ಕೆಪಿಎಲ್ 2015 ವೇಳಾಪಟ್ಟಿ ಪ್ರಕಟ, ಸುದೀಪ್ ಟೀಂ ಎಂಟ್ರಿ
ಬೆಂಗಳೂರು, ಜೂ.25: ಕರ್ನಾಟಕ ಪ್ರಿಮಿಯರ್ ಲೀಗ್ 2015ರ ವೇಳಾಪಟ್ಟಿ ಅಧಿಕೃತವಾಗಿ ಘೋಷಣೆಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ ಕೆಎಸ್ ಸಿಎ ಅಧ್ಯಕ್ಷ ಅಶೋಕ್ ಆನಂದ್ ಅವರು ಹೊಸ ತಂಡ, ಆಟಗಾರರು, ವೇಳಾಪಟ್ಟಿ ಮುಂತಾದ ವಿವರಗಳನ್ನು ನೀಡಿದರು.
ಕನ್ನಡ ಚಿತ್ರರಂಗದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರ ಹೊಸ ತಂಡ ಹಾಗೂ ಆಲ್ ಸ್ಟಾರ್ ಸೆಲೆಬ್ರಿಟಿ ತಂಡ ಈ ಬಾರಿ ಕೆಪಿಎಲ್ ನ ಆಕರ್ಷಣೆಯಾಗಲಿದೆ. ಸುದೀಪ್ ಒಡೆತನದ 'ನಮ್ಮ ಶಿವಮೊಗ್ಗ' ತಂಡ ಕೆಪಿಎಲ್ ನಲ್ಲಿ ಈ ಸಲ ಆಡಲು ಅರ್ಹತೆ ಪಡೆದುಕೊಂಡಿದೆ.[ಮೈಸೂರು ವಾರಿಯರ್ಸ್ ಕೆಪಿಎಲ್ ಚಾಂಪಿಯನ್]

ಉಳಿದಂತೆ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಡೇವಿಡ್ ಜಾನ್ಸನ್ ಅವರನ್ನೊಳಗೊಂಡ ಆಲ್ ಸ್ಟಾರ್ ಸೆಲೆಬ್ರಿಟಿ ತಂಡ ಕೂಡಾ ಸ್ಪರ್ಧಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಶೋಕ್ ಆನಂದ್ ಪ್ರಕಟಿಸಿದರು.
ಕೆಪಿಎಲ್ ಟೂರ್ನಿ ಆಗಸ್ಟ್ 26 ರಿಂದ ಸೆಪ್ಟೆಂಬರ್ 13ರ ತನಕ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಿಟ್ಟುಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. [ಕಿಚ್ಚ ಸುದೀಪ್ ರಾಕ್ ಸ್ಟಾರ್ಸ್ ತಂಡ]
ಐಪಿಎಲ್ ಮಾದರಿಯಲ್ಲೇ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆರಂಭಿಸಿರುವ ಕೆಪಿಎಲ್ ಟ್ವೆಂಟಿ 20 ಟೂರ್ನಿಯ ನಾಲ್ಕನೇ ಆವೃತ್ತಿ ಇದಾಗಿದೆ.
ಕರ್ನಾಟಕ ಪ್ರಿಮಿಯರ್ ಲೀಗ್ ಭರ್ಜರಿಯಾಗಿ ಆರಂಭಗೊಂಡರೂ ನಂತರ ಮೂರು ವರ್ಷ ಟೂರ್ನಿ ನಡೆದಿರಲಿಲ್ಲ. ಕಳೆದ ವರ್ಷ ದಿವಂಗತ ಶ್ರೀಕಂಠದತ್ತ ಒಡೆಯರ್ ಸ್ಮರಣಾರ್ಥ ಒಡೆಯರ್ ಕೆಪಿಎಲ್ ಕಪ್ ಕೆಎಸ್ ಸಿಎ ಆಯೋಜಿಸಿತ್ತು.

ನಾಯಕ ವಿನಯ್ ಕುಮಾರ್ ಜೊತೆ ಕ್ರಿಕೆಟರ್ಸ್
ನಾಯಕ ವಿನಯ್ ಕುಮಾರ್ ಜೊತೆ ಕರ್ನಾಟಕದ ಕ್ರಿಕೆಟರ್ಸ್ ಗಳಾದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕೆಎಲ್ ರಾಹುಲ್, ಕರುಣ್ ನಾಯರ್, ಅಭಿಮನ್ಯು ಮಿಥುನ್, ಮಾಯಾಂಕ್ ಅಗರವಾಲ್, ಜೆ ಸುಚಿತ್ ಹಾಗೂ ಇತರರೂ ಈ ಬಾರಿಯೂ ಕೆಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಸುದೀಪ್ ತಂಡದಲ್ಲಿ ಮಾಜಿ ಕ್ರಿಕೆಟರ್ಸ್
ಮಾಜಿ ಟೆಸ್ಟ್ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ ಹಾಗೂ ಡೇವಿಡ್ ಜಾನ್ಸನ್ ಅವರು ಆಲ್ ಸ್ಟಾರ್ ಕ್ರಿಕೆಟ್ ತಂಡದಲ್ಲಿ ಆಡಲಿದ್ದು, ಕಿಚ್ಚ ಸುದೀಪ್ ಅವರು ಮುನ್ನಡೆಸಲಿದ್ದಾರೆ.

ನಮ್ಮ ಶಿವಮೊಗ್ಗ ಹೊಸ ತಂಡ
ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಿಜಾಪುರ, ಬಳ್ಳಾರಿ, ಬೆಳಗಾವಿ ಹಾಗೂ ಆಲ್ ಸ್ಟಾರ್ಸ್ ತಂಡಗಳ ಜೊತೆಗೆ ನಮ್ಮ ಶಿವಮೊಗ್ಗ ತಂಡ ಕೂಡಾ ಕೆಪಿಎಲ್ 2015ನಲ್ಲಿ ಆಡಲಿದೆ. ಚಿತ್ರದಲ್ಲಿ ಎಡದಿಂದ ಬಲಕ್ಕೆ ರಾಜುಗೌಡ ಬ್ರಿಜೇಶ್ ಪಟೇಲ್ ಹಾಗೂ ಸುದೀಪ್.

ಜುಲೈನಲ್ಲಿ ಹರಾಜು ಪ್ರಕ್ರಿಯೆ
ಜುಲೈ 25ರಂದು ಕೆಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ಫ್ರಾಂಚೈಸಿ 2 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಮಿಕ್ಕಂತೆ ಹರಾಜಿನಲ್ಲಿ ಆಟಗಾರರನ್ನು ಖರೀದಿಸಬಹುದಾಗಿದೆ. ಕಾರ್ಬನ್ ಸಂಸ್ಥೆ ಈ ವರ್ಷ ಕೂಡಾ ಟೈಟಲ್ ಸ್ಪಾನರ್ಸ್ ಆಗಿದೆ. ಪ್ರತಿಯೊಂದು ತಂಡವೂ 18 ಆಟಗಾರರಿಗಾಗಿ ಹರಾಜಿನಲ್ಲಿ ಬಿಡ್ ಮಾಡಬಹುದು.
ಕೆಎಸ್ ಸಿಎ ಅಧ್ಯಕ್ಷ ಅಶೋಕ್ ಆನಂದ್
ಕೆಎಸ್ ಸಿಎ ಅಧ್ಯಕ್ಷ ಅಶೋಕ್ ಆನಂದ್ ಅವರು ಹೊಸ ತಂಡ, ಆಟಗಾರರು, ವೇಳಾಪಟ್ಟಿ ಮುಂತಾದ ವಿವರಗಳನ್ನು ನೀಡಿದರು.
ಐಪಿಎಲ್ ನಲ್ಲಿ ಮಾಡಿದಂತೆ ಫ್ಯಾನ್ ಪಾರ್ಕ್
ಐಪಿಎಲ್ ನಲ್ಲಿ ಮಾಡಿದಂತೆ ಫ್ಯಾನ್ ಪಾರ್ಕ್ ರೂಪಿಸಲು ಯೋಚಿಸಲಾಗಿದೆ. ಟೂರ್ನಿಯ ಅಂತಿಮ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ಇದನ್ನು ಸಾಧ್ಯವಾಗಿಸಲಾಗುವುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications