ಅವನಿಗೆ ಮದುವೆ ಮಾಡಿ, ಜವಾಬ್ದಾರಿ ಬಂದ್ರೆ ಸರಿ ಹೋಗ್ಬೋದು : ಜಡ್ಡು-ಧವನ್ ಇನ್‌ಸ್ಟಾಗ್ರಾಮ್ ವೀಡಿಯೋ ವೈರಲ್

ಪ್ರಸ್ತುತ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಬ್ಯುಸಿಯಾಗಿದೆ. ಎಲ್ಲವೂ ಸರಿಯಿದ್ದಿದ್ರೆ, ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಟೀಂ ಇಂಡಿಯಾ ಪರ ಆಡಬೇಕಿತ್ತು.
ಆದ್ರೆ ಮೊಣಕಾಲಿನ ಗಾಯದ ಹಿನ್ನಲೆಯಲ್ಲಿ ರವೀಂದ್ರ ಜಡೇಜಾ ಬೆಂಗಳೂರಿನ ಎನ್‌ಸಿಎ ಕ್ರಿಕೆಟ್ ಅಕಾಡೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದೆಡೆ ಟೀಂ ಇಂಡಿಯಾ ಓಪನರ್ ಶಿಖರ್ ಧವನ್ ಟಿ20 ತಂಡಕ್ಕೆ ಪರಿಗಣಿಸಿಲ್ಲ. ಹೀಗಾಗಿ ಅವರು ಮುಂದಿನ ಏಕದಿನ ಸರಣಿಗೆ ಕರೆ ಬರುವವರೆಗೆ ಫಿಟ್ ಆಗಿರಲು ಎನ್‌ಸಿಎನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಆದ್ರೆ ಈ ಜೊಡಿ ಎನ್‌ಸಿಎನಲ್ಲಿ ಒಂದಾಗಿ ಇನ್‌ಸ್ಟಾಗ್ರಾಮ್ ರೀಲ್ ಮೂಲಕ ಸುದ್ದಿಯಾಗಿದ್ದಾರೆ. ಆಗಾಗ್ಗೆ ತನ್ನ ರೀಲ್ಸ್ ಮೂಲಕ ಸುದ್ದಿಯಾಗುವ ಶಿಖರ್ ಧವನ್ ಪುಷ್ಪ ಸಿನಿಮಾನ ಸೂಪರ್ ಸ್ಟೆಪ್ಸ್ ಹಾಕಿ ಟ್ರೆಂಡ್ ಆಗಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ರಂಜಿಸುವ ಪ್ರಯತ್ನ ಮಾಡಿದ್ದಾರೆ.
ಮೊಣಕಾಲಿಗೆ ಚಿಕಿತ್ಸೆ ಪಡೆಯುತ್ತಿರುವ ರವೀಂದ್ರ ಜಡೇಜಾರನ್ನ ಭೇಟಿಯಾದ ಧವನ್ ಇದೇ ವೇಳೆಯಲ್ಲಿ ವೀಡಿಯೋ ಮಾಡಿದ್ದು , ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಶಿಖರ್ ಧವನ್ ಡ್ಯಾನ್ಸ್ ಮಾಡುತ್ತಿದ್ರೆ, ಜಡೇಜಾ, ಇವನಿಗೆ ಮದುವೆ ಮಾಡಿ ನೋಡಿ, ಜವಾಬ್ದಾರಿ ಬಂದ ಬಳಿಕ ಸರಿದಾರಿಗೆ ಬರಬಹುದು ಎಂಬ ಬಾಲಿವುಡ್ ಚಿತ್ರದ ಡೈಲಾಗ್ಗೆ ಲಿಪ್ ಸಿಂಕ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಮ್ ಇಂಡಿಯಾ ಆಟಗಾರರಾದ ಅರ್ಷದೀಪ್ ಸಿಂಗ್ ಹಾಗೂ ಖಲೀಲ್ ಅಹ್ಮದ್ ಜಡ್ಡು-ಧವನ್ ಹಾಸ್ಯಾತ್ಮಕ ವೀಡಿಯೋಗೆ ನಗುವಿನ ಇಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಕಳೆದ ವೆಸ್ಟ್ ಇಂಡೀಸ್ ಸರಣಿ ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿರುವ ಶಿಖರ್ ಧವನ್ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಾದ್ರೂ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಬಹುದು. ಇನ್ನು ಮತ್ತೊಂದೆಡೆ ಈಗಾಗಲೇ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿರುವ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಆದ್ರೆ ಅವರು ಎಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ವಿಶ್ವಕಪ್‌ನಲ್ಲಿ ಆಡುವುದು ನಿರ್ಧಾರವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications