ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಈಗಾಗಲೇ ಐಸಿಸಿ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಇದಕ್ಕಾಗಿ ಎಲ್ಲಾ 10 ತಂಡಗಳು ಸಿದ್ಧತೆ ಆರಂಭಿಸಿವೆ.
ಇದೇ ವೇಳೆ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ಮರು ನಿಗದಿಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಾಂಪ್ರದಾಯಿಕ ಎದುರಾಳಿಗಳು ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ ಎಂದು ಐಸಿಸಿ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ. ಆದರೆ, ದಿನಾಂಕದಲ್ಲಿ ಘರ್ಷಣೆ ನಡೆಯಲಿದೆ.
ಈಗಿರುವ ವೇಳಾಪಟ್ಟಿಯ ದಿನಾಂಕವು ನವರಾತ್ರಿಯ ಆರಂಭವಾಗಿದೆ. ಇದನ್ನು ಗುಜರಾತಿನಾದ್ಯಂತ ಜನರು ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಹೀಗಾಗಿ, ಭದ್ರತಾ ಪಡೆಗಳು ಬಿಸಿಸಿಐ ಮತ್ತು ಐಸಿಸಿಗೆ ದಿನಾಂಕವನ್ನು ಬದಲಾಯಿಸುವ ಬಗ್ಗೆ ಈಗಾಗಲೇ ಸಲಹೆ ನೀಡಿವೆ.
ಇನ್ನು ಹೈ-ವೋಲ್ಟೇಜ್ ಪಂದ್ಯದ ಬದಲಾವಣೆಯು ಸಾವಿರಾರು ಕ್ರಿಕೆಟ್ ಅಭಿಮಾನಿಗಳಿಗೆ ದುಃಸ್ವಪ್ನವಾಗಲಿದೆ. ಏಕೆಂದರೆ, ಈಗಾಗಲೇ ತಮ್ಮ ಪ್ರಯಾಣ ಮತ್ತು ಹೋಟೆಲ್‌ಗಳನ್ನು ಆ ದಿನಾಂಕಕ್ಕೆ ಮತ್ತು ಆ ಸಮಯಕ್ಕೆ ಬುಕ್ ಮಾಡಿದ್ದಾರೆ. ಆದ್ದರಿಂದ, ಬಿಸಿಸಿಐ ಮತ್ತು ಐಸಿಸಿ ಈ ವಿಷಯವನ್ನು ಎಚ್ಚರಿಕೆಯಿಂದ ಎದುರಿಸಬೇಕಾಗುತ್ತದೆ.

ಗಮನಾರ್ಹ ಸಂಗತಿಯೆಂದರೆ, ವಿಶ್ವಕಪ್ ಪಂದ್ಯಾವಳಿಯ ಟಿಕೆಟ್‌ಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ ಮತ್ತು ಪ್ರಕಟಿಸಿಲ್ಲ. ಹೀಗಾಗಿ, ಸ್ಥಳವನ್ನು ಬದಲಾಯಿಸುವ ಹಕ್ಕನ್ನು ಬಿಸಿಸಿಐ ಹೊಂದಿದೆ. ವಿಶೇಷವಾಗಿ, ಭದ್ರತಾ ಪಡೆಗಳು ವೇಳಾಪಟ್ಟಿಯನ್ನು ಬದಲಾಯಿಸುವಂತೆ ಸೂಚಿಸಿದಾಗ.
ಇದೇ ವೇಳೆ, ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿರುವ ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು, ಹೊಸ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ ಮತ್ತು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
"ನಾವು ನಮ್ಮಲ್ಲಿರುವ ಆಯ್ಕೆಗಳನ್ನು ಪರಿಗಣಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಭಾರತ ಮತ್ತು ಪಾಕಿಸ್ತಾನ ನಡುವಿನ ದೊಡ್ಡ ಪಂದ್ಯಕ್ಕಾಗಿ ಅಹಮದಾಬಾದ್‌ಗೆ ಸಾವಿರಾರು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಭದ್ರತಾ ಸಂಸ್ಥೆಗಳು ನಮಗೆ ತಿಳಿಸಿವೆ. ಹೀಗಾಗಿ, ಪಂದ್ಯವನ್ನು ನವರಾತ್ರಿಯ ಕಾರಣ ಬದಲಾಯಿಸಬಹುದು," ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.
ಆದರೆ, ಬಿಸಿಸಿಐ ಈ ಪಂದ್ಯದ ಸ್ಥಳವನ್ನು ಬದಲಾಯಿಸುವ ಸಾಧ್ಯತೆ ಕಡಿಮೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಹಿಂದೆ ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ಆಡುವ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಇನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಸ್ಥಳವನ್ನು ಪರಿಶೀಲಿಸಲು ಪಿಸಿಬಿ ತಮ್ಮ ಸಮಿತಿಯನ್ನು ಕಳುಹಿಸುತ್ತದೆ.
ಇದರ ನಂತರ, ಅವರು ತಮ್ಮ ಭಾಗವಹಿಸುವಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. 2023ರ ಏಷ್ಯಾ ಕಪ್ ಭಾಗವಹಿಸುವಿಕೆ ಬಗೆಹರಿದ ನಂತರ, ಅವರು ಯಾವುದೇ ಆಕ್ಷೇಪಣೆಗಳನ್ನು ಎತ್ತುವುದಿಲ್ಲ ಎಂದು ವ್ಯಾಪಕವಾಗಿ ನಂಬಲಾಗಿದೆ.
ಮತ್ತೊಂದೆಡೆ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಶೀಘ್ರದಲ್ಲೇ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ತೆರಳಿ ಸ್ಥಳವನ್ನು ಪರಿಶೀಲಿಸಲಿದ್ದಾರೆ. ಇದಲ್ಲದೆ, ಮಾಜಿ ವಿಶ್ವಕಪ್ ವಿಜೇತ ರೋಜರ್ ಬಿನ್ನಿ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದ ಅಭಿವೃದ್ಧಿಯ ಜವಾಬ್ದಾರಿಯನ್ನು ಸಹ ನೋಡಿಕೊಳ್ಳುತ್ತಾರೆ.