For Quick Alerts
ALLOW NOTIFICATIONS  
For Daily Alerts
 

ಸ್ಟುವರ್ಟ್ ಬ್ರಾಡ್ ನಿವೃತ್ತಿಯ ಬಗ್ಗೆ ಅಚ್ಚರಿಯ ಮಾಹಿತಿ ಹೊರಹಾಕಿದ ಆಂಡರ್ಸನ್

ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಆಶಸ್ ಸರಣಿ ತನ್ನ ಕೊನೆಯ ಸರಣಿ ಎಂದಿರುವ ಬ್ರಾಡ್ ತಮ್ಮ ಅಂತಿಮ ಪಂದ್ಯವನ್ನು ಕೂಡ ಆಡಿದ್ದು ಗೆಲುವಿನ ಮೂಲಕ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸ್ಟುವರ್ಟ್ ಬ್ರಾಡ್ ಅವರ ಈ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ. ಆದರೆ ಇಂಗ್ಲೆಂಡ್ ತಂಡದ ಮತ್ತೋರ್ವ ದಿಗ್ಗಜ ವೇಗಿ ಜೇಮ್ಸ್ ಆಂಡರ್ಸ್ ಈ ವಿಚಾರವಾಗಿ ಕುತೂಹಲಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸ್ಟುವರ್ಟ್ ಬ್ರಾಡ್ ನಿವೃತ್ತಿ ಹೇಳಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದ್ದರೂ ಈ ನಿರ್ಧಾರವನ್ನು ಅವರು ಈ ಹಿಂದೆಯೂ ಒಮ್ಮೆ ತೆಗೆದುಕೊಂಡಿದ್ದರು ಎಂದು ಆಂಡರ್ಸನ್ ಹೇಳಿದ್ದಾರೆ. ಆದರೆ ಆ ಸಂದರ್ಭದಲ್ಲಿ ನಾಯಕ ಬೆನ್ ಸ್ಟೋಕ್ಸ್ ಹಾಗೂ ಕೋಚ್ ಬ್ರೆಂಡನ್ ಮೆಕ್ಕಲಮ್ ವೇಗಿಯನ್ನು ಮನವೊಲಿಸಿದ್ದರು ಎಂದಿದ್ದಾರೆ.

James Anderson revealed interesting fact of Stuart Broad retirement decision

ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕೂ ಅಧಿಕ ವಿಕೆಟ್ ಪಡೆದ ಕೇವಲ ಎರಡನೇ ಆಟಗಾರನಾಗಿ ಹೊರಹೊಮ್ಮಿದ ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ ಪರವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರನೂ ಆಗಿದ್ದಾರೆ. ಜೇಮ್ಸ್ ಆಂಡರ್ಸನ್ ಈ ಎರಡು ಪಟ್ಟಿಯಲ್ಲುಯೂ ಮೊದಲ ಸ್ಥಾನದಲ್ಲಿರುವ ಕ್ರಿಕೆಟಿಗ.

ಟೆಲಿಗ್ರಾಫ್‌ಗೆ ಬರೆದಿರುವ ಅಂಕಣದಲ್ಲಿ ಈ ವಿಚಾರವನ್ನು ಸ್ಟುವರ್ಟ್ ಬ್ರಾಡ್ ಹಂಚಿಕೊಂಡಿದ್ದಾರೆ. "ಮೂರನೇ ದಿನದಾಟಕ್ಕೂ ಮುನ್ನ ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲ ಸ್ಟುವರ್ಟ್ ನಿವೃತ್ತಿಯ ವಿಚಾರವನ್ನು ನನ್ನಲ್ಲಿ ಹಂಚಿಕೊಂಡರು. ಆರಂಬದಲ್ಲಿ ನಗೆ ಸ್ವಲ್ಪ ಆಘಾತವುಂಟಾಯಿತು. ಆದರೆ ನನಗೆ ನಂತರ ನನಗೆ ಅದು ಅಚ್ಚರಿಮೂಡಿಸಲಿಲ್ಲ. ಕಳೆದ ಬೇಸಿಗೆಯಲ್ಲಿಯೇ ಬ್ರಾಡ್ ಈ ಬಗ್ಗೆ ಚಿಂತಿಸಿದ್ದರು. ಆದರೆ ಬ್ರೆಂಡನ್ ಮೆಕ್ಕಲಮ್ ಹಾಗೂ ಬೆನ್ ಸ್ಟೋಕ್ಸ್ ಆತನಲ್ಲಿ ಮಾತನಾಡಿ ಆ ನಿರ್ಧಾರ ತೆಗೆದುಕೊಳ್ಳದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು" ಎಂದು ಆಂಡರ್ಸನ್ ಬರೆದುಕೊಂಡಿದ್ದಾರೆ.

"ನೀವು ಆಶಸ್ ಸರಣಿಯನ್ನು ತಿರುಗಿ ನೋಡದರೆ ಆತನೇ ಹೇಳಿದಂತೆ ಇದು ನಿವೃತ್ತಿ ಹೇಳಲು ಅತ್ಯಂತ ಸೂಕ್ತವಾದ ಸಂದರ್ಭ. ಒಂದೇ ಸಂದರ್ಭದಲ್ಲಿ ನಾವುಬ್ಬರು ಕೂಡ ನಿವೃತ್ತಿ ಹೇಳುತ್ತಿಲ್ಲ ಎಂಬುದು ಕೂ ಉತ್ತಮವಾದ ಸುದ್ದಿಯೆ. ನಾವು ಆಟದಲ್ಲಿ ಜೊತೆಗಾರರಾಗಿ ಒಟ್ಟಾಗಿ ಹೋರಾಡುತ್ತಿದ್ದೆವು. ಆದರೆ ಆತನಿಗೆ ಆತನದ್ದೇ ಆದ ಹಕ್ಕುಗಳಿದೆ. ಇಂಗ್ಲೆಂಡ್ ಕಂಡ ಅತ್ಯುತ್ತಮ ವೇಗಿಗಳಲ್ಲಿ ಇ್ಬರಾಗಿ ತನಗೆ ಅರ್ದವಾದ ರೀತಿಯಲ್ಲಿಯೇ ನಿವೃತ್ತಿ ಹೇಳು ಹೊರಹೋಗುತ್ತಿದ್ದಾರೆ" ಎಂದಿದ್ದಾರೆ ಜೇಮ್ಸ್ ಆಂಡರ್ಸನ್.

ಇನ್ನು ಸ್ಟುವರ್ಟ್ ಬ್ರಾಡ್ ಈ ಬಾರಿಯ ಆಶಸ್ ಸರಣಿಯಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಈ ಸರಣಿಯಲ್ಲಿ ಅವರು 20 ವಿಕೆಟ್‌ಗಳನ್ನು ಕಬಳಿಸಿದ್ದು ಇಂಗ್ಲೆಂಡ್ ಬೌಲರ್‌ಗಳ ಪರವಾಗಿ ಇದು ಅತಿ ಹೆಚ್ಚು ಎನಿಸಿಕೊಂಡಿದೆ. ಅಲ್ಲದೆ ಎಲ್ಲಾ ಐದು ಪಂದ್ಯಗಳಲ್ಲಿಯೂ ಇಂಗ್ಲೆಂಡ್ ಪರವಾಗಿ ಬ್ರಾಡ್ ಪ್ರಮುಖ ಪಾತ್ರವಹಿಸಿದ್ದರು. ಸರಣಿಯಲ್ಲಿ ಅವರು ನಿಡಿದ ಅದ್ಭುತ ಪ್ರದರ್ಶನದ ಕಾರಣದಿಂದಾಗಿಯೇ ಇಂಗ್ಲೆಂಡ್ ತಂಡ ಐದು ಪಂದ್ಯಗಳ ಈ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.

Story first published: Thursday, August 3, 2023, 14:27 [IST]
Other articles published on Aug 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+