Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟ್ರೈಯಲ್ ಬ್ಲೇಸರ್ಸ್ ವಿರುದ್ಧ ಸೂಪರ್ ನೋವಾಸ್ 3 ವಿಕೆಟ್ ಜಯ

IPL Womens Challenge 2018: Supernovas beat Trailblazers by three wickets

ಮುಂಬೈ, ಮೇ 22: ಐಪಿಎಲ್ ಮೊದಲ ಕ್ವಾಲಿಫೈಯರ್ ಗೂ ಮುನ್ನ ನಡೆದ ಐಪಿಎಲ್ ವನಿತಾ ಚಾಲೆಂಜ್ ಪಂದ್ಯದಲ್ಲಿ ಟ್ರೈಯಲ್ ಬ್ಲೇಸರ್ಸ್ ವಿರುದ್ಧ ಸೂಪರ್ ನೋವಾಸ್ ತಂಡ 3 ವಿಕೆಟ್ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಗಿಳಿದ ಸ್ಮೃತಿ ಮಂಧನಾ ನಾಯಕತ್ವದ ಟ್ರೈಯಲ್ ಬ್ಲೇಸರ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಪೇರಿಸಿ ಸೂಪರ್ ನೋವಾಸ್ ತಂಡಕ್ಕೆ 130 ರನ್ ಗುರಿ ನೀಡಿತ್ತು.

ಗುರಿ ಬೆನ್ನಟ್ಟಿದ ಹರ್ಮನ್ ಪ್ರೀತ್ ಕೌರ್ ಮುಂದಾಳತ್ವದ ಐಪಿಎಲ್ ಸೂಪರ್ ನೋವಾಸ್ ತಂಡ 7 ವಿಕೆಟ್ ಕಳೆದು 130 ರನ್ ಪೇರಿಸಿ ಸುಲಭ ಜಯ ಸಾಧಿಸಿತು. ಇತ್ತಂಡಗಳ ನಡುವಿನ ಈ ಪಂದ್ಯ ಒಂದು ರೀತಿಯಲ್ಲಿ ಪ್ರದರ್ಶನ ರೀತಿಯ ಸೌಹಾರ್ದ ಪಂದ್ಯವಾಗಿತ್ತು.

ಐಪಿಎಲ್ ಟ್ರೈಯಲ್ ಬ್ಲೇಸರ್ಸ್ ತಂಡವನ್ನು ಅಲಿಸ್ಸಾ ಹೀಲಿ, ಸುಜಿ ಬೇಟ್ಸ್, ದೀಪ್ತಿ ಶರ್ಮ, ಬೆತ್ ಮೂನಿ, ಜೆಮಿನಾ ರೋಡ್ರಿಗಸ್, ಡೇನಿಯೆಲ್ ಹಝೆಲ್, ಶಿಖಾ ಪಾಂಡೆ, ಲಿಯ ತಹುಹು, ಜೂಲನ್ ಗೋಸ್ವಾಮಿ, ಎಕ್ತಾ ಬಿಸ್ಟ್, ಪೂನಂ ಯಾದವ್, ಡಿ ಹೇಮಲತಾ ಪ್ರತಿನಿಧಿಸಿದ್ದರು.

ಐಪಿಎಲ್ ಸೂಪರ್ ನೋವಾಸ್ ತಂಡದ ಪರ ಡೇನಿಯೆಲ್ ವ್ಯಾಟ್, ಮಿಥಾಲಿ ರಾಜ್, ಮೆಗ್ ಲ್ಯಾನಿಂಗ್, ಸೋಫಿ ಡಿವೈನ್, ಎಲಿಸೆ ಪೆರ್ರಿ, ವೇದಾ ಕೃಷ್ಣಮೂರ್ತಿ, ಮೋನಾ ಮೇಶ್ರಮ್, ಪೂಜಾ ವಸ್ತ್ರಕಾರ್, ಮೇಘನ್ ಸ್ತುತ್, ರಾಜೇಶ್ವರಿ ಗಾಯಕ್ವಾಡ್, ಅನುಜಾ ಪಾಟಿಲ್, ತಾನಿಯಾ ಭಾಟಿಯಾ ಆಡಿದ್ದರು.

Story first published: Tuesday, May 22, 2018, 19:25 [IST]
Other articles published on May 22, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+