Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ ಕ್ವಾರ್ಟರ್‌ಫೈನಲ್‌: ಉತ್ತರ ಪ್ರದೇಶ ಬೌಲಿಂಗ್ ದಾಳಿಗೆ ತತ್ತರಿಸಿದ ಕರ್ನಾಟಕ ತಂಡ

Karnataka

ಬೆಂಗಳೂರು: ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶ ನಡುವಿನ ರಣಜಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎದುರಾಳಿ ದಾಳಿಗೆ ಆತಿಥೇಯ ಕರ್ನಾಟಕ ತಂಡ ತತ್ತರಿಸಿದೆ. ಮೊದಲ ದಿನದಾಟದಂತ್ಯಕ್ಕೆ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 213ರನ್ ಕಲೆಹಾಕಿದೆ.

ಟಾಸ್ ಗೆದ್ದ ಉತ್ತರ ಪ್ರದೇಶ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಪರಿಣಾಮ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಅರ್ಧಶತಕದ ಜೊತೆಯಾಟ ಪಡೆದ್ರೂ ಸಹ ಮುಂದುವರಿಸಲು ವಿಫಲಗೊಂಡಿತು. ಕರ್ನಾಟಕ ಪರ ಮಯಾಂಕ್ ಅಗರ್ವಾಲ್ ಕೇವಲ 10ರನ್‌ಗಳಿಗೆ ಶಿವಂ ಮಾವಿ ಬೌಲಿಂಗ್‌ನಲ್ಲಿ ಔಟಾಗಿ ಪೆವಿಲಿಯನ್ ಸೇರಿಕೊಂಡರು.

ಇದಾದ ಬಳಿಕ ಆರ್. ಸಮರ್ಥ್ ಮತ್ತು ಕರುಣ್ ನಾಯರ್ ದ್ವಿತೀಯ ವಿಕೆಟ್‌ಗೆ ಪ್ರತಿರೋಧ ಒಡ್ಡುವ ಪ್ರಯತ್ನ ನಡೆಸಿದ್ರು. ಅರ್ಧಶತಕ ದಾಖಲಿಸಿ ಉತ್ತಮವಾಗಿ ಆಡುತ್ತಿದ್ದ್ ಸಮರ್ಥ್‌ ಅರ್ಧಶತಕದ ಬಳಿಕ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. 81 ಎಸೆತಗಳಲ್ಲಿ 57 ರನ್ ಕಲೆಹಾಕಿದ ಆರ್‌. ಸಮರ್ಥ್‌, ಸೌರಭ್ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳಿದ್ದವು.

ಎರಡನೇ ವಿಕೆಟ್ ಪತನದ ಬಳಿಕ 27ರನ್‌ಗಳಿಸಿ ಉತ್ತಮವಾಗೇ ಆಡ್ತಿದ್ದ ಕರುಣ್ ನಾಯರ್ ಶಿವಂ ಮಾವಿಗೆ ವಿಕೆಟ್‌ ಒಪ್ಪಿಸಿದ್ದು ತಂಡಕ್ಕೆ ಹೊಡೆತ ನೀಡಿತು. ಪರಿಣಾಮ ಕೃಷ್ಣಮೂರ್ತಿ ಸಿದ್ಧಾರ್ಥ್‌ ಮತ್ತು ನಾಯಕ ಮನೀಶ್ ಪಾಂಡೆ ತಂಡಕ್ಕೆ ಭದ್ರ ಜೊತೆಯಾಟವಾಡುವ ನಿರೀಕ್ಷೆ ಮೂಡಿಸಿದ್ರು.

ಪಾಂಡೆ ಹಾಗೂ ಸಿದ್ಧಾರ್ಥ್ ಜೊತೆಯಾಟಕ್ಕೆ ಮತ್ತೆ ಯುವ ಬೌಲರ್ ಶಿವಂ ಮಾವಿ ಬ್ರೇಕ್ ಹಾಕಿದ್ರು. 27ರನ್ ಕಲೆಹಾಕಿ ಉತ್ತಮ ಆಟವಾಡ್ತಿದ್ದ ಮನೀಶ್ ಪಾಂಡೆ ಸೌರಭ್ ಕುಮಾರ್‌ಗೆ ಎಸೆತದಲ್ಲಿ ಔಟಾದರು. ಮುಂದಿನ ಎಸೆತದಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಶ್ರೀನಿವಾಸ್ ಶರತ್ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ನೀಡಿತು.

ತಂಡಕ್ಕೆ ಆಧಾರವಾಗಿದ್ದ ಸಿದ್ಧಾರ್ಥ್‌ ದೊಡ್ಡ ಇನ್ನಿಂಗ್ಸ್ ಆಡುವ ಸೂಚನೆ ನೀಡಿದರೂ ಸಹ ಅವರಿಗೆ ಖೆಡ್ಡಾ ತೋಡಿದ್ದು ಅದೇ ಶಿವಂ ಮಾವಿ. ಯುವ ಬೌಲರ್ ಬೌಲಿಂಗ್ ಅರಿಯದೇ ಬೌಲ್ಡ್ ಆಗುವ ಮೂಲಕ 37ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ರು. ಕೃಷ್ಣಪ್ಪ ಗೌತಮ್ ಆಟ 12ರನ್‌ಗೆ ಮುಗಿಯಿತು.

Ranji

ಆದ್ರೆ ತಂಡಕ್ಕೆ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಆಧಾರವಾಗಿದ್ದು ಮೊದಲ ದಿನದಾಟದಂತ್ಯಕ್ಕೆ ಅಜೇಯ 26ರನ್ ಕಲೆಹಾಕಿದ್ದಾರೆ. ಬೌಲರ್ ವಿಜಯ್ ಕುಮಾರ್ ವೈಶಾಕ್ ಅಜೇಯ 12 ರನ್ ಸಿಡಿಸಿದ್ದಾರೆ. ಅಂತಿಮವಾಗಿ ಕರ್ನಾಟಕ ಮೊದಲ ದಿನದಲ್ಲಿ 7 ವಿಕೆಟ್ ಕಳೆದುಕೊಂಡು 213ರನ್ ಕಲೆಹಾಖಿ ಸಂಕಷ್ಟಕ್ಕೆ ಸಿಲುಕಿದೆ.

ಉತ್ತರ ಪ್ರದೇಶ ಪರ ಉತ್ತಮ ಬೌಲಿಂಗ್ ನಡೆಸಿದ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ 29 ಓವರ್‌ಗೆ 6 ಮೇಡನ್ ಸಹಿತ 67 ರನ್ ನೀಡಿ 4 ವಿಕೆಟ್ ಪಡೆದು ದಿನದ ಯಶಸ್ವಿ ಬೌಲರ್‌ ಎನಿಸಿಕೊಂಡ್ರು. ಜೊತೆಗೆ ಉತ್ತಮ ಸಾಥ್ ನೀಡಿದ ಶಿವಂ ಮಾವಿ 11 ಓವರ್‌ಗೆ 4 ಮೇಡನ್ ಸಹಿತ 40 ರನ್ ನೀಡಿ 3 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

South Africaಗೆ ನಡುಕ ಹುಟ್ಟಿಸಲು Dinesh Karthik ಹೇಗೆ ಪ್ರಾಕ್ಟೀಸ್ ಮಾಡ್ತಿದ್ದಾರೆ ನೋಡಿ | OneIndia Kannada

Story first published: Monday, June 6, 2022, 19:01 [IST]
Other articles published on Jun 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+