ತೈಮೂರ್‌ಗೆ ಐಪಿಎಲ್‌ನಲ್ಲಿ ಅವಕಾಶ ಸಿಗಬಹುದೇ ಎಂದ ಕರೀನಾ ಕಪೂರ್: ಪ್ರತಿಕ್ರಿಯಿಸಿದೆ ಡೆಲ್ಲಿ ಕ್ಯಾಪಿಟಲ್ಸ್

2008 ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಲೀಗ್ ಆಗಿ ಪರಿಣಮಿಸಿದೆ. ಐಪಿಎಲ್ ಅಂದರೆ ಅದು ಕ್ರೀಡಾ ಹಬ್ಬವಾಗಿದ್ದು ಭಾರತದಲ್ಲಿ ಮನೆ ಮಾತಾಗಿದೆ.
ಸದ್ಯ ಕೋವಿಡ್-19 ಸಾಂಕ್ರಾಮಿಕ ರೋಗದ ವಿಳಂಬದ ಹೊರತಾಗಿಯೂ, ಟಿ20 ಚಾಂಪಿಯನ್‌ಶಿಪ್‌ನ 13 ನೇ ಆವೃತ್ತಿಯು ಸೆಪ್ಟೆಂಬರ್ 19 ರಿಂದ ಯುಎಇಯ ದುಬೈ, ಅಬುಧಾಬಿ ಮತ್ತು ಶಾರ್ಜಾ ಎಂಬ ಮೂರು ಸ್ಥಳಗಳಲ್ಲಿ ನಡೆಯುತ್ತಿದೆ
ಈಗಾಗಲೇ ಟೂರ್ನಿಯು ಅರ್ಧ ಭಾಗ ಮುಗಿಸಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸದ್ಯ ಇಲ್ಲಿಯವರೆಗೆ ಬ್ರೇಕ್‌ನಲ್ಲಿದ್ದ ಬಾಲಿವುಡ್ ಚಲನಚಿತ್ರ ತಾರೆಯರು ವಿಶ್ವದ ಅತ್ಯಂತ ಲಾಭದಾಯಕ ಟಿ 20 ಲೀಗ್ ಅನ್ನು ನೋಡಿ ಆನಂದಿಸುತ್ತಿದ್ದಾರೆ.
ತೈಮೂರ್ ಬ್ಯಾಟಿಂಗ್ ಫೋಟೊ ಹಂಚಿಕೊಂಡ ಕರೀನಾ
ಕೆಲವು ದಿನಗಳ ಹಿಂದೆ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತಮ್ಮ ಮಗ ತೈಮೂರ್‌ನ ಫೋಟೋವೊಂದನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ರು. ಈ ಸುಂದರವಾದ ಚಿತ್ರದಲ್ಲಿ ತೈಮೂರ್ ಅವರ ಬ್ಯಾಟಿಂಗ್ ಕೌಶಲ್ಯವನ್ನು ತೋರಿಸುವುದನ್ನು ಕಾಣಬಹುದು.

ಕರೀನಾ ಮಾವ ಭಾರತದ ಮಾಜಿ ಕ್ರಿಕೆಟಿಗ
ವಿಶೇಷವೆಂದರೆ, ಕರೀನಾ ಅವರ ಪತಿ ಸೈಫ್ ಅಲಿ ಖಾನ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತೀಯ ಕ್ರಿಕೆಟಿಗರಾಗಿದ್ದರೆ, ಸೈಫ್ ಮತ್ತು ಅವರ ಪುತ್ರ ಇಬ್ರಾಹಿಂ ಕೂಡ ಕ್ರಿಕೆಟ್ ಉತ್ಸಾಹಿಗಳಾಗಿರುವುದರಿಂದ ನವಾಬ್ ಕುಟುಂಬದಲ್ಲಿ ಕ್ರಿಕೆಟ್ ಹಿಂದಿನಿಂದ ಬೆಳೆದು ಬಂದಿದೆ.
ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿಗೆ ಕಾರಣ ಹೇಳಿದ ಕೋಚ್ ಜಯವರ್ಧನೆ

ಐಪಿಎಲ್‌ನಲ್ಲಿ ತನ್ನ ಮಗನಿಗೆ ಅವಕಾಶ ಸಿಗುತ್ತಾ ಎಂದ ಕರೀನಾ!
ಮುದ್ದಾದ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಬಳಿಕ ಕರೀನಾ ಶೀರ್ಷಿಕೆಯು ಕ್ರಿಕೆಟ್ ಅಭಿಮಾನಿಗಳ ಗಮನವನ್ನು ಸೆಳೆಯಿತು. ಬಾಲಿವುಡ್ ದಿವಾ, "ಐಪಿಎಲ್‌ನಲ್ಲಿ ಯಾವುದಾದರೂ ಸ್ಥಾನವಿದೆಯೇ? ನಾನು ಕೂಡ ಆಡಬಲ್ಲೆ "ಎಂದು ತೈಮೂರ್ ಫೋಟೊವನ್ನು ಜನಪ್ರಿಯ ನಟಿ ಹರಿಬಿಟ್ಟಿದ್ದರು.

ಕರೀನಾ ಪ್ರಶ್ನೆಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿಕ್ರಿಯೆ
ಕರೀನಾ ಅವರ ಪೋಸ್ಟ್ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಗಮನ ಸೆಳೆದಿದೆ. ಅವರು ತೈಮೂರ್ ಅವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳುವ ಪ್ರಸ್ತಾಪವನ್ನು ಮಾಡಿದರು. ಜನಪ್ರಿಯ ನಟಿ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಕ್ಯಾಪಿಟಲ್ಸ್, ನಿಜವಾದ ನವಾಬ್ ಮಾತ್ರ ತಮ್ಮ ತಂಡದಲ್ಲಿ ಸೇರಿರುವುದರಿಂದ ಅವರು ತೈಮೂರ್ ಅವರೊಂದಿಗೆ ಇರಲು ಇಷ್ಟಪಡುತ್ತಾರೆ ಎಂದು ಬರೆದಿದ್ದಾರೆ.
"ಅವನು ನಮ್ಮೊಂದಿಗೆ ಘರ್ಜಿಸುವುದನ್ನು ನೋಡಲು ನಾವು ಇಷ್ಟಪಡುತ್ತೇವೆ. ನಿಜವಾದ ನವಾಬ್ ಯಾವಾಗಲೂ ರಾಜಧಾನಿಗೆ ಸೇರಿದವನು "ಎಂದು ಡಿಸಿ ಬರೆದಿದೆ
2020 ರ ಐಪಿಎಲ್ ಟೂರ್ನಿಯಲ್ಲಿ ಟೇಬಲ್-ಟಾಪರ್ ಗಳಿಸಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಆತ್ಮವಿಶ್ವಾಸ ಹೆಚ್ಚಿದೆ. ಫ್ರ್ಯಾಂಚೈಸಿಯು ಡೈನಾಮಿಕ್ ಬ್ಯಾಟ್ಸ್‌ಮನ್‌ಗಳು, ವಿಕೆಟ್ ತೆಗೆದುಕೊಳ್ಳುವ ಬೌಲರ್‌ಗಳು ಮತ್ತು ಅಸಾಧಾರಣ ಆಲ್‌ರೌಂಡರ್‌ಗಳ ಪರಿಪೂರ್ಣ ಮಿಶ್ರಣವನ್ನು ಹೊಂದಿರುವ ಸಮತೋಲಿತ ತಂಡವನ್ನು ಹೊಂದಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications