Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ 2019: ಪ್ಲೇ ಆಫ್ಸ್‌ ಸನಿಹದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಎದುರಾಯ್ತು ಆತಂಕ

ಡೆಲ್ಲಿ ತಂಡದ ನಿದ್ದೆ ಕೆಡಿಸುತ್ತಿದೆ ಪ್ಲೆ ಆಪ್ಸ್..!?
Kagiso Rabada deals with stiff back ahead of World Cup

ಹೊಸದಿಲ್ಲಿ, ಮೇ 02: ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿ ಪ್ಲೇ ಆಫ್ಸ್‌ ಮೆಟ್ಟಿಲೇರಿರುವ ಡೆಲ್ಲಿ ಕ್ಯಾಪಿಟಲ್ಸ್‌ (ಈ ಮೊದಲು ಡೆಲ್ಲಿ ಡೇರ್‌ಡೆವಿಲ್ಸ್‌) ತಂಡಕ್ಕೆ ಇದೀಗ ಆತಂಕ ಶುರುವಾಗಿದೆ.

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಆಡಿದ 12 ಪಂದ್ಯಗಳಿಂದ 25 ವಿಕೆಟ್‌ಗಳನ್ನು ಉರುಳಿಸಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಯಶಸ್ಸಿಗೆ ಕಾರಣರಾಗಿರುವ ವೇಗದ ಬೌಲರ್‌ ಕಗಿಸೊ ರಬಾಡ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕಿಂತಲೂ ಮುಂಬರುವ ವಿಶ್ವಕಪ್‌ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ದುಪ್ಪಟ್ಟು ಆತಂಕವನ್ನು ತಂದೊಡ್ಡಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ರಬಾಡಗೆ ವಿಶ್ರಾಂತಿ ನೀಡಲಾಗಿತ್ತು. ತಂಡದ ಪ್ರಮುಖ ಸ್ಟ್ರೈಕ್‌ ಬೌಲರ್‌ನ ಅನುಪಸ್ಥಿತಿಯಲ್ಲಿ ಡೆಲ್ಲಿ ಪಡೆ ಬರೋಬ್ಬರಿ 80 ರನ್‌ಗಳ ಹೀನಾಯ ಸೋಲಿನ ಹೊಡೆತ ತಿಂದಿತ್ತು. ಇದು ರಬಾಡ ಅವರ ಅನುಪಸ್ಥಿತಿಯಲ್ಲಿತಂಡ ಎದುರಿಸಬಹುದಾದ ದುಃಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಪ್ರಸಕ್ತ ಐಪಿಎಲ್‌ನಲ್ಲಿ ರಬಾಡ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ವಿಶ್ರಾಂತಿ ತೆಗೆದುಕೊಂಡಿದ್ದು, ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದವರ ಪೈಕಿ ಮುಂಚೂಣಿಯಲ್ಲಿದ್ದು ಪರ್ಪಲ್‌ ಕ್ಯಾಪ್‌ ಹೊಂದಿದ್ದಾರೆ.

ತನ್ನ ಪ್ರಮುಖ ವೇಗಿ ಡೇಲ್‌ ಸ್ಟೇನ್‌ ಐಪಿಎಲ್‌ನಲ್ಲಿ ಕೇವಲ 2 ಪಂದ್ಯಗಳನ್ನಾಡಿ ಭುಜದ ಗಾಯದ ಸಮಸ್ಯೆಗೆ ತುತ್ತಾಗಿರುವುದರಿಂದ ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಕಂಗಾಲಾಗಿದ್ದು, ಇದೀಗ ರಬಾಡ ಅವರ ಸ್ಥಿತಿ ಕುರಿತಾಗಿಯೂ ಚಿಂತೆಯಲ್ಲಿ ಮುಳುಗಿದೆ.

"ಅವರ ಸಾಮರ್ಥ್ಯ ಏನೆಂಬುದು ನಮಗೆ ತಿಳಿದಿದೆ. ಇನಿಂಗ್ಸ್‌ನ ಅಂತ್ಯದ ಓವರ್‌ಗಳಲ್ಲಿ ಅವರು ಅಧ್ಭುತ ಬೌಲರ್‌. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರ ಸೇವೆ ಅಗತ್ಯವಿತ್ತು. ಆದರೆ, ಅವರಿಗೆ ವಿಶ್ರಾಂತಿ ನೀಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ,'' ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಮಡದ ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

ರಬಾಡಗೆ ಬೆನ್ನು ನೋವಿನ ಸಮಸ್ಯೆ ಇದೀಗ ಬಂದಿರುವುದಲ್ಲ. ಕಳೆದ ವರ್ಷವೂ ಬೆನ್ನು ನೋವಿನಿಂದಾಗಿ 3 ತಿಂಗಳ ಸುದೀರ್ಘಾವಧಿಯ ವಿಶ್ರಾಂತಿ ತೆಗೆದುಕೊಂಡಿದ್ದರು. ಇದರಿಂದಾಗಿಯೇ ಕಳೆದ ವರ್ಷ ಐಪಿಎಲ್‌ನಲ್ಲೂ ಅವರು ಪಾಲ್ಗೊಂಡಿರಲಿಲ್ಲ.

Story first published: Thursday, May 2, 2019, 20:18 [IST]
Other articles published on May 2, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+