ಜುಲೈ 12 ಶುಕ್ರವಾರ, ಇಂಗ್ಲೆಂಡ್‌ನ ಸ್ಟಾರ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರು ತಮ್ಮ 21 ವರ್ಷಗಳ ಕ್ರಿಕೆಟ್ ಪಯಣವನ್ನು ಅಂತ್ಯಗೊಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಲಾರ್ಡ್ಸ್ ಟೆಸ್ಟ್ ನಂತರ ಇಂಗ್ಲೆಂಡ್ ದಂತಕಥೆ ಜೇಮ್ಸ್ ಆಂಡರ್ಸನ್ ಅಂತರಾಷ್ಟ್ರೀ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.
ಆಂಡರ್ಸನ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ತಮ್ಮ ಕೊನೆಯ ಪಂದ್ಯದಲ್ಲಿ ಆಂಡರ್ಸನ್ 3 ವಿಕೆಟ್ ಪಡೆದು ಮಿಂಚಿದರು. ಆದರೆ, 21 ವರ್ಷಗಳ ವೃತ್ತಿಜೀವನದಲ್ಲಿ 188 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಂಡರ್ಸನ್ ಅವರು 703 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಆಂಡರ್ಸನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 109 ಸಹ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್‌ನನ್ನು ಹಂಚಿಕೊಂಡಿದ್ದಾರೆ. ಇಂತಹ ಮಹಾನ್ ದಿಗ್ಗಜ ಬೌಲರ್ ಇದೀಗ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ.
2003ರಲ್ಲಿ ಜಿಂಬಾಬ್ವೆ ವಿರುದ್ಧ ಆಂಡರ್ಸನ್ ಲಾರ್ಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದೀಗ ಅದೇ ಮೈದಾನದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಪಯಣವನ್ನು ಕೊನೆಗೊಳಿಸಿದ್ದಾರೆ.
ಇದಕ್ಕೂ ಮುನ್ನ ಈ ಬಲಗೈ ವೇಗದ ಬೌಲರ್ 2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಮೊದಲ 5 ವರ್ಷಗಳ ಕಾಲ, ಆಂಡರ್ಸನ್ 2003 ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗಮನಾರ್ಹ ಸ್ಪೆಲ್ ಸೇರಿದಂತೆ 2007 ರವರೆಗೆ ನಿರಂತರವಾಗಿ ತಂಡದಲ್ಲಿ ಮತ್ತು ಹೊರಗೆ ಇದ್ದರು.
ಆದರೆ, 2007ರ ನಂತರ ಚೆಂಡಿನೊಂದಿಗೆ ನಿಕಟ ಸಂಬಂಧ ಇಟ್ಟಕೊಂಡು ಸತತವಾಗಿ ಬೌಲಿಂಗ್‌ನಲ್ಲಿ ಯಶಸ್ಸು ಕಂಡು ಆಂಡರ್ಸನ್ ಸಂಪೂರ್ಣ ಬದಲಾದರು. ಆರಂಭಿಕ ಹೋರಾಟದ ವರ್ಷಗಳಲ್ಲಿ ಆಂಡರ್ಸನ್ ಅವರ ಬೌಲಿಂಗ್ ಕ್ರಮದಲ್ಲಿ ಕೋಚ್ ಸ್ವಲ್ಪ ಬದಲಾವಣೆಗಳನ್ನು ಮಾಡಿದರು.
ಇದರಿಂದಾಗಿ ಆಂಡರ್ಸನ್ ಆತ್ಮವಿಶ್ವಾಸ ಮತ್ತು ಫಾರ್ಮ್ ಕ್ಷೀಣಿಸಿತು. ಆದರೆ ಒಮ್ಮೆ ಸುಧಾರಿಸಿಕೊಂಡ ಆಂಡರ್ಸನ್ ಲಯವನ್ನು ಮರಳಿ ಪಡೆದರು. 2007ರ ಸಂದರ್ಭದಲ್ಲಿ ಆಂಡರ್ಸನ್ ಅವರು ತುಂಬಾ ಕಳಪೆ ಪ್ರದರ್ಶನ ನೀಡಿದರು.
2008ರ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯವು ಆಂಡರ್ಸನ್ ಅವರ ಕನಸುಗಳನ್ನು ನನಸು ಮಾಡಿತ್ತು. ಮ್ಯಾಥ್ಯೂ ಹೊಗಾರ್ಡ್ ಬದಲಿಗೆ ಪ್ಲೇಯಿಂಗ್-11 ಗೆ ಪ್ರವೇಶಿಸಿದ ನಂತರ 5 ವಿಕೆಟ್ ಪಡೆದ ಆಂಡರ್ಸನ್ ಪಂದ್ಯದ ಗತಿಯನ್ನೇ ಬದಲಾಯಿಸಿದರು.
ಈವೇಳೆ ಆಂಡರ್ಸನ್ ದೇಶೀಯ ಬೇಸಿಗೆ ಋತುವಿನಲ್ಲಿ 7 ಟೆಸ್ಟ್‌ಗಳಲ್ಲಿ 34 ವಿಕೆಟ್‌ಗಳನ್ನು ಪಡೆದಿದರು. ಈ ಮೂಲಕ ಇಂಗ್ಲೆಂಡ್ ವೇಗದ ಬೌಲಿಂಗ್ ಘಟಕದ ನಾಯಕರಾದರು. 2008 ಮತ್ತು 2013/14 ರ ಆಸ್ಟ್ರೇಲಿಯಾ ಪ್ರವಾಸಗಳ ನಡುವೆ, ಆಂಡರ್ಸನ್ 70 ಟೆಸ್ಟ್ ಪಂದ್ಯಗಳಲ್ಲಿ 273 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು.
ಆಂಡರ್ಸನ್ ಅವರು ಮುಂದಿನ 10 ವರ್ಷಗಳ ಕಾಲ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಮಿಂಚಿದರು. ಈ ಅವಧಿಯಲ್ಲಿ ಆಂಡರ್ಸನ್ ಆಡಿದ 95 ಟೆಸ್ಟ್‌ಗಳಲ್ಲಿ 357 ವಿಕೆಟ್‌ಗಳನ್ನು ಕಬಳಿಸಿದರು.
ತನ್ನ ಸ್ವಿಂಗ್‌ನಿಂದ ಎದುರಾಳಿ ಬ್ಯಾಟರ್ಸ್‌ಗೆ ತೊಂದರೆ ನೀಡಲು ಪ್ರಾರಂಭಿಸಿದ ಆಂಡರ್ಸನ್ ಅಂತಿಮವಾಗಿ ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಅಲ್ಲದೆ, ಹಳೆಯ ಚೆಂಡನ್ನು ರಿವರ್ಸ್ ಮಾಡುವ ಕಲೆಯನ್ನು ಕಲಿತು ತನ್ನ ಬೌಲಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಂಪೂರ್ಣ ವೇಗದ ಬೌಲರ್ ಆದರು.
ಟೆಸ್ಟ್ ಹೊರೆತುಪಡಿಸಿ ಬಲಗೈ ವೇಗದ ಬೌಲರ್ ಏಕದಿನಗಳಲ್ಲಿ ಅಷ್ಟೇ ಪರಿಣಾಮಕಾರಿಯಾಗಿದ್ದರು. ದೇಶಕ್ಕಾಗಿ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನವನ್ನು ಮುಗಿಸಿದರು.
1) ಸಚಿನ್ ತೆಂಡೂಲ್ಕರ್ ನಂತರ ಆಂಡರ್ಸನ್ ಎರಡನೇ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು (188) ಆಡಿದ್ದಾರೆ.
2) ಆಂಡರ್ಸನ್ ಅವರಿಗೆ ಹೆಚ್ಚಿನ ವಿಕೆಟ್‌ಗಳು (198) ವಿಕೆಟ್‌ಕೀಪರ್‌ನಿಂದ ಕ್ಯಾಚ್‌ನಿಂದ ಸಿಕ್ಕಿವೆ. ಇಲ್ಲಿಯ ವರೆಗೂ ಯಾವೊಬ್ಬ ಬೌಲರ್ ಕೂಡ ಈ ರೀತಿ ಹೆಚ್ಚು ವಿಕೆಟ್‌ಗಳನ್ನುಪಡೆದಿಲ್ಲ.
3) ಟೆಸ್ಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಮೊದಲ ವೇಗದ ಬೌಲರ್
4) ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟ್‌ಗಳನ್ನು (39 ಪಂದ್ಯಗಳಲ್ಲಿ 149 ವಿಕೆಟ್) ಪಡೆದ ಬೌಲರ್ ಆಗಿದ್ದಾರೆ. ಅಲ್ಲದೆ, ಭಾರತದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು (45) ಉರುಳಿಸಿದ್ದಾರೆ.