IPL vs PSL ಅತ್ಯುತ್ತಮ ಟಿ20 ಲೀಗ್ ಯಾವುದು?; ವಾಸಿಂ ಅಕ್ರಮ್ ಕೊಟ್ಟ ಉತ್ತರವೇನು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯುತ್ತಮ ಹಾಗೂ ಶ್ರೀಮಂತ ಟಿ20 ಪಂದ್ಯಾವಳಿಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಐಪಿಎಲ್ ಒದಗಿಸುವ ಗುಣಮಟ್ಟದ ಪಂದ್ಯಗಳು ಮತ್ತು ಆಟಗಾರರ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ ಮತ್ತು ಐಪಿಎಲ್ ಯಾವಾಗಲೂ ಚರ್ಚೆಯ ಲೀಗ್ ಆಗಿದೆ.
ಹೀಗಾಗಿಯೇ, ಭಾರತದ ಟಿ20 ಪಂದ್ಯಾವಳಿಯನ್ನು ಪ್ರಪಂಚದಾದ್ಯಂತದ ಇತರ ಪ್ರಮುಖ ಟಿ20 ಟೂರ್ನಿಗಳಿಗೆ ಹೋಲಿಸಲಾಗುತ್ತದೆ ಎಂಬುದು ಸಾಕಷ್ಟು ಅರ್ಥವಾಗುವಂತಹದ್ದಾಗಿದೆ.

ಇತ್ತೀಚೆಗೆ ಮಾಧ್ಯಮ ಜೊತೆಗಿನ ಸಂವಾದದ ವೇಳೆ, ಪಾಕಿಸ್ತಾನ ತಂಡದ ಲೆಜೆಂಡರಿ ವೇಗಿ ವಾಸಿಂ ಅಕ್ರಮ್ ಅವರು ಪಾಕಿಸ್ತಾನ್ ಸೂಪರ್ ಲೀಗ್‌ಗಿಂತ (ಪಿಎಸ್‌ಎಲ್) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದೊಡ್ಡದು ಎಂದು ಹೇಳಿದ್ದಾರೆ. ಪಿಎಸ್‌ಎಲ್ ಪಾಕಿಸ್ತಾನದ ಮಿನಿ ಐಪಿಎಲ್‌ನಂತಿದೆ ಎಂದು ಅವರು ತಿಳಿಸಿದರು.
'ಐಪಿಎಲ್ ಅಥವಾ ಪಿಎಸ್ಎಲ್' ಎಂದು ಸ್ಪೋರ್ಟ್ಸ್‌ಕೀಡಾದಲ್ಲಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಅವರಿಗೆ ಪ್ರಶ್ನೆ ಕೇಳಲಾಯಿತು.
"ಐಪಿಎಲ್ ಎಂದು ಹೇಳುತ್ತೇನೆ. ನಾನು ಎರಡು ಪಂದ್ಯಾವಳಿಗಳಲ್ಲೂ ಕೆಲಸ ಮಾಡಿದ್ದೇನೆ. ನೀವು ಎರಡು ಲೀಗ ಅನ್ನು ಹೋಲಿಸಲು ಸಾಧ್ಯವಿಲ್ಲ, ಐಪಿಎಲ್ ದೊಡ್ಡದು. ಆದರೆ, ಪಾಕಿಸ್ತಾನದಲ್ಲಿ ಪಿಎಸ್ಎಲ್ ದೊಡ್ಡದಾಗಿದೆ. ನಿಸ್ಸಂದೇಹವಾಗಿ, ಪಿಎಸ್‌ಎಲ್ ಪಾಕಿಸ್ತಾನದ ಮಿನಿ-ಐಪಿಎಲ್ ಆಗಿದೆ," ಎಂದು ವಾಸಿಂ ಅಕ್ರಮ್ ಉತ್ತರ ನೀಡಿದರು.
ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಪಿಎಸ್‌ಎಲ್‌ನ ಕರಾಚಿ ಕಿಂಗ್ಸ್ ನಡುವೆ ಒಂದನ್ನು ಆಯ್ಕೆ ಮಾಡಲು ಕೇಳಿದಾಗ, ವಾಸಿಂ ಅಕ್ರಮ್ ಎರಡು ಪಂದ್ಯಗಳನ್ನೂ ಆಯ್ಕೆ ಮಾಡಿದರು.
ಐಪಿಎಲ್ 2024ರ ವಿಂಡೋ ಮಾರ್ಚ್ 22ರಿಂದ ಪ್ರಾರಂಭವಾಗಲಿದೆ ಮತ್ತು ಮೇ ಅಂತ್ಯದವರೆಗೆ ನಡೆಯಲಿದೆ ಎಂದು ಮಾಧ್ಯಮ ವರದಿಗಳು ಸೂಚಿಸಿವೆ.

ಭಾರತದ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗವು ಅಂತಿಮಗೊಳಿಸಿದ ನಂತರ ಐಪಿಎಲ್ 2024ರ ಅಂತಿಮ ದಿನಾಂಕಗಳನ್ನು ಘೋಷಿಸಲಾಗುತ್ತದೆ.
2024ರ ಐಪಿಎಲ್ ಹರಾಜು ತೀವ್ರವಾದ ಬಿಡ್ಡಿಂಗ್ ವಾರ್ ಆಗಿ ಹೊರಹೊಮ್ಮಿತು. ಈ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಗುಜರಾತ್ ಟೈಟನ್ಸ್ (ಜಿಟಿ) ಮಿಚೆಲ್ ಸ್ಟಾರ್ಕ್ ಅವರನ್ನು ತಮ್ಮ ತಂಡಕ್ಕೆ ಸೇಸಿಕೊಳ್ಳಲು ಉತ್ಸಾಹದಿಂದ ತೊಡಗಿಸಿಕೊಂಡವು.
ವಿಶೇಷವಾಗಿ ಭಾರತದಲ್ಲಿ ಏಕದಿನ ವಿಶ್ವಕಪ್ ಯಶಸ್ಸಿನ ನಂತರ ಮಿಚೆಲ್ ಸ್ಟಾರ್ಕ್, ಮಿನಿ ಹರಾಜಿನಲ್ಲಿ ಹೆಚ್ಚು ಬೇಡಿಕೆಯಿರುವ ಆಟಗಾರನಾಗುತ್ತಾನೆ ಎಂಬುದರಲ್ಲಿ ಯಾವುದೇ ಸಂದೇಹವುರಲಿಲ್ಲ. ಅಂತಿಮವಾಗಿ ಕೆಕೆಆರ್ ಫ್ರಾಂಚೈಸಿಯು 24.75 ಕೋಟಿ ರೂಪಾಯಿ ದಾಖಲೆಯ ಮೊತ್ತಕ್ಕೆ ಖರೀದಿಸಿದ್ದು, ಅನೇಕರ ಹುಬ್ಬೇರುವಂತೆ ಮಾಡಿತು.
ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡದ ಮತ್ತೊಂದು ವಿಶ್ವಕಪ್ ಗೆಲುವಿನ ನಂತರ, ಪ್ಯಾಟ್ ಕಮಿನ್ಸ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡವು 20.50 ಕೋಟಿ ರೂಪಾಯಿಗಳಿಗೆ ಖರೀದಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications