರದರ್ಶನ ನೀಡದ ಆಂಡ್ರ್ಯೂ ಟೈ

ಉತ್ತಮ ಪ್ರದರ್ಶನ ನೀಡದ ಆಂಡ್ರ್ಯೂ ಟೈ

2018ರ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್ ಆಂಡ್ರ್ಯೂ ಟೈ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 14 ಪಂದ್ಯಗಳಿಂದ 24 ವಿಕೆಟ್‌ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದಿದ್ದರು. ಆದರೆ, ನಂತರದ ಆವೃತ್ತಿಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

2022ರ ಮೆಗಾಹರಾಜಿನಲ್ಲಿ ಅವರು ಮಾರಾಟವಾಗಲಿಲ್ಲ. ಮಾರ್ಕ್‌ ವುಡ್‌ ಗಾಯಗೊಂಡ ನಂತರ ಬದಲೀ ಆಟಗಾರನಾಗಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಕ್ಕೆ ಸೇರಿದರು. ಮೂರು ಪಂದ್ಯಗಳನ್ನು ಆಡಿದರೂ ಅವರು ಕೆಟ್ಟ ಪ್ರದರ್ಶನ ನೀಡಿದರು. 2023ರ ಮಿನಿ ಹರಾಜಿಗೆ ಮುನ್ನ ಅವರನ್ನು ಎಲ್‌ಎಸ್‌ಜಿ ಬಿಡುಗಡೆ ಮಾಡಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ ಅವರನ್ನು ಖರೀದಿಸಲು ಯಾವ ತಂಡವೂ ಆಸಕ್ತಿ ಹೊಂದಿಲ್ಲ.

Story first published: Sunday, December 18, 2022, 18:29 [IST]
Other articles published on Dec 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+