ಧೋನಿ ಮಗಳಿಗೆ ರೇಪ್ ಬೆದರಿಕೆ: ಟ್ರೋಲಿಗರ ವಿರುದ್ಧ ಇರ್ಫಾನ್ ಪಠಾಣ್ ಕಿಡಿ

ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದ ಸೋಲಿಗೆ ಮಹೇಂದ್ರ ಸಿಂಗ್ ಧೋನಿ ಪುತ್ರಿ ವಿರುದ್ಧ ಕೇಳಿಬಂದಿರುವ ಬೆದರಿಕೆ ಕುರಿತು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಖಂಡಿಸಿದ್ದಾರೆ.
ಟ್ರೋಲಿಂಗ್ ಈಗ ಸಾಮಾಜಿಕ ಮಾಧ್ಯಮದ ಅನಿವಾರ್ಯ ಭಾಗವಾಗಿದೆ. ಅಭಿಮಾನಿಗಳು ಆಟಗಾರರನ್ನು ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರನ್ನೂ ನಿಂದಿಸುವುದರಿಂದ ದೂರ ಸರಿಯುತ್ತಿಲ್ಲ ಎಂಬ ಟೀಕೆಗಳು ಸೋಷಿಯಲ್ ಮೀಡಿಯಾದಲ್ಲಿ ವಿಷತ್ವಕ್ಕೆ ದಾರಿ ಮಾಡಿಕೊಟ್ಟಿವೆ.
ಸಿಎಸ್‌ಕೆ ಸೋಲಿಗೆ ಕೆಲವರ ವರ್ತನೆಯು ಎಲ್ಲೆ ಮೀರಿದ್ದು, ಆಟಗಾರರ ಮೇಲಿನ ಈ ನಿಂದನೆ ವಿಡಂಬನೆಯನ್ನು ದಾಟಿ ಇದೀಗ ಮಕ್ಕಳ ವಿರುದ್ದ ಬೆದರಿಕೆಯೊಡ್ಡಿರುವ ಘಟನೆ ಜರುಗಿದೆ. ಸತತ ವಿಫಲರಾಗುತ್ತಿರುವ ಧೋನಿಯನ್ನು ಟೀಕಿಸಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ನಡುವೆ ಮಿಸ್ಟರ್ ವಿಜಯ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ಧೋನಿ ಮಗಳು ಝೀವಾಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು.
ಎಂಎಸ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರ ಇನ್‌ಸ್ಟಾಗ್ರಾಂ್ ಖಾತೆಗಳಲ್ಲಿ ಬೆದರಿಕೆಗಳು ಕಾಣಿಸಿಕೊಂಡಿವೆ. ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ ಮತ್ತು ಇರ್ಫಾನ್ ಪಠಾಣ್ ಕೂಡ ಟ್ರೋಲಿಗರ ವರ್ತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
"ಎಲ್ಲಾ ಆಟಗಾರರು ಮೈದಾನದಲ್ಲಿ ಅತ್ಯುತ್ತಮವಾದದ್ದನ್ನು ನೀಡುತ್ತಾರೆ, ಕೆಲವೊಮ್ಮೆ ಅದು ಕೆಲಸ ಮಾಡುವುದಿಲ್ಲ ಆದರೆ ಚಿಕ್ಕ ಮಗುವಿಗೆ ಬೆದರಿಕೆ ನೀಡಲು ಇದು ಯಾರಿಗೂ ಅಧಿಕಾರ ನೀಡುವುದಿಲ್ಲ" ಎಂದು ಇರ್ಫಾನ್ ಪಠಾಣ್ ಬರೆದಿದ್ದಾರೆ.
ಕೆಕೆಆರ್ ನೀಡಿದ 168ರನ್ ಗುರಿ ಬೆನ್ನತ್ತಿದ್ದ ಸಿಎಸ್‌ಕೆ 10 ರನ್‌ಗಳಿಂದ ಸೋಲನ್ನಪ್ಪಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications