
ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್‌ಗಳಿಸಿದ ಇಂಗ್ಲೆಂಡ್ ಆಟಗಾರನಾಗಿ ಹೊರಹೊಮ್ಮಿದ್ದು, ಮಾಜಿ ನಾಯಕ ಮೈಕಲ್ ವಾನ್ ಅವರನ್ನು ಹಿಂದಿಕ್ಕಿದ್ದಾರೆ. ವಾನ್ 2002 ರಲ್ಲಿ 61.14 ರ ಬ್ಯಾಟಿಂಗ್ ಸರಾಸರಿಯಲ್ಲಿ 1,481 ರನ್ ಗಳಿಸಿದರು, ಇದರಲ್ಲಿ ಆರು ಶತಕಗಳು ಮತ್ತು ಎರಡು ಅರ್ಧ ಶತಕಗಳು ಸೇರಿವೆ.
ಸೆಂಚುರಿಯನ್ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಆ್ಯಷಸ್ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಅಂತಿಮ ಸೆಶನ್‌ನಲ್ಲಿ, ಚಹಾ ವಿರಾಮದ ನಂತರ ಆಫ್-ಸ್ಪಿನ್ನರ್ ನಾಥನ್ ಲಿಯಾನ್ ಓವರ್‌ನಲ್ಲಿ ರೂಟ್ ಮೈಲಿಗಲ್ಲನ್ನು ತಲುಪಿದ್ರು. ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ಗೆ ಚೆಂಡನ್ನ ಕಳುಹಿಸಿ ಸಿಂಗಲ್ಸ್ ತೆಗೆದುಕೊಂಡರು. ನಂತರ, ಅಂತಿಮ ಸೆಷನ್‌ನಲ್ಲಿ ರೂಟ್ ಅರ್ಧಶತಕ ದಾಟಿದರು.
30 ವರ್ಷದ ಅವರು ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ, ಗಾಲೆ ಮತ್ತು ಚೆನ್ನೈನಲ್ಲಿ ಎರಡು ದ್ವಿಶತಕ ಸೇರಿದಂತೆ ಆರು ಶತಕಗಳನ್ನು ಗಳಿಸಿದ್ದಾರೆ. ರೂಟ್ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳಲ್ಲಿ 426 ರನ್‌ಗಳೊಂದಿಗೆ ವರ್ಷವನ್ನು ಪ್ರಾರಂಭಿಸಿದರು ಮತ್ತು ನಾಲ್ಕು ಪಂದ್ಯಗಳಲ್ಲಿ 386 ರನ್‌ಗಳೊಂದಿಗೆ ಅದನ್ನು ಅನುಸರಿಸಿದರು.
ಈ ಹಿಂದೆ 2016 ರಲ್ಲಿ 1477 ರನ್ ಮತ್ತು 2015 ರಲ್ಲಿ 1385 ರನ್ ಗಳಿಸಿದ್ದ ರೂಟ್ ಟೆಸ್ಟ್ ಇತಿಹಾಸದಲ್ಲಿ ಎಲ್ಲಾ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಒಟ್ಟಾರೆ ವಾರ್ಷಿಕ ಅಗ್ರ ಐದು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಹೊಂದಿದ್ದಾರೆ. ವಾನ್ ಅನ್ನು ಮೀರಿದ ನಂತರ ರೂಟ್ ಪ್ರಸ್ತುತ ಎಂಟನೇ ಸ್ಥಾನದಲ್ಲಿ ಕುಳಿತಿದ್ದಾರೆ ...
ಈ ಹಿಂದೆ 2016 ರಲ್ಲಿ 1477 ರನ್ ಮತ್ತು 2015 ರಲ್ಲಿ 1385 ರನ್ ಗಳಿಸಿದ್ದ ರೂಟ್, ಟೆಸ್ಟ್ ಇತಿಹಾಸದಲ್ಲಿ ಎಲ್ಲಾ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಒಂದು ವರ್ಷದಲ್ಲಿ ದಾಖಲಿಸಿದ ಗರಿಷ್ಠ ರನ್‌ಗಳ ಪಟ್ಟಿಯ ಐದು ಸ್ಥಾನಗಳಲ್ಲಿ ಮೂರು ಸ್ಥಾನ ಇವರೊಬ್ಬರೇ ಪಡೆದಿದ್ದಾರೆ. ವಾನ್ ಅನ್ನು ಮೀರಿದ ನಂತರ ರೂಟ್ ಪ್ರಸ್ತುತ ಎಂಟನೇ ಸ್ಥಾನದಲ್ಲಿ ಕುಳಿತಿದ್ದಾರೆ ...
ವರ್ಷಾಂತ್ಯದ ಮೊದಲು ಎರಡನೇ ಮತ್ತು ಮೂರನೇ ಆಶಸ್ ಟೆಸ್ಟ್‌ಗಳು ಅನುಕ್ರಮವಾಗಿ ಅಡಿಲೇಡ್ ಮತ್ತು ಮೆಲ್ಬೋರ್ನ್‌ನಲ್ಲಿ ನಡೆಯಲಿರುವುದರಿಂದ ರೂಟ್ ಇನ್ನೂ ವಿಶ್ವ ದಾಖಲೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ಯೂಸುಫ್ 2006 ರಲ್ಲಿ 1,788 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮೂರನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 2 ವಿಕೆಟ್ ನಷ್ಟಕ್ಕೆ 220ರನ್ ಕಲೆಹಾಕಿದ್ದು, ಇನ್ನೂ 58ರನ್‌ಗಳ ಹಿನ್ನಡೆಯಲಿದೆ. ಇಂಗ್ಲೆಂಡ್ ಪರ ಜೋ ರೂಟ್ ಅಜೇಯ 86 ರನ್ ಮತ್ತು ಡೇವಿಡ್ ಮಲನ್ ಅಜೇಯ 80 ರನ್ ಕಲೆಹಾಕಿದ್ದಾರೆ.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ನಾಥನ್ ಲಿಯಾನ್,
ಬೆಂಚ್: ಉಸ್ಮಾನ್ ಖವಾಜಾ, ಮೈಕೆಲ್ ನೆಸರ್, ಝೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಮಾರ್ಕ್ ವುಡ್
ಬೆಂಚ್: ಜಾನಿ ಬೈರ್ಸ್ಟೋವ್, ಕ್ರೇಗ್ ಓವರ್ಟನ್, ಡೇನಿಯಲ್ ಲಾರೆನ್ಸ್, ಡೊಮಿನಿಕ್ ಬೆಸ್, ಝಾಕ್ ಕ್ರಾಲಿ, ಸ್ಟುವರ್ಟ್ ಬ್ರಾಡ್