ಸ್ಮಿತ್ ಗಿಂತ ಕೊಹ್ಲಿ ಗ್ರೇಟ್: ಅದಕ್ಕೆ ಜಾಂಟಿ ರೋಡ್ಸ್ ಕೊಟ್ಟ ಕಾರಣವೇನು?

ಅದೊಂದು ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಅಥವಾ ಆಸ್ಟ್ರೇಲಿಯಾ ದಂತಕಥೆ ಡಾನ್ ಬ್ರಾಡ್ಮನ್ ಇಬ್ಬರಲ್ಲಿ ಯಾರು ಗ್ರೇಟ್ ಎಂಬ ಚರ್ಚೆ ನಡೆಯುತ್ತಿತ್ತು. ಇದೀಗ, ಭಾರತ ಕ್ರಿಕೆಟ್ ತಂಡದ ರನ್ ಮಿಷನ್ ಖ್ಯಾತಿಯ ಕೊಹ್ಲಿ ಮತ್ತು ಆಸ್ಟ್ರೇಲಿಯಾ ರನ್ ಮಿಷನ್ ಸ್ವೀವನ್ ಸ್ಮಿತ್ ಇಬ್ಬರಲ್ಲಿ ಯಾರು ಗ್ರೇಟ್ ಎಂಬ ವಾದ ಚಾಲ್ತಿಯಲ್ಲಿದೆ.
ಸ್ಟೀವನ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಬೆಸ್ಟ ಎಂಬ ವಿಚಾರಕ್ಕೆ ಸಂಬಂಧ ಪಟ್ಟಂತೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಪ್ರತಿಕ್ರಿಯಿಸಿದ್ದಾರೆ.
ಸ್ಮಿತ್ ಅವರ ಆಟಕ್ಕೆ ಹೋಲಿಸಿಕೊಂಡರೆ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ ಎಂದು ಜಾಂಟಿ ರೋಡ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಅದಕ್ಕೆ ಕೆಲವು ನಿರ್ದಿಷ್ಟ ಕಾರಣಗಳನ್ನ ಕೂಡ ಜಾಂಟಿ ನೀಡಿದ್ದಾರೆ. ಏನದು? ಮುಂದೆ ಓದಿ.....

ಬ್ಯಾಟಿಂಗ್ ಶೈಲಿಯಲ್ಲಿ ಕೊಹ್ಲಿ ಗ್ರೇಟ್
ಸ್ಮಿತ್ ಅವರ ಅಸಂಪ್ರದಾಯಕ ಬ್ಯಾಟಿಂಗ್ ಶೈಲಿಯ ಬಗ್ಗೆ ಮಾತನಾಡಿದ ಜಾಂಟಿ ರೋಡ್ಸ್ ''ಆಸ್ಟ್ರೇಲಿಯಾ ತಂಡ ಕಂಡ ಅತ್ಯಂತ ಕೆಟ್ಟ ಶತಕಗಳನ್ನ ನೀಡಿದ ಖ್ಯಾತಿ ಸ್ಮಿತ್ ಅವರದ್ದು'' ಎಂದಿದ್ದಾರೆ. ಸ್ಮಿತ್ ಅವರ ಬ್ಯಾಟಿಂಗ್ ಶೈಲಿ ಬಗ್ಗೆ ಹಲವು ಮಾಜಿ ಆಟಗಾರರು ಈಗಾಗಲೇ ಟೀಕಿಸಿದ್ದರು.
Test Ranking: ವಿರಾಟ್ ಕೊಹ್ಲಿ ಎದುರು ಭಾರೀ ಅಂತರ ಕಾಯ್ದುಕೊಂಡ ಸ್ಮಿತ್!

ಕೊಹ್ಲಿ ಆಟ ನೋಡಿದ್ರೆ 'ವಾಹ್' ಎನಿಸುತ್ತೆ
''ವಿರಾಟ್ ಕೊಹ್ಲಿ ಆಟವನ್ನ ನೋಡುವುದಕ್ಕೆ ನಾನು ಖುಷಿ ಪಡುತ್ತೇನೆ. ಸ್ಮಿತ್ ಆಸ್ಟ್ರೇಲಿಯಾ ತಂಡದ ಪರ ಅತ್ಯಂತ ಕೆಟ್ಟ ಶತಕಗಳನ್ನ ಬಾರಿಸಿದ್ದಾರೆ. ಈ ಹಿಂದೆ ನಾನು ಅಂತಹ ಶತಕಗಳನ್ನ ನೋಡಿಲ್ಲ. ಸ್ಮಿತ್ ಕೇವಲ ರನ್ ಮಾಡ್ತಾರೆ ಅಷ್ಟೆ'' ಎಂದು ಜಾಂಟಿ ರೋಡ್ಸ್ ಕೊಹ್ಲಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಕೊಹ್ಲಿ ಆಟ ಆ ರೀತಿ ಇದೆ
''ಯಾರಾದರೂ ಕ್ರಿಕೆಟ್ ನೋಡಲು ಇಷ್ಟಪಡುವ ವ್ಯಕ್ತಿಗಳು 'ವಾಹ್...ಎಂತಹ ಅದ್ಭುತ ಶಾಟ್, ಹೀಗೂ ಶಾಟ್ ಹೊಡೆಯಬಹುದಾ?' ಎನ್ನಬೇಕು. ಸದ್ಯಕ್ಕೆ ಅದನ್ನ ವಿರಾಟ್ ಕೊಹ್ಲಿ ಮಾಡುತ್ತಿದ್ದಾರೆ'' ಎಂದು ಜಾಂಟಿ ರೋಡ್ಸ್ ಕೊಹ್ಲಿಯ ಆಟವನ್ನ ಮನಸಾರೆ ಹಾಡಿ ಹೊಗಳಿದ್ದಾರೆ.
ಟೆಸ್ಟ್ ರ‍್ಯಾಂಕಿಂಗ್: ಕೊಹ್ಲಿಗೆ ಸಡ್ಡು ಹೊಡೆಯುವತ್ತ ಸಮೀಪಿಸಿದ ಸ್ಟೀವ್ ಸ್ಮಿತ್

ಕೊಹ್ಲಿ ಹಿಂದಿಕ್ಕಿದ ಸ್ಮಿತ್
ಆಶಸ್ ಸರಣಿಯಲ್ಲಿ ಅಮೋಘ ಬ್ಯಾಂಟಿಗ್ ಪ್ರದರ್ಶನ ಮಾಡಿದ ಸ್ಮಿತ್ 4 ಟೆಸ್ಟ್ ಪಂದ್ಯಗಳಲ್ಲಿ 774 ರನ್ ಪೇರಿಸುವ ಮೂಲಕ ದಾಖಲೆ ಬರೆದರು. ಇದರಲ್ಲಿ ಎರಡು ಶತಕ (ದ್ವಿಶತಕ) ಮತ್ತು ಮೂರು ಅರ್ಧ ಶತಕ ಸೇರಿತ್ತು. ಜೊತೆಗೆ ವಿರಾಟ್ ಕೊಹ್ಲಿಯನ್ನ ಹಿಂದಿಕ್ಕಿ ಟೆಸ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರು.
ಆಷಸ್ ಟೆಸ್ಟ್: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಸ್ಟೀವ್ ಸ್ಮಿತ್

ಕೊಹ್ಲಿ ವರ್ಸಸ್ ಸ್ಮಿತ್
ಸ್ಟೀವನ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿ ಕಾಂಪಿಟೇಶನ್ ಗೆ ಬಿದ್ದಂತೆ ಶತಕಗಳನ್ನ ಗಳಿಸುತ್ತಿದ್ದಾರೆ. ಸ್ಮಿತ್ ಆಡಿರುವ 68 ಪಂದ್ಯಗಳಲ್ಲಿ 26 ಶತಕ ಗಳಿಸಿದ್ದಾರೆ. ವಿರಾಟ್ ಆಡಿರುವ 79 ಪಂದ್ಯಗಳಲ್ಲಿ 25 ಶತಕ ದಾಖಲಿಸಿದ್ದಾರೆ. ಹಾಗ್ನೋಡಿದ್ರೆ ಇವರಿಬ್ಬರ ಆಟದಲ್ಲಿ ಅನೇಕ ಸಾಮ್ಯತೆಗಳು ಕಂಡು ಬರುತ್ತೆ. 2014-15ರಲ್ಲಿ ಭಾರತ ಪ್ರವಾಸ ಬಂದಿದ್ದ ಆಸ್ಟ್ರೇಲಿಯಾ ಸರಣಿಯಲ್ಲಿ ಇಬ್ಬರು ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಇಬ್ಬರು ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications