For Quick Alerts
ALLOW NOTIFICATIONS  
For Daily Alerts
 

ಸ್ಪೋಟಕ ಇನ್ನಿಂಗ್ಸ್‌ಗೂ ಮುನ್ನ ಇಶಾನ್‌ಗೆ ರೋಹಿತ್ ನೀಡಿದ್ದ ಅಮೂಲ್ಯ ಸಲಹೆ ಇದು!

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಅಂತ್ಯವಾಗಿದೆ. ಎರಡನೇ ಟೆಸ್ಟ್ ಪಂದ್ಯ ಮಳೆಗೆ ಆಹುತಿಯಾದ ಪರಿಣಾಮ ಪಂದ್ಯ ಡ್ರಾಗೊಂಡಿದ್ದು ಈ ಸರಣಿಯನ್ನು ಭಾರತ 1-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿದ್ದರೂ ಮಳೆ ಕೊನೆಯ ದಿನದಲ್ಲಿ ಆಡಲು ಅವಕಾಶವೇ ನೀಡದ ಕಾರಣ ನೀರಸವಾಗಿ ಅಂತ್ಯಕಂಡಿದೆ.

ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಕೆಲ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ 29ನೇ ಟೆಸ್ಟ್ ಶತಕ ಬಾರಿಸಿದರೆ ಸಿರಾಜ್ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡರು. ಇನ್ನು ಇಶಾನ್ ಕಿಶನ್ ವಿರಾಟ್ ಕೊಹ್ಲಿ ಆಡುವ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಚೊಚ್ಚಲ ಅರ್ಧ ಸಿಡಿಸಿ ಗಮನಸೆಳೆದಿದ್ದಾರೆ. ಈ ಇನ್ನಿಂಗ್ಸ್‌ನ ಬಳಿಕ ಇಶಾನ್ ಕಿಶನ್ ತಮ್ಮ ಖುಚಿ ಹಂಚಿಕೊಂಡಿದ್ದು ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.

Ishan Kishan reveals he got advice from India captain Rohit Sharma in 2nd Test vs WI

ಎರಡನೇ ಟೆಸ್ಟ್ ಪಂದ್ಯವನ್ನಾಡಿದ ಇಶಾನ್ ಕಿಶನ್ ಈ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಅಬ್ಬರಿಸಿದರು. ಈ ಮೂಲಕ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಟೆಸ್ಟ್‌ ಮಾದರಿಯಲ್ಲಿಯೂ ಬಹಿರಂಗಪಡಿಸಿದ್ದಾರೆ. ಇಶಾನ್ ಕಿಶನ್ ಅವರ ಈ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಾಗಿ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 181 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಡಿಕ್ಲೇರ್ ಮಾಡಿಕೊಂಡಿತ್ತು. ವಿಂಡೀಸ್ ಗೆಲುವಿಗೆ 365 ರನ್‌ಗಳ ಗುರಿಯನ್ನು ಬಿಗದಿಪಡಿಸಿತ್ತು. ಆದರೆ ಮಳೆ ಭಾರತದ ಲೆಕ್ಕಚಾರವನ್ನಜ ತಲೆಕೆಳಗಾಗಿಸಿತ್ತು.

ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿರುವ ಯುವ ಆಟಗಾರ ಇಶಾನ್ ಕಿಶನ್ ತಂಡದ ನಾಯಕನಿಂದ ದೊರೆತ ಬೆಂಬಲವನ್ನು ಹಂಚಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ ತನಗೆ ನನ್ನ ಆಡವನ್ನು ಆಡುವಂತೆ ಹೇಳಿದ್ದರು ಅಲ್ಲದೆ ಬೇರೆ ಯಾರ ಮಾತನ್ನೂ ಕೇಳಿಸಿಕೊಳ್ಳಬೇಡ ಎಂದಿದ್ದರು ಎಂದು ಇಶಾನ್ ಕಿಶನ್ ಹೇಳಿಕೊಂಡಿದ್ದಾರೆ.

"ರೋಹಿತ್ ಶರ್ಮಾ ಅನುಭವಿ ನಾಯಕ. ಎಲ್ಲರಿಗೂ ಕೂಡ ಆರಾಮದಾಯಕ ಅನುಭವವುಂಟಾಗುವಂತೆ ಮಾಡುತ್ತಾರೆ. ನಾನು ಬ್ಯಾಟಿಂಗ್‌ಗೆ ತೆರಳಲು ಹೋದಾಗ ಅವರು ನನ್ನ ಬಳಿಕ ಬಂದು 'ನಿನ್ನ ಆಟವನ್ನು ನೀನು ಆಡು. ನಿನ್ನ ಯೋಚನೆಗೆ ತಕ್ಕಂತೆ ಆಡು, ಯಾರ ಮಾತನ್ನೂ ಕೇಳಿಸಿಕೊಳ್ಳಬೇಡ' ಎಂದಿದ್ದರು. ಇದು ಯಾಔಉದೇ ಯುವ ಆಟಗಾರನಿಗೆ ನಾಯಕನಿಂದ ದೊರೆಯುವ ಅತ್ಯಂತ ದೊಡ್ಡ ಬೆಂಬಲ" ಎಂದಿದ್ದಾರೆ ಇಶಾನ್ ಕಿಶನ್.

ವಿರಾಟ್ ಕೊಹ್ಲಿ ಏಷ್ಯಾದ 2ನೇ ಶ್ರೀಮಂತ ಕ್ರೀಡಾಪಟು; 2022ರಲ್ಲಿ ಭಾರತದ ಮಾಜಿ ನಾಯಕನ ಆದಾಯವೆಷ್ಟು?
ಇನ್ನು ಟೆಸ್ಟ್‌ನಲ್ಲಿ ಸಾಕಷ್ಟು ಸಮಯ ಕಾದ ಬಳಿಕ ಆಡುವ ಅವಕಾಶ ದೊರೆತ ಬಗ್ಗೆ ಕೇಳಿದಾಗ ತಾನು ಒಂದು ಬಾರಿಗೆ ಒಂದು ಪಂದ್ಯದ ಮೇಲೆ ಮಾತ್ರವೇ ಚಿತ್ತ ಹರಿಸುತ್ತೇನೆ ಎಂದಿದ್ದಾರೆ. "ನನ್ನ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ಕೂಡ ವಿಭಿನ್ನ. ಕೆಲವರಿಗೆ ಇದು ಹತಾಶೆ ಮೂಡಿಸಬಹುದು. ಬಹುಶಃ ನಾನು ಅಷ್ಟು ಚೆನ್ನಾಗಿ ಆಡುತ್ತಿಲ್ಲದ ಕಾರಣ ನನಗೆ ಅವಕಾಶ ದೊರೆತಿಲ್ಲದೆ ಇರಬಹುದು" ಎಂದಿದ್ದಾರೆ

"ನಾನು ಹೆಚ್ಚು ಯೋಚನೆ ಮಾಡದೆ ಆಡುತ್ತಿರುವ ಪಂದ್ಯದ ಬಗ್ಗೆ ಮಾತ್ರವೇ ಚಿಂತಿಸುತ್ತೇನೆ. ಇದು ಐದು ದಿನಗಳ ಪಂದ್ಯವಾಗಿದ್ದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ಸವಾಲುಗಳು ಇರುತ್ತವೆ. ಇಂಥಾ ಸಂದರ್ಭದಲ್ಲಿ ಹೆಚ್ಚು ಯೋಜನೆ ಮಾಡುವ ಬದಲು ಆಡುತ್ತಿರುವ ಪಂದ್ಯದ ಬಗ್ಗೆ ಚಿಂತನೆ ನಡೆಸಬೇಕು. ನಾಯಕನಿಗೆ ನಾನು ಬ್ಯಾಟರ್ ಆಗು ಹಾಗೂ ವಿಕೆಟ್ ಕೀಪರ್ ಆಗಿ ಹೇಗೆ ಸಹಾಯ ಮಾಡಬಹುದು ಎಂದು ಆಲೋಚಿಸುತ್ತಿರುತ್ತೇನೆ" ಎಂದಿದ್ದಾರೆ ಇಶಾನ್ ಕಿಶನ್.

Story first published: Tuesday, July 25, 2023, 16:34 [IST]
Other articles published on Jul 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+