Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅರೆಬಿಕ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ ವೆಂಕಟೇಶ್ ಅಯ್ಯರ್ & ಅವೇಶ್ ಖಾನ್

Avesh khan and venkatesh iyer

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಹಾಡುಗಳು ಸಾಕಷ್ಟು ವೈರಲ್ ಆಗುತ್ತಿರುವುದನ್ನ ಕಂಡಿದ್ದೇವೆ. ಒಮ್ಮೆ ಹಾಡುಗಳು ವೈರಲ್ ಆದ್ರೆ ಸಾಕು ಬಾಲಿವುಡ್‌ನಿಂದ ಹಿಡಿದು ಟಾಲಿವುಡ್‌ವರೆಗೂ ಸೆಲೆಬ್ರೆಟಿಗಳು ಸ್ಟೆಪ್ ಹಾಕುತ್ತಾರೆ. ಈ ಸಾಲಿನಲ್ಲಿ ಭಾರತದ ಕ್ರಿಕೆಟಿಗರು ಹೊರತಾಗಿಲ್ಲ. 'ಬೀಸ್ಟ್'​ ಚಿತ್ರದ ಅರೆಬಿಕ್ ಕುತು ಹಾಡಿಗೆ ಐಪಿಎಲ್ ಆಟಗಾರರ ವೆಂಕಟೇಶ್ ಅಯ್ಯರ್ ಮತ್ತು ಅವೇಶ್ ಖಾನ್ ಸ್ಟೆಪ್ ಹಾಕಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಓಪನರ್ ವೆಂಕಟೇಶ್ ಅಯ್ಯರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ಅವೇಶ್ ಖಾನ್ ಒಟ್ಟಾಗಿ ಅರೆಬಿಕ್ ಕುತು ಹಲಮಿತಿ ಹಬಿಬೊ ಹಾಡಿಗೆ ಸ್ಟೆಪ್ ಹಾಕಿದ್ದು, ಅವೇಶ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವನ್ನ ಪೋಸ್ಟ್ ಮಾಡಿದ್ದಾರೆ.

ಬಲಗೈ ವೇಗದ ಬೌಲರ್ ಅವೇಶ್ ಖಾನ್ ಮತ್ತು ವೆಂಕಟೇಶ್ ಅಯ್ಯರ್ 23 ಸೆಕೆಂಡ್‌ಗಳ ವೀಡಿಯೋವನ್ನ ಮಾರ್ಚ್‌ 17ರಂದು ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ವೀಡಿಯೋ ಪೋಸ್ಟ್‌ ಮಾಡಿದ ಬೆನ್ನಲ್ಲೇ ಸಾವಿರಾರು ಲೈಕ್ಸ್ ಮತ್ತು ಕಮೆಂಟ್ಸ್ ಬಂದಿದೆ.

ವೀಡಿಯೋ ಅಪ್‌ಲೋಡ್ ಮಾಡಿರುವ ಪೇಸರ್ ಅವೇಶ್ ಖಾನ್ ''ಸದ್ಯ ಹಾಟೆಸ್ಟ್ ಟ್ರೆಂಡ್ ಆಗಿರುವ ಅರೆಬಿಕ್ ಕುತು ಸಾಂಗ್‌ಗೆ ಹೆಜ್ಜೆ ಹಾಕುವ ಪ್ರಯತ್ನ'' ಎಂದು ಪೋಸ್ಟ್ ಮಾಡಿದ್ದಾರೆ. ಇನ್ನು ಈ ವೀಡಿಯೋ ರೆಕಾರ್ಡ್‌ ಮಾಡಿರುವ ಮುಂಬೈ ಇಂಡಿಯನ್ಸ್‌ನ ಇಶಾನ್ ಕಿಶನ್ ಮತ್ತು ಹಪ್ರೀತ್‌ ಬ್ರಾರ್‌ಗೆ ಕ್ರೆಡಿಟ್ ನೀಡಿದ್ದಾರೆ.

10 ಕೋಟಿ ರೂಪಾಯಿಗೆ ಹರಾಜಾದ ಅವೇಶ್ ಖಾನ್
ಮಧ್ಯ ಪ್ರದೇಶ ಮೂಲದ ಅವೇಶ್ ಖಾನ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗೆ ಬಿಕರಿಯಾಗಿದ್ದಾರೆ. ಐಪಿಎಲ್ 2021ರ ಸೀಸನ್‌ನಲ್ಲಿ ಎರಡನೇ ಗರಿಷ್ಠ ವಿಕೆಟ್ ಟೇಕರ್ ಆಗಿದ್ದ ಅವೇಶ್ ಖಾನ್ ಪ್ರತಿಭಾನ್ವಿತ ಯುವ ಬೌಲರ್ ಆಗಿದ್ದು, ಐಪಿಎಲ್ 15ನೇ ಸೀಸನ್‌ನಲ್ಲೂ ತನ್ನ ಅದ್ಭುತ ಫಾರ್ಮ್ ಮುಂದುವರಿಸುವ ಯೋಜನೆ ಹೊಂದಿದ್ದಾರೆ. ಅವೇಶ್ ಖಾನ್ 25.83ರ ಸರಾಸರಿಯಲ್ಲಿ 29 ವಿಕೆಟ್ ಉರುಳಿಸಲು ಯಶಸ್ವಿಯಾಗಿದ್ದರು.

ಇನ್ನು ವಿಶೇಷ ಎಂದರೆ ಈತ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿದ್ದಾನೆ. 25 ಲಕ್ಷ ಮೂಲ ಬೆಲೆ ಹೊಂದಿದ್ದ ಅವೇಶ್ ಖಾನ್ 25 ಪಟ್ಟು ಹೆಚ್ಚು ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿದ್ದಾರೆ.

2021ರಲ್ಲಿ ಕೃಷ್ಣಪ್ಪ ಗೌತಮ್‌ನನ್ನ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 9.25 ಕೋಟಿ ರೂಪಾಯಿಗೆ ಖರೀದಿಸಿತ್ತು.

Story first published: Friday, March 18, 2022, 9:57 [IST]
Other articles published on Mar 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+