Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

James Anderson: ವೃತ್ತಿಜೀವನದ ಕೊನೆಯ ಪಂದ್ಯದಲ್ಲಿ ವಿಶ್ವದಾಖಲೆಗಳನ್ನು ನಿರ್ಮಿಸಲು ಸಜ್ಜಾದ ಜೇಮ್ಸ್‌ ಆಂಡರ್ಸನ್

ಜುಲೈ 9 ಮಂಗಳವಾರ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿಯು ಜುಲೈ 10 ರಿಂದ 30 ರವರೆಗೆ ನಡೆಯಲಿದೆ. ಇದು ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ಕೊನೆಯ ಸರಣಿಯಾಗಲಿದೆ.

ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ಜುಲೈ 10 ರಿಂದ 14 ರವರೆಗೆ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯ ಜೇಮ್ಸ್ ಆಂಡರ್ಸನ್ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ ಕೊನೆಯ ಪಂದ್ಯವಾಗಿದೆ. ಈ ಪಂದ್ಯದ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ.

James Anderson is ready to make world records in Cricket

ಇಂಗ್ಲೆಂಡ್ ತನ್ನ ದಿಗ್ಗಜ ವೇಗದ ಬೌಲರ್‌ಗೆ ಗೆಲುವಿನೊಂದಿಗೆ ವಿದಾಯ ಹೇಳಲು ಸಿದ್ಧತೆ ಮಾಡಿಕೊಂಡಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಆಂಡರ್ಸನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲು ಉತ್ಸುಕನಾಗಿದ್ದಾರೆ. ಆದರೆ ಇದು ಆಂಡರ್ಸನ್‌ ಕೊನೆಯ ಪಂದ್ಯ ಎಂಬುದು ಅಭಿಮಾನಿಗಳಿಗೆ ಬೇಸರ ತಂದಿದೆ.

41 ವರ್ಷದ ಆ್ಯಂಡರ್ಸನ್ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಮುರಿಯುವ ಅವಕಾಶ ಹೊಂದಿದ್ದು, ಹಾಗೆ ಮಾಡಿದರೆ ವಿದಾಯ ಪಂದ್ಯ ಅವರಿಗೆ ಇನ್ನಷ್ಟು ವಿಶೇಷವಾಗಲಿದೆ.

ಆಂಡರ್ಸನ್ ಈವರಗೆ 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ. ವೆಸ್ಟ್ ಇಂಡೀಸ್‌ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ ಆಂಡರ್ಸನ್‌ 145 ಪಂದ್ಯಗಳಲ್ಲಿ 708 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ದಿ. ಶೇನ್ ವಾರ್ನ್ ಅವರನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ.

James Anderson is ready to make world records in Cricket

ಇನ್ನೂ 9 ವಿಕೆಟ್‌ಗಳನ್ನು ಪಡೆದ ನಂತರ, ಆಂಗ್ಲ ವೇಗಿ ತನ್ನ ವೃತ್ತಿಜೀವನವನ್ನು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದ್ದಾರೆ.

ಇದಲ್ಲದೆ, ಆಂಡರ್ಸನ್‌ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 987 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ವೃತ್ತಿಜೀವನದಲ್ಲಿ 700 ಟೆಸ್ಟ್ ವಿಕೆಟ್‌ಗಳು, 269 ಏಕದಿನ ಮತ್ತು 18 ಟಿ20 ವಿಕೆಟ್‌ಗಳು ಸೇರಿವೆ. 1000 ವಿಕೆಟ್‌ಗಳನ್ನು ಪಡೆದ ವಿಶ್ವದಾದ್ಯಂತ ಮೂರನೇ ಬೌಲರ್ ಮತ್ತು ಮೊದಲ ವೇಗದ ಬೌಲರ್ ಆಗಲು ಅವರಿಗೆ ಇನ್ನೂ 13 ವಿಕೆಟ್‌ಗಳ ಅಗತ್ಯವಿದೆ.

ಈಗಾಗಲೇ ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 1347 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ, ಶೇನ್ ವಾರ್ನ್ 1001 ಎರಡನೇ ಸ್ಥಾನದಲ್ಲಿ ಪಡೆದಿದ್ದಾರೆ.

ಆಂಡರ್ಸನ್ ತಮ್ಮ ಕೊನೆಯ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಪಡೆದರೆ, 35 ಬಾರಿಗೆ ಈ ಸಾಧನೆ ಮಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಐದು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಆರನೇ ಸ್ಥಾನವನ್ನು ತಲುಪಲಿದ್ದಾರೆ.

ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಮತ್ತು ಶ್ರೀಲಂಕಾದ ಸ್ಪಿನ್ನರ್ ರಂಗನಾ ಹೆರಾತ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 35 ಬಾರಿ ಐದು ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ.

Story first published: Tuesday, July 9, 2024, 12:44 [IST]
Other articles published on Jul 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+