ಧೋನಿಯ ಅಭಿಮಾನಿ ಬಟ್ಲರ್: ಪಂದ್ಯ ಮುಗಿದ ಬಳಿಕ ಮಾಹಿಯಿಂದ ಜರ್ಸಿ ಗಿಫ್ಟ್

ಮಹೇಂದ್ರ ಸಿಂಗ್ ಧೋನಿ, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ ಅವರ ಅಭಿಮಾನಿಗಳಿಗೇನು ಕಮ್ಮಿ ಇಲ್ಲ. ವಿಶ್ವದ ಬಹುತೇಕ ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ಓರ್ವ ಆಟಗಾರನಾದರೂ ಮಾಹಿ ಅಭಿಮಾನಿಗಳಾಗಿರುವುದರಲ್ಲಿ ಸಂದೇಹವಿಲ್ಲ.
ಅಬುಧಾಬಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ವಿರುದ್ಧ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಅಜೇಯ 70ರನ್‌ಗಳಿಸಿದ ಜಾಸ್ ಬಟ್ಲರ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡ್ರು. ಈ ಪ್ರಶಸ್ತಿಗಿಂತ ಉತ್ತಮವಾದ ನೆನಪಿಡುವ ದಿನ ಅದಾಗಿತ್ತು.
ಅತ್ಯುತ್ತಮ ಇನ್ನಿಂಗ್ಸ್ ಜೊತೆಗೆ ಪಂದ್ಯ ಮುಗಿದ ಬಳಿಕ ಜಾಸ್ ಬಟ್ಲರ್‌ಗೆ ಎಂ.ಎಸ್. ಧೋನಿ ಅವರ ಜರ್ಸಿಯನ್ನು ನೀಡಿದಾಗ ಅವರ ದಿನವನ್ನು ಇನ್ನಷ್ಟು ವಿಶೇಷಗೊಳಿಸಲಾಯಿತು.
ಏಕೆಂದರೆ ಜಾಸ್ ಬಟ್ಲರ್, ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಶ್ರೇಷ್ಟ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿಯ ಅಭಿಮಾನಿ.
2019ರ ಐಸಿಸಿ ವಿಶ್ವಕಪ್ ವೇಳೆಯು ಜಾಸ್ ಬಟ್ಲರ್ ತಾನೊಬ್ಬ ಧೋನಿಯ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಇದರ ನಡುವೆ ಉತ್ತಮ ಪ್ರದರ್ಶನಕ್ಕೆ ಮಾಹಿಯಿಂದ ಸಿಕ್ಕ ಉಡುಗೊರೆ ಬಟ್ಲರ್ ಪಾಲಿಗೆ ಬಹು ವಿಶೇಷವಾಗಿತ್ತು.
ಜಾಸ್ ಬಟ್ಲರ್ ಅಜೇಯ 70 ರನ್ ಗಳಿಸಿದ ಪರಿಣಾಮ ರಾಜಸ್ಥಾನ್ ರಾಐಲ್ಸ್ 126ರನ್‌ಗಳ ಗುರಿಯನ್ನು ಎರಡು ಓವರ್ ಬಾಕಿ ಇರುವಂತೆ ತಲುಪಿತು. ಮತ್ತೊಂದೆಡೆ ಟೂರ್ನಿಯಲ್ಲಿ ಏಳನೇ ಪಂದ್ಯ ಸೋತ ಸಿಎಸ್‌ಕೆ ಪಾಯಿಂಟ್ಸ್ ಟೇಬಲ್‌ನಲ್ಲಿ ತಳ ಮುಟ್ಟಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications