For Quick Alerts
ALLOW NOTIFICATIONS  
For Daily Alerts
 

Jos Buttler: ಸೂರ್ಯಕುಮಾರ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಜೋಸ್ ಬಟ್ಲರ್

ಐಪಿಎಲ್ 2025 ರ 51ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಗುಜರಾತ್ ಟೈಟಾನ್ಸ್ 38 ರನ್‌ಗಳಿಂದ ಸೋಲಿಸಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ನಿಗದಿತ 20ನೇ ಓವರ್‍‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ಕೇವಲ 189 ರನ್ ಗಳಿಸಲು ಶಕ್ತವಾಯಿತು. ಗುಜರಾತ್ ತಂಡ ಬೃಹತ್ ಮೊತ್ತ ಕಲೆ ಹಾಕಲು ಜೋಸ್ ಬಟ್ಲರ್ ಕೂಡ ಪ್ರಮುಖ ಪಾತ್ರ ವಹಿಸಿದರು.

ಜೋಸ್ ಬಟ್ಲರ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುತ್ತಾ ಅರ್ಧಶತಕ ಸಿಡಿಸಿ ಮಿಂಚಿದರು. ಈ ಅರ್ಧಶತಕದ ನೆರವಿನಿಂದ ಅವರು ತಮ್ಮ ಹೆಸರಿನಲ್ಲಿ ಹೊಸ ದಾಖಲೆವೊಂದನ್ನು ಸೃಷ್ಟಿಸಿದರು.

Jos Buttler surpasses Suryakumar Yadav to create new record in IPL

ಹೈದರಾಬಾದ್ ವಿರುದ್ಧ ಜೋಸ್ ಬಟ್ಲರ್ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 64 ರನ್ ಗಳಿಸಿದರು. ಈ ಇನ್ನಿಂಗ್ಸ್ ಕಟ್ಟುವ ವೇಳೆ ಬಟ್ಲರ್ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನು ಮಾಡಿದರು. ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 4000 ರನ್ ಗಳಿಸಿದ ವಿಶ್ವದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜೋಸ್ ಬಟ್ಲರ್ ಅವರಿಗೂ ಮುನ್ನ ಸೂರ್ಯಕುಮಾರ್ ಯಾದವ್ ಅತಿ ಕಡಿಮೆ ಎಸೆತಗಳಲ್ಲಿ 4000 ರನ್ ಗಳಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದರು. ಅವರು 2714 ಎಸೆತಗಳನ್ನು ಎದುರಿಸಿ 4000 ರನ್ ಗಳಿಸಿದ್ದರು. ಈಗ ಜೋಸ್ ಬಟ್ಲರ್ 2677 ಎಸೆತಗಳನ್ನು ಆಡುವ ಮೂಲಕ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿದ್ದಾರೆ.

ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 4000 ರನ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್ ಮಾಜಿ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 2653 ಎಸೆತಗಳನ್ನು ಎದುರಿಸಿದ ನಂತರ ಈ ಸಾಧನೆ ಮಾಡಿದ್ದರು.

ಐಪಿಎಲ್‌ನಲ್ಲಿ ಕಡಿಮೆ ಎಸೆತಗಳಲ್ಲಿ 4000 ರನ್ ಗಳಿಸಿದವರು

ಕ್ರಿಸ್ ಗೇಲ್ (ವೆಸ್ಟ್‌ ಇಂಡೀಸ್)- 2653 ಎಸೆತಗಳು
ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ)- 2658 ಎಸೆತಗಳು
ಜೋಸ್ ಬಟ್ಲರ್ (ಇಂಗ್ಲೆಂಡ್)- 2677 ಎಸೆತಗಳು
ಸೂರ್ಯಕುಮಾರ್ ಯಾದವ್ (ಭಾರತ)- 2714 ಎಸೆತಗಳು
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)-2809 ಎಸೆತಗಳು

ಜೋಸ್ ಬಟ್ಲರ್ ಐಪಿಎಲ್‌ನಲ್ಲಿ ಸಾಕಷ್ಟು ಆಡಿರುವ ಅನುಭವವನ್ನು ಹೊಂದಿದ್ದಾರೆ. ಅವರು 117 ಪಂದ್ಯಗಳನ್ನು ಆಡಿದ್ದು, 4052 ಸರಾಸರಿಯಲ್ಲಿ 4052 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 7 ಶತಕಗಳು ಮತ್ತು 24 ಅರ್ಧಶತಕಗಳು ಕೂಡ ಇವೆ. ಬಟ್ಲರ್ 149 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 4052 ರನ್ ಗಳಿಸಿದ್ದಾರೆ. ಬಟ್ಲರ್ ಪ್ರಸ್ತುತ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದು, ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದುವರೆಗೆ ಆಡಿದ 10 ಪಂದ್ಯಗಳಲ್ಲಿ 5 ಅರ್ಧಶತಕಗಳು ಸೇರಿದಂತೆ 470 ರನ್ ಗಳಿಸಿದ್ದಾರೆ.

Story first published: Saturday, May 3, 2025, 9:14 [IST]
Other articles published on May 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+