ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಷಸ್ ಟೆಸ್ಟ್: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಸ್ಟೀವ್ ಸ್ಮಿತ್

Ashes 2019: Steve Smith slams 26th Test ton, overtakes Sachin Tendulkar

ಮ್ಯಾನ್ಚೆಸ್ಟರ್, ಸೆಪ್ಟೆಂಬರ್ 5: ಗಾಯದಿಂದ ಚೇತರಿಸಿಕೊಂಡಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್, ಆ್ಯಷಸ್ ಟೆಸ್ಟ್‌ ಈ ಸೀಸನ್‌ನಲ್ಲಿ 3ನೇ ಶತಕ ಬಾರಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 26 ಶತಕಗಳನ್ನು ಬಾರಿಸಿ ಕ್ರಿಕೆಟಿಗನಾಗಿ ಸ್ಮಿತ್ ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಅನಗತ್ಯ ದಾಖಲೆ ಪಟ್ಟಿ ಸೇರಿದ ಡೇವಿಡ್ ವಾರ್ನರ್ವಿರಾಟ್ ಕೊಹ್ಲಿ ಜೊತೆ ಅನಗತ್ಯ ದಾಖಲೆ ಪಟ್ಟಿ ಸೇರಿದ ಡೇವಿಡ್ ವಾರ್ನರ್

ಮ್ಯಾನ್ಚೆಸ್ಟರ್‌ನಲ್ಲಿರುವ ಎಮಿರೇಟ್ಸ್ ಓಲ್ಡ್‌ ಟ್ರಾಫರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ vs ಆಸ್ಟ್ರೇಲಿಯಾ 4ನೇ ಆ್ಯಷಸ್ ಟೆಸ್ಟ್‌ನಲ್ಲಿ ಸ್ಮಿತ್, 75 ಓವರ್‌ ವೇಳೆಗೆ 120 ರನ್ ಬಾರಿಸಿ ಆಡುತ್ತಿದ್ದರು. ಈ 26 ಶತಕಗಳ ಮೂಲಕ ಸ್ಟೀವ್, ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

15 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿಯಲಿದ್ದಾರೆ ರಶೀದ್ ಖಾನ್15 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿಯಲಿದ್ದಾರೆ ರಶೀದ್ ಖಾನ್

ವಿಶ್ವಶ್ರೇಷ್ಠ ಕ್ರಿಕೆಟರ್ ಡಾನ್ ಬ್ರಾಡ್‌ಮನ್ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದಲ್ಲಿ 26 ಶತಕ ಬಾರಿಸಿದ 2ನೇ ಆಟಗಾರನಾಗಿ ಸ್ಮಿತ್ ಗುರುತಿಸಿಕೊಂಡಿದ್ದಾರೆ. ಅಂದ್ಹಾಗೆ ಸ್ಮಿತ್, 1 ವರ್ಷದ ಬಳಿಕ ಮೊದಲ ಬಾರಿ ಈ ಆ್ಯಷಸ್ ಸೀಸನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ 2ನೇ ಟೆಸ್ಟ್ ವೇಳೆ ಇಂಗ್ಲೆಂಡ್‌ ವೇಗಿ ಆರ್ಚರ್ ಬೌನ್ಸರ್‌ಗೆ ಸ್ಮಿತ್ ಗಾಯಗೊಂಡಿದ್ದರು.

ವೇಗದ 26 ಶತಕ

ವೇಗದ 26 ಶತಕ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 26 ಶತಕ ಬಾರಿಸಿದ ವಿಶ್ವದಾಖಲೆ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್‌ಮನ್ ಹೆಸರಿನಲ್ಲಿದೆ. ಬ್ರಾಡ್‌ಮನ್ ಕೇವಲ 69 ಇನ್ನಿಂಗ್ಸ್‌ಗಳಲ್ಲಿ 26 ಶತಕ ಬಾರಿಸಿದ್ದರು. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಸ್ಮಿತ್ 26ನೇ ಶತಕ ಬಾರಿಸಲು 121 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ.

ಸಚಿನ್ ದಾಖಲೆ ಬದಿಗೆ

ಸಚಿನ್ ದಾಖಲೆ ಬದಿಗೆ

ಟೆಸ್ಟ್‌ನಲ್ಲಿ 26 ಶತಕಗಳ ಮೂಲಕ ಸ್ಟೀವ್ ಸ್ಮಿತ್, ಸಚಿನ್ ತೆಂಡೂಲ್ಕರ್ ಅವರ ದಾಖಲೆ ಹಿಂದಿಕ್ಕಿದ್ದಾರೆ. ತೆಂಡೂಲ್ಕರ್ 26 ಟೆಸ್ಟ್ ಶತಕಗಳನ್ನು ಬಾರಿಸಲು 136 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರು. ವೇಗದ ಟೆಸ್ಟ್ ಶತಕದ ಪಟ್ಟಿಯಲ್ಲಿ ಸಚಿನ್ ಸದ್ಯ 3ನೇ ಸ್ಥಾನದಲ್ಲಿದ್ದಾರೆ.

ಪಟ್ಟಿಯಲ್ಲಿ ಭಾರತ, ಆಸೀಸ್ ಮಾತ್ರ

ಪಟ್ಟಿಯಲ್ಲಿ ಭಾರತ, ಆಸೀಸ್ ಮಾತ್ರ

ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 26 ಶತಕ ಭಾರಿಸಿದ 5 ಸ್ಥಾನಗಳನ್ನು ಗಮನಿಸಿದರೆ, ಮೊದಲ 5 ಸ್ಥಾನಗಳಲ್ಲಿ ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ಎರಡೇ ದೇಶಗಳು ಗುರುತಿಸಿಕೊಂಡಿವೆ. ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಬ್ರಾಡ್‌ಮನ್, ಸ್ಮಿತ್, ಸಚಿನ್ ಇದ್ದರೆ, 4ನೇ ಸ್ಥಾನದಲ್ಲಿ ಸುನಿಲ್ ಗವಾಸ್ಕರ್ (144 ಇನ್ನಿಂಗ್ಸ್), 5ನೇ ಸ್ಥಾನದಲ್ಲಿ ಮ್ಯಾಥ್ಯೂ ಹೇಡನ್ (145 ಇನ್ನಿಂಗ್ಸ್‌) ಇದ್ದಾರೆ.

ವಾರ್ನರ್ ಕೆಟ್ಟ ದಾಖಲೆ

ವಾರ್ನರ್ ಕೆಟ್ಟ ದಾಖಲೆ

ಇದೇ ಆ್ಯಷಸ್ ಟೆಸ್ಟ್‌ನಲ್ಲಿ ಆಸೀಸ್ ಓಪನರ್ ಡೇವಿಡ್ ವಾರ್ನರ್, 0ಗೆ ಔಟ್ ಆಗಿ ಕೆಟ್ಟ ದಾಖಲೆಗೆ ಕಾರಣರಾಗಿದ್ದಾರೆ. ಡೇವಿಡ್ ವಾರ್ನರ್ ಆ್ಯಷಸ್ 2019ರ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ 2 & 8, ಲಾರ್ಡ್ಸ್‌ನಲ್ಲಿ 3 & 5, ಲೀಡ್ಸ್‌ನಲ್ಲಿ 61 & 0 ಮತ್ತು ಮ್ಯಾನ್ಚೆಸ್ಟರ್‌ನಲ್ಲಿ 0 ಹೀಗೆ ಒಟ್ಟು 6 ಬಾರಿ ಸಿಂಗಲ್ ಡಿಜಿಟ್‌ಗೆ ಔಟ್ ಆದಂತಾಗಿದೆ.

Story first published: Thursday, September 5, 2019, 19:08 [IST]
Other articles published on Sep 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X