Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕರ್ನಾಟಕ vs ಉತ್ತರ ಪ್ರದೇಶ ರಣಜಿ ಕ್ವಾರ್ಟರ್‌ಫೈನಲ್‌: ಒಂದೇ ದಿನ 21 ವಿಕೆಟ್ ಪತನ, ಕರ್ನಾಟಕಕ್ಕೆ 198ರನ್ ಮುನ್ನಡೆ

Karnataka vs UP

ಆಲೂರಿನ ಕೆಎಸ್‌ಸಿಎ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶದ ನಡುವಿನ ರಣಜಿ ಕ್ವಾರ್ಟರ್‌ಫೈನಲ್‌ನಲ್ಲಿ ಉಭಯ ತಂಡಗಳ ಬೌಲರ್‌ಗಳು ಪರಾಕ್ರಮ ಮೆರೆದಿದ್ದಾರೆ. ಒಂದೇ ದಿನ 21 ವಿಕೆಟ್ ಉರುಳಿರುವುದು ಪಂದ್ಯದಲ್ಲಿ ಬೌಲರ್‌ಗಳ ಪಾರುಪತ್ಯವನ್ನ ಎತ್ತಿ ತೋರಿಸಿದೆ.

ಮೊದಲ ದಿನದಾಟದಲ್ಲಿ ಏಳು ವಿಕೆಟ್ ನಷ್ಟಕ್ಕೆ ಷ್ಟಕ್ಕೆ 213ರನ್ ಕಲೆಹಾಕಿದ್ದ ಕರ್ನಾಟಕ ಎರಡನೇ ದಿನದ ಆರಂಭಿಕ ಸೆಷನ್‌ನಲ್ಲಿ 253ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 40ರನ್‌ಗಳನ್ನಷ್ಟೇ ಹೆಚ್ಚಿಗೆ ಸೇರಿಸಿತು. ಆದ್ರೆ ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ಕರ್ನಾಟಕದ ಬೌಲಿಂಗ್ ದಾಳಿಗೆ ನಲುಗಿ ಹೋಯಿತು.

ಕರ್ನಾಟಕ ನೀಡಿದ್ದ 253ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್‌ ಮಾಡಿದ ಉತ್ತರ ಪ್ರದೇಶ ಕೇವಲ 155ರನ್‌ಗಳಿಗೆ ಆಲೌಟ್‌ ಆಯಿತು. ಆರಂಭಿಕ ಬ್ಯಾಟರ್‌ಗಳಾದ ಸಮರ್ಥ್‌ ಸಿಂಗ್ ವಿಜಯ್‌ಕುಮಾರ್ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ಔಟಾದ್ರೆ, ಆರ್ಯನ್ ಜುಯಲ್ 5ರನ್‌ಗೆ ರೋನಿತ್ ಮೊನೆ ಬೌಲಿಂಗ್‌ನಲ್ಲಿ ಔಟಾದ್ರು. ಇದ್ರ ಬೆನ್ಲ್ಲೇ ಉತ್ತರ ಪ್ರದೇಶದ ತಂಡದ ನಾಯಕ ಕರಣ್ ಶರ್ಮಾ ಕೇವಲ 2ರನ್‌ಗಳಿಗೆ ವೈಶಾಕ್‌ಗೆ ವಿಕೆಟ್ ಒಪ್ಪಿಸಿದ್ರು.

ನಾಲ್ಕನೇ ವಿಕೆಟ್‌ಗೆ ಪ್ರಿಯಾಂ ಗರ್ಗ್‌, ರಿಂಕು ಸಿಂಗ್ ಕೊಂಚ ಪ್ರತಿರೋಧ ಒಡ್ಡಿದ್ರು ಸಹ ಕರ್ನಾಟಕದ ಬೌಲರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಸಲಿಲ್ಲ. ರೋನಿತ್ ಮೊರೆ 39ರನ್ ಕಲೆಹಾಕಿದ್ದ ಗರ್ಗ್ ವಿಕೆಟ್ ಪಡೆದ್ರೆ, ಕೆ. ಗೌತಮ್ ರಿಂಕು ಸಿಂಗ್(33) ವಿಕೆಟ್ ಪಡೆದರು. ಆನಂತರ ನಡೆದಿದ್ದು ಕೇವಲ ಪೆವಿಲಿಯನ್ ಪರೇಡ್.

ವಿಕೆಟ್ ಕೀಪರ್ ಧೃವ್ 9, ಪ್ರಿನ್ಸಿ ಯಾದವ್ 0, ಸೌರಭ್ ಕುಮಾರ್ 0 ಬಹುಬೇಗನೆ ಔಟಾದ್ರು. ಆದ್ರೆ ಕೊನೆಯಲ್ಲಿ ಯುವ ಬೌಲರ್ ಶಿವಂ ಮಾಗಿ ವೇಗವಾಗಿ 32 ರನ್‌ಗಳಿಸಿ ತಂಡಕ್ಕೆ ಕೊಂಚ ನೆರವಾದ್ರು. ಯಶ್ ದಯಾಳ್ 13ರನ್‌ಗಳಿಸಿ ಔಟಾದ್ರೆ, ಮಾವಿ ಕೊನೆಯ ವಿಕೆಟ್ ಆಗಿ ಇನ್ನಿಂಗ್ಸ್‌ ಮುಗಿಸಿದ್ರು.

ಈ ಮೂಲಕ ಉತ್ತರ ಪ್ರದೇಶ 37.3 ಓವರ್‌ಗಳಿಗೆ 10 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿದ್ದು, ಹಿನ್ನಡೆ ಕಂಡಿತು. ಪರಿಣಾಮ ಕರ್ನಾಟಕವು 98ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆದ್ರೂ ಸಹ ನಂತರ ನಾಟಕೀಯ ಕುಸಿತ ಕಂಡಿತು.

ಎರಡನೇ ದಿನದಾಟದಂತ್ಯಕ್ಕೆ ಕರ್ನಾಟಕವು 8 ವಿಕೆಟ್ ನಷ್ಟಕ್ಕೆ 100 ರನ್ ಕಲೆಹಾಕಿದ್ದು, 198ರನ್‌ಗಳ ಮುನ್ನಡೆ ಸಾಧಿಸಿದೆ. ಕರ್ನಾಟಕ ಪರ ಮಯಾಂಕ್ ಅಗರ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ 22ರನ್, ಆರ್ ಸಮರ್ಥ್‌ 11, ಕರುಣ್ ನಾಯರ್ 10, ಕೃಷ್ಣಮೂರ್ತಿ ಸಿದ್ದಾರ್ಥ್‌ 15, ಮನೀಶ್ ಪಾಂಡೆ 4, ಶ್ರೇಯಸ್ ಗೋಪಾಲ್ 3, ಕೃಷ್ಣಪ್ಪ ಗೌತಮ್ 1, ವಿಜಯ್‌ಕುಮಾರ್ ವೈಶಾಕ್ 5ರನ್‌ಗಳಿಸಿ ದಿನದ ಕೊನೆಯ ವಿಕೆಟ್ ನೀಡಿದ್ರು. ಇನ್ನು ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಅಜೇಯ 10 ರನ್‌ ಹಾಕಿದ್ದು ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಉತ್ತರ ಪ್ರದೇಶ ಪರ ಸೌರಭ್ ಕುಮಾರ್ 3, ಅಕಿಂತ್ ರಜಪೂತ್ 2, ಪ್ರಿನ್ಸ್ ಯಾದವ್ ಹಾಗೂ ಶಿವಂ ಮಾವಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಎರಡನೇ ದಿನದಲ್ಲಿ 21 ವಿಕೆಟ್ ಉರುಳಿರುವುದು ನಿಜಕ್ಕೂ ಪಿಚ್‌ನ ಗುಣಮಟ್ಟದ ಕುರಿತು ಪ್ರಶ್ನೆ ಎತ್ತುವಂತಾಗಿದೆ. ಐದು ದಿನಗಳ ಪಂದ್ಯವು ಮೂರೇ ದಿನಕ್ಕೆ ಮುಕ್ತಾಯವಾಗುವ ಲಕ್ಷಣ ತೋರಿದೆ.

Story first published: Wednesday, June 8, 2022, 9:49 [IST]
Other articles published on Jun 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+