For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಟಿ20 ಕದನಕ್ಕೂ ಮೊದಲೇ ವಿಂಡೀಸ್‌ಗೆ ಬಿಗ್‌ ಶಾಕ್‌!

Jason Mohammed replaces Andre Russell

ಫ್ಲೋರಿಡಾ, ಆಗಸ್ಟ್‌ 02: ಅಮೆರಿಕದಲ್ಲಿ ಟೀಮ್‌ ಇಂಡಿಯಾ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಟಿ20 ಕ್ರಿಕೆಟ್‌ ಕದನ ವೀಕ್ಷಣೆಗೆ ಅಭಿಮಾನಿಗಳೆಲ್ಲಾ ಕಾದು ಕುಳಿತಿದ್ದಾರೆ. ಹಾಲಿ ಟಿ20 ವಿಶ್ವ ಚಾಂಪಿಯನ್‌ಷಿಪ್‌ ಟೀಮ್‌ ಇಂಡಿಯಾವನ್ನು ಕಟ್ಟಿಹಾಕಿ ಚುಟುಕು ಕ್ರಿಕೆಟ್‌ನಲ್ಲಿ ತಮ್ಮದೇ ಬಲಿಷ್ಠ ತಂಡ ಎಂದು ಸಾಬೀತು ಪಡಿಸುವ ಹಂಬಲದಲ್ಲಿದೆಯಾದರೂ, ಸರಣಿ ಆರಂಭಕ್ಕೇ ಮೊದಲ ಭಾರಿ ಆಘಾತ ಅನುಭವಿಸಿದೆ.

ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟಿ20 ಟೂರ್ನಿ ವೇಳೆ ಗಾಯದ ಸಮಸ್ಯೆ ಎದುರಿಸಿರುವ ವೆಸ್ಟ್‌ ಇಂಡೀಸ್‌ನ ದೈತ್ಯ ಆಲ್‌ರೌಂಡರ್‌ ಆಂಡ್ರೆ ರಸೆಲ್‌, ಟೀಮ್‌ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿರುವುದಾಗಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಕೂಡಲೇ ಬದಲಿ ಆಟಗಾರನನ್ನು ಸೂಚಿಸಿರುವ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಭಾರತ ವಿರುದ್ಧ ಫ್ಲೋರಿಡಾದಲ್ಲಿ ನಡೆಯಲಿರುವ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಂಡ್ರೆ ರಸೆಲ್‌ ಅವರ ಬದಲಾಗಿ ಜೇಸನ್‌ ಮೊಹಮ್ಮದ್‌ ಆಡಲಿದ್ದಾರೆ ಎಂದು ಶುಕ್ರವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

32 ವರ್ಷದ ಅನುಭವಿ ಆಟಗಾರ ಮೊಹಮ್ಮದ್‌ ಈಗಾಗಲೇ ವೆಸ್ಟ್‌ ಇಂಡೀಸ್‌ ಪರ 9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಕೆರಿಬಿಯನ್‌ ಪಡೆಯನ್ನು ಮುನ್ನಡೆಸಿದ ಅನುಭವವನ್ನೂ ಹೊಂದಿದ್ದಾರೆ. ರಸೆಲ್‌ ಅವರನ್ನು ಭಾರತ ವಿರುದ್ಧದ ಟಿ20 ಸರಣಿಗೆ ಆರಂಭದಲ್ಲಿ ಪ್ರಕಟಿಸಲಾದ 14 ಮಂದಿ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಇದೀಗ ಗಾಯದ ಸಮಸ್ಯೆ ಕಾರಣ ಹೊರಗುಳಿಯುವಂತಾಗಿದೆ.

"ಭಾರತ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯ ಸಲುವಾಗಿ ನಮ್ಮ ತಂಡಕ್ಕೆ ಜೇಸನ್‌ ಮೊಹಮ್ಮದ್‌ ಅವರನ್ನು ಸ್ವಾಗತಿಸುತ್ತೇವೆ. ಜೇಸನ್‌ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಟ್ರಿನಿಡಾಡ್‌ ಮತ್ತು ಗಯಾನ ವಾರಿಯರ್ಸ್‌ ತಂಡಗಳ ಪರ ಅವರ ಪ್ರದರ್ಶನ ಅದ್ಭುತವಾಗಿದೆ," ಎಂದು ವೆಸ್ಟ್‌ ಇಂಡೀಸ್‌ ತಂಡದ ಮಧ್ಯಂತರ ಕೋಚ್‌ ಫ್ಲಾಯ್ಡ್‌ ರೀಫರ್‌ ಹೇಳಿದ್ದಾರೆ.

"ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾದ್ಯಂತ ಅಬ್ಬರಿಸಿರುವ ಆಂಡ್ರೆ ರಸೆಲ್‌ ಅವರ ಸ್ಥಾನ ತುಂಬುವುದು ಅಷ್ಟು ಸುಲಭದ ಮಾತಲ್ಲ. ವೆಸ್ಟ್‌ ಇಂಡೀಸ್‌ ತಂಡಕ್ಕೆ ಎರಡು ಟಿ20 ವಿಶ್ವಕಪ್‌ ಗೆದ್ದುಕೊಡುವಲ್ಲಿ ರಸೆಲ್‌ ಪಾತ್ರ ಮಹತ್ವದ್ದು. ಅವರ ಸ್ಥಾನವನ್ನು ತುಂಬುವಲ್ಲಿ ಜೇಸನ್‌ ಮೊಹಮ್ಮದ್‌ ಯಶಸ್ವಿಯಾಗುತ್ತಾರೆ ಎಂದು ನಂಬಿದ್ದೇವೆ," ಎಂದು ರೀಫರ್‌ ವಿವರಿಸಿದ್ದಾರೆ.

Story first published: Friday, August 2, 2019, 20:37 [IST]
Other articles published on Aug 2, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+