
ಜೆಮ್ಷೆಡ್ಪುರ ಫೆಬ್ರವರಿ 16: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಜೆಮ್ಷೆಡ್ಪುರ ಹಾಗೂ ಎಫ್ ಸಿ ಪುಣೆ ಸಿಟಿ ತಂಡಗಳು ಮುಖಾಮುಖಿಯಾಗಲಿವೆ. ಟಾಟಾ ಪಡೆಗೆ ಪ್ಲೇ ಆಫ್ ಹಂತ ತಲುಪಲು ಇದು ಕೊನೆಯ ಅವಕಾಶ. ಇಲ್ಲಿ ಪ್ರಮಾದವೆಸಗಿದರೆ ಅಗ್ರ ಸ್ಥಾನದಲ್ಲಿರುವ ಇತರ ತಂಡಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿವೆ.
ಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಸರಣಿಗಳಿಗೆ ಭಾರತ ತಂಡ ಪ್ರಕಟ
ಪ್ಲೇ ಆ್‌ನಲ್ಲಿ ಸದ್ಯ ಉಳಿದಿರುವ ಮೂರು ಸ್ಥಾನಗಳಿಗಾಗಿ ಐದು ತಂಡಗಳು ಹೇರಾಟ ನಡೆಸಿವೆ. ಮೂರು ಪಂದ್ಯಗಳನ್ನು ಬಾಕಿ ಉಳಿಸಿಕೊಂಡಿರುವ ಜೆಮ್ಷೆಡ್ಪುರ ಸದ್ಯ ಐದನೇ ಸ್ಥಾನದಲ್ಲಿದೆ. ಅಂತಿಮ ನಾಲ್ಕರಿಂದ ಹೊರಗುಳಿದಿರುವ ಜೆಮ್ಷೆಡ್ಪುರಕ್ಕೆ ಶನಿವಾರದ ಪಂದ್ಯದಲ್ಲಿ ಗೆಲುವಿನ ಅಗತ್ಯವಿದೆ. ಹಾಗಾದಲ್ಲಿ ಮಾತ್ರ ಸೆಸರ್ ಫೆರಾಂಡೋ ಪಡೆ ಪ್ಲೇ ಆ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬಹುದು.
ಮುಂಬೈ ಸಿಟಿ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಗೋಲು ಗಳಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. 'ಇತ್ತಂಡಗಳಿಗೂ ಗೆಲ್ಲುವುದೇ ಗುರಿಯಾಗಿರುತ್ತದೆ. ಅಂತಿಮ ನಾಲ್ಕರ ಹಂತ ತಲುಪಬೇಕಾದರೆ ಜಯದ ಅನಿವಾರ್ಯತೆ ಇದೆ. ತಂಡ ನಿರಂತರವಾಗಿ ಕಠಿಣ ಶ್ರಮ ಪಡುತ್ತಿದೆ, ನಾವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ. ಒತ್ತಡದಲ್ಲಿ ನಾವು ಉತ್ತಮ ಪ್ರದರ್ಶನ ತೋರಬೇಕಾದ ಅನಿವಾರ್ಯತೆ ಇದೆ. ಅಭಿಮಾನಿಗಳು ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ್ದಾರೆ, ನಾವು ಗೆಲ್ಲಲು ಸಜ್ಜಾಗಿದ್ದೇವೆ, ' ಎಂದು ಫೆರಾಂಡೋ ಹೇಳಿದ್ದಾರೆ.
ಪುಣೆ ಸಿಟಿ ತಂಡಕ್ಕೆ ಕಾರ್ಲೋಸ್ ಕಾವ್ಲೋ ಸೇರ್ಪಡೆಯಾಗಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಸ್ಪೇನ್ ಮಿಡ್‌ಫೀಲ್ಡರ್ ಮೂರು ಪಂದ್ಯಗಳಿಗೆ ಅಮಾನತುಗೊಂಡಿದ್ದರು. ವಿಂಗಲ್ ಮೈಕಲ್ ಸುಸಾಯ್‌ರಾಜ್ ಕೂಡ ಚೇತರಿಸಿಕೊಂಡಿದ್ದು, ನಾಳೆ ಪಂದ್ಯಕ್ಕೆ ಆಡುವ ಸಾಧ್ಯತೆ ಇದೆ. ಜೆಮ್ಷೆಡ್ಪುರ ತಂಡ 23 ಗೋಲುಗಳನ್ನು ಗಳಿಸಿದ್ದು, ಸ್ಪೇನ್‌ನ ಸರ್ಗಿಯೊ ಸಿಡೊಂಚಾ ಅವರ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮನೆಯಂಗಣದಲ್ಲಿ ನಡೆದ ಏಳು ಪಂದ್ಯಗಳಲ್ಲಿ ಜೆಮ್ಷೆಡ್ಪುರ ಸೋಲನುಭವಿಸಿರಲಿಲ್ಲ. ಪುಣೆ ಹಾಗೂ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಮನೆಯಂಗಣದಲ್ಲಿ ಅಜೇಯ ಓಟವನ್ನು ಮುಂದುವರಿಸುವ ಗುರಿಯನ್ನು ಜೆಮ್ಷೆಡ್ಪುರ ಹೊಂದಿದೆ.
ಆರಂಭದಲ್ಲಿ ನಿರಂತರ ವೈಲ್ಯಗಳನ್ನು ಕಂಡಿರುವ ಪುಣೆ ಸಿಟಿ ತಂಡ ಇತ್ತೀಚಿನ ಪಂದ್ಯಗಳಲ್ಲಿ ಯಶಸ್ಸು ಕಂಡಿದೆ. ಇತ್ತೀಚಿನ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಕಂಡಿರುವ ಪುಣೆ ತಂಡ ಈಗ ಜೆಮ್ಷೆಡ್ಪುರದ ಯಶಸ್ಸಿನ ಹಾದಿಗೆ ಅಡ್ಡಿ ತರುವ ಗುರಿ ಹೊಂದಿದೆ. ಹಲ್ ಸಿಟಿ ತಂಡದ ಮಾಜಿ ಕೋಚ್ ಫಿಲ್ ಬ್ರೌನ್ ಅವರೀಗ ಪುಣೆ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಆಗಮನದ ನಂತರ ಪುಣೆ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದೆ. ಹಾಲಿ ಚಾಂಪಿಯನ್ ಚೆನ್ನೈಯಿನ್ ತಂಡವನ್ನು ಸೋಲಿಸಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ.
'ನಾವು ಜೆಮ್ಷೆಡ್ಪುರಕ್ಕೆ ಆಗಮಿಸುವಾಗ ನಮ್ಮದೇ ಆದ ನಂಬಿಕೆಯೊಂದಿಗೆ ಹೆಜ್ಜೆ ಇಟ್ಟಿದ್ದೇವೆ. ಚೆಂಡು ನಮ್ಮ ನಿಯಂತ್ರಣಕ್ಕೆ ಸಿಗದಿರುವಾಗಲೇ ನಾವು ಬಲಿಷ್ಠರಾಗಿರುತ್ತೇವೆ. ಜೆಮ್ಷೆಡ್ಪುರ ಬಲಿಷ್ಠ ತಂಡ, ಇದು ನಮ್ಮ ಪಾಲಿಗೆ ದೊಡ್ಡ ಸವಾಲು, ನಾವು ಬಹಳ ಸಮಯದಿಂದಲೂ ಚೆಂಡು ಸಿಗದವರಂತೆ ನಾವು ನಿರಂತರ ಹೋರಾಟ ನಡೆಸುತ್ತಿದ್ದೇವೆ, ಇದು ನನ್ನ ಮನಸ್ಥಿತಿ, ' ಎಂದು ತಂಡದ ಕೋಚ್ ಬ್ರೌನ್ ಹೇಳಿದ್ದಾರೆ.