ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

AUS vs SA: 2 ದಿನಗಳಲ್ಲಿ 34 ವಿಕೆಟ್‌ ಪತನ; ಮೊದಲ ಟೆಸ್ಟ್‌ನಲ್ಲಿ ಹರಿಣಗಳ ವಿರುದ್ಧ ಆಸೀಸ್‌ಗೆ ಗೆಲುವು

AUS vs SA: Australia Beat South Africa By 6 Wickets In 1st Test Match

ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನಾಟಕೀಯವಾಗಿ 2 ದಿನಗಳಲ್ಲಿ 34 ವಿಕೆಟ್‌ಗಳ ಪತನ ನಂತರ, ಆತಿಥೇಯ ಆಸ್ಟ್ರೇಲಿಯಾ ತಂಡವು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಏಳು ವಿಕೆಟ್‌ಗಳೊಂದಿಗೆ ಅದ್ಭುತವಾಗಿ ಮರಳಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 99 ರನ್‌ಗಳಿಗೆ ಆಲೌಟ್ ಆದ ಕಾರಣ ಆಸ್ಟ್ರೇಲಿಯಕ್ಕೆ ಕೇವಲ 34 ರನ್‌ಗಳ ಗುರಿಯನ್ನು ನೀಡಿತ್ತು. ಈ ವೇಳೆ ಪ್ಯಾಟ್ ಕಮಿನ್ಸ್ ಐದು ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ ಎರಡು ವಿಕೆಟ್ ಪಡೆದರು. ಉಳಿದ ಒಂದು ವಿಕೆಟ್ ನಾಥನ್ ಲಿಯಾನ್ ಪಾಲಾಯಿತು.

IND vs BAN 1st Test: ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಸರಣಿಯಲ್ಲಿ ಮುನ್ನಡೆIND vs BAN 1st Test: ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಸರಣಿಯಲ್ಲಿ ಮುನ್ನಡೆ

ಶನಿವಾರದಂದು, ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ನಂತರ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 152 ರನ್‌ಗಳಿಗೆ ಆಲೌಟ್ ಮಾಡಿತ್ತು.

ಟ್ರಾವಿಸ್ ಹೆಡ್ 92 ರನ್ ಗಳಿಸಿದರು

ಟ್ರಾವಿಸ್ ಹೆಡ್ 92 ರನ್ ಗಳಿಸಿದರು

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್, ನಾಥನ್ ಲಿಯಾನ್ 3 ವಿಕೆಟ್, ಪ್ಯಾಟ್ ಕಮಿನ್ಸ್ 2 ವಿಕೆಟ್ ಮತ್ತು ಸ್ಕಾಟ್ ಬೋಲ್ಯಾಂಡ್ 2 ವಿಕೆಟ್ ಪಡೆದು ಮಿಂಚಿದರು.

ನಂತರ ಆತಿಥೇಯ ಆಸೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಕೋರ್ ಬೋರ್ಡ್‌ನಲ್ಲಿ 218 ರನ್‌ಗಳನ್ನು ಕಲೆಹಾಕಿತು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್‌ಗಳ ಮುನ್ನಡೆ ಗಳಿಸಿದರು. ಟ್ರಾವಿಸ್ ಹೆಡ್ 92 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದ್ದರು.

ಎರಡನೇ ಇನ್ನಿಂಗ್ಸ್‌ನಲ್ಲಿ 99 ರನ್‌ಗಳಿಗೆ ಆಲೌಟ್ ಆದ ದಕ್ಷಿಣ ಆಫ್ರಿಕಾ

ಎರಡನೇ ಇನ್ನಿಂಗ್ಸ್‌ನಲ್ಲಿ 99 ರನ್‌ಗಳಿಗೆ ಆಲೌಟ್ ಆದ ದಕ್ಷಿಣ ಆಫ್ರಿಕಾ

ಕೇವಲ ಎರಡು ದಿನಗಳ ಅವಧಿಯಲ್ಲಿ 34 ವಿಕೆಟ್‌ಗಳು ಉರುಳಿದ ಆಘಾತಕಾರಿ ಗಬ್ಬಾ ಪಿಚ್‌ನಲ್ಲಿ ಆಸ್ಟ್ರೇಲಿಯಾ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು 1-0 ಮುನ್ನಡೆ ಸಾಧಿಸಿತು. ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 99 ರನ್‌ಗಳಿಗೆ ಆಲೌಟ್ ಆದ ನಂತರ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಚಹಾ ವಿರಾಮದ ನಂತರ 34 ರನ್‌ಗಳನ್ನು ಬೆನ್ನಟ್ಟಿ ಗಬ್ಬಾದಲ್ಲಿ ಎರಡು ದಿನಗಳಲ್ಲೇ ಪಂದ್ಯವನ್ನು ಮುಗಿಸಿದರು.

ಬೌಲರ್‌ಗಳ ಸ್ವರ್ಗ ಗಬ್ಬಾ ಟ್ರ್ಯಾಕ್‌ನಲ್ಲಿ ಬ್ಯಾಟ್ ಮತ್ತು ಬಾಲ್ ನಡುವಿನ ಪೈಪೋಟಿಯ ಕೊರತೆಯಿಂದಾಗಿ ಇದು ಮಾದರಿ ಟೆಸ್ಟ್ ಪಿಚ್ ಆಗಿರಲಿಲ್ಲ.

ಮಿಚೆಲ್ ಸ್ಟಾರ್ಕ್ 300 ವಿಕೆಟ್ ಮೈಲುಗಲ್ಲು ಸಾಧಿಸಿದರು

ಮಿಚೆಲ್ ಸ್ಟಾರ್ಕ್ 300 ವಿಕೆಟ್ ಮೈಲುಗಲ್ಲು ಸಾಧಿಸಿದರು

ಇನ್ನು ಆಸ್ಟ್ರೇಲಿಯಾ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ತಮ್ಮ ಟ್ರೇಡ್‌ಮಾರ್ಕ್ ಇನ್-ಸ್ವಿಂಗಿಂಗ್ ಯಾರ್ಕರ್‌ನೊಂದಿಗೆ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರನ್ನು ಬೌಲ್ಡ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 300ನೇ ವಿಕೆಟ್‌ ಪಡೆದರು. ಅದಕ್ಕೂ ಮುಂಚಿತವಾಗಿ ಮಿಚೆಲ್ ಸ್ಟಾರ್ಕ್ 16 ರನ್‌ ಗಳಿಸಿದ್ದ ಕೇಶವ್ ಮಹಾರಾಜ್ ಅವರ ವಿಕೆಟ್ ಕಿತ್ತರು. ಮಿಚೆಲ್ ಸ್ಟಾರ್ಕ್ 300 ವಿಕೆಟ್ ಮೈಲುಗಲ್ಲು ಸಾಧಿಸಿದ ಏಳನೇ ಆಸ್ಟ್ರೇಲಿಯನ್ ಬೌಲರ್ ಎನಿಸಿಕೊಂಡರು.

ಮೊದಲ ಇನ್ನಿಂಗ್ಸ್‌ನಲ್ಲಿ 92 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿದೆ.

Story first published: Sunday, December 18, 2022, 13:31 [IST]
Other articles published on Dec 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X