ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತದ ಮಹಿಳಾ ಕ್ರಿಕೆಟರ್ ಕರುಣಾ ಜೈನ್

ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್‌ನ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ , ಕನ್ನಡತಿ ಕರುಣಾ ಜೈನಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ದೀರ್ಘಕಾಲದ ಕ್ರಿಕೆಟ್ ವೃತ್ತಿಜೀವನವನ್ನು ಜುಲೈ 24, 2022ರಂದು ಕೊನೆಗೊಳಿಸಿದ್ದಾರೆ.
ಭಾರತದ ಪರ 2005 ಮತ್ತು 2014ರ ಅವಧಿಯಲ್ಲಿ 5 ಟೆಸ್ಟ್ ಪಂದ್ಯ, 44 ಏಕದಿನ ಪಂದ್ಯ ಮತ್ತು 9 ಟಿ20 ಪಂದ್ಯಗಳನ್ನ ಆಡಿರುವ ಕರುಣಾ ಜೈನ್ ಕ್ರಮವಾಗಿ 195, 987, ಮತ್ತು 9 ರನ್ ಕಲೆಹಾಕಿದ್ದಾರೆ.

ವಿಕೆಟ್ ಹಿಂಬದಿಯಲ್ಲಿ ಕರುಣಾ ರೆಕಾರ್ಡ್
ಕರ್ನಾಟಕ ಮೂಲದ ಮಹಿಳಾ ವಿಕೆಟ್ ಕೀಪರ್ ಬ್ಯಾಟರ್ ಕರುಣಾ ಜೈನ್ ಹೆಸರಿನಲ್ಲಿ ಈಗಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ ಅಚ್ಚಳಿಯದೇ ಉಳಿದಿದೆ. ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಕರುಣಾ ಜೈನ್ ವಿಕೆಟ್ ಹಿಂಬದಿ 17 ಔಟ್ ಮಾಡಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಬೆಸ್ಟ್ ಆಗಿದೆ. ಇವರನ್ನ ಹೊರತುಪಡಿಸಿ ಭಾರತದ ಮಹಿಳಾ ಕೀಪರ್ ಅಂಜು ಜೈನ್ ವಿಕೆಟ್ ಹಿಂಬದಿ 23 ಬಲಿ ಪಡೆದಿದ್ದಾರೆ.
2004ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ ಕರುಣಾ ಜೈನ್ ಲಕ್ನೋದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 64ರನ್ ಕಲೆಹಾಕಿದ ಬಳಿಕ ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡರು. ಜೈನ್ ಒಡಿಐ ಚೊಚ್ಚಲ ಪಂದ್ಯದಲ್ಲಿ ಅಜೇಯ 68 ರನ್ ಗಳಿಸುವ ಮೂಲಕ, ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಗಳಿಸಿದ ಕೇವಲ ಐದನೇ ಭಾರತೀಯ ಮಹಿಳೆಯಾಗಿದ್ದಾರೆ.
36 ವರ್ಷ ವಯಸ್ಸಿನ ಕರುಣಾ ಜೈನ್ 2014ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಏಕದಿನ ಮತ್ತು ಟೆಸ್ಟ್ ಪಂದ್ಯವನ್ನಾಡಿದರು.
ಇನ್‌ಸ್ಟಾಗ್ರಾಮ್‌ನಲ್ಲಿ ನಿವೃತ್ತಿ ನಿರ್ಧಾರ ಘೋಷಿಸಿದ ಕರುಣಾ ಜೈನ್
ಭಾರತದ ಹಿರಿಯ ಮಹಿಳಾ ಕ್ರಿಕೆಟರ್ ಕರುಣಾ ಜೈನ್ ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
"ಮೊದಲಿನಿಂದಲೂ ನನ್ನ ಕ್ರಿಕೆಟ್ ಪಯಣದ ಭಾಗವಾಗಿರುವ ನನ್ನ ಎಲ್ಲಾ ತರಬೇತುದಾರರು, ಸಹಾಯಕ ಸಿಬ್ಬಂದಿಗಳು ಮತ್ತು ನನ್ನ ವೃತ್ತಿಜೀವನದ ಉದ್ದಕ್ಕೂ ಭಾಗವಾಗಿರುವ ನನ್ನ ಸಹ ಆಟಗಾರರಿಗೆ ಧನ್ಯವಾದಗಳನ್ನು ಹೇಳಲು ನಾನು ಈ ಅವಕಾಶವನ್ನು ಬಯಸುತ್ತೇನೆ.
"ಪ್ರತಿಯೊಬ್ಬರೂ ಆಟ ಮತ್ತು ಜೀವನದ ಬಗ್ಗೆ ವಿಭಿನ್ನವಾದದ್ದನ್ನು ನನಗೆ ಕಲಿಸಿದ್ದಾರೆ, ಅದು ನನ್ನನ್ನು ಇಂದು ಆಟಗಾರ ಮತ್ತು ವ್ಯಕ್ತಿಯನ್ನಾಗಿ ಮಾಡಿದೆ. ಇದು ನನಗೆ ಸಾಧ್ಯವಾದ ಅದ್ಭುತ ಪ್ರಯಾಣವಾಗಿದೆ ಮತ್ತು ನನ್ನ ಏರಿಳಿತದ ಸಮಯದಲ್ಲಿ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ "ಎಂದು ಕರುಣಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆಯಲ್ಲಿ ತನಗೆ ಬೆಂಬಲಿಸಿದ ಕುಟುಂಬಕ್ಕೂ ಕೂಡ ಧನ್ಯವಾದ ಅರ್ಪಿಸಿದ್ದಾರೆ.
"ನನ್ನ ಕುಟುಂಬವು ದೊಡ್ಡ ಬೆಂಬಲವಾಗಿದೆ ಮತ್ತು ನನ್ನ ಸಹೋದರ ಸ್ವತಃ ಕ್ರಿಕೆಟಿಗನಾಗಿರುವುದರಿಂದ ಆಟವನ್ನು ಅಳವಡಿಸಿಕೊಳ್ಳಲು ಮತ್ತು ನಾನು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅತ್ಯುತ್ತಮವಾದದ್ದನ್ನು ನೀಡಲು ನನಗೆ ಸುಲಭವಾಯಿತು. ಅವರು ಮಾಡಿದ ಅಚಲ ಬೆಂಬಲ ಮತ್ತು ತ್ಯಾಗದಿಂದಾಗಿ ನಾನು ಕ್ರೀಡೆಯನ್ನು ಮುಂದುವರಿಸಲು ಸಾಧ್ಯವಾಯಿತು ಮತ್ತು ಬಹಳ ಸಮಯದವರೆಗೆ ಕೊಡುಗೆ ನೀಡುವಂತಾಗಿದೆ'' ಎಂದು ಕರುಣಾ ಹೇಳಿದ್ದಾರೆ.
ಈ ಭಾರತೀಯ ತಂಡದಲ್ಲಿ ಶಿಖರ್ ಧವನ್‌ಗೆ ಸ್ಥಾನವಿಲ್ಲ; ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ

ಬಿಸಿಸಿಐಗೆ ಧನ್ಯವಾದ ತಿಳಿಸಿದ ಕರುಣಾ ಜೈನ್
"ಏರ್ ಇಂಡಿಯಾ, ಕರ್ನಾಟಕ ಮತ್ತು ಪಾಂಡಿಚೇರಿಯನ್ನು ಒಳಗೊಂಡಂತೆ ನಾನು ಪ್ರತಿನಿಧಿಸಿರುವ ಬಿಸಿಸಿಐ ಮತ್ತು ರಾಜ್ಯ ಅಸೋಸಿಯೇಷನ್‌ಗೆ ಮತ್ತು ಅವರು ನೀಡಿದ ಎಲ್ಲಾ ಬೆಂಬಲಕ್ಕೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಯಸುತ್ತೇನೆ.
"ಬಹಳಷ್ಟು ಸಂತೋಷ ಮತ್ತು ತೃಪ್ತಿಯ ಭಾವನೆಗಳೊಂದಿಗೆ, ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನನ್ನ ನಿವೃತ್ತಿಯ ಈ ಘೋಷಣೆಯನ್ನು ಮಾಡಲು ನಾನು ಸಮರ್ಥನಾಗಿದ್ದೇನೆ ಮತ್ತು ಆಟಕ್ಕೆ ಮತ್ತೆ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ" ಎಂದು ಕರುಣಾ ಜೈನ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಆಸ್ತಿ ಮೌಲ್ಯ ಎಷ್ಟಿರಬಹುದು? 2022ರ ಆದಾಯ ಎಷ್ಟು?

ಟೆಸ್ಟ್, ಏಕದಿನ, ಟಿ20ಯಲ್ಲಿ ಕರುಣಾ ಜೈನ್ ಅಂಕಿ-ಅಂಶಗಳು
ವೆಸ್ಟ್ ಇಂಡೀಸ್ ವಿರುದ್ಧ ಮಾರ್ಚ್ 06, 2014ರಂದು ಏಕದಿನ ಕ್ರಿಕೆಟ್‌ಗೆ ಕಾಲಿಟ್ಟ ಕರುಣಾ ಜೈನ್ ಒಟ್ಟು 44 ಏಕದಿನ ಪಂದ್ಯಗಳನ್ನಾಡಿದ್ದು, 29.02ರ ಸರಾಸರಿಯಲ್ಲಿ 987ರನ್ ಕಲೆಹಾಕಿದ್ದಾರೆ. 1 ಶತಕ ಮತ್ತು 9 ಅರ್ಧಶತಕಗಳನ್ನ ಸಿಡಿಸಿರುವ ಕರುಣಾ ಜೈನ್, ವಿಕೆಟ್ ಹಿಂಬದಿಯಲ್ಲಿ 32 ಕ್ಯಾಚ್ ಮತ್ತು 26 ಸ್ಟಂಪಿಂಗ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನವೆಂಬರ್ 21, 2005ರಂದು ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡಿರುವ ಕರುಣಾ ತನ್ನ ವೃತ್ತಿ ಜೀವನದಲ್ಲಿ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನಾಡಿದ್ದು, 195ರನ್‌ಗಳನ್ನ ಕಲೆಹಾಕಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧ ಜನವರಿ 28, 2014ರಂದು ಟಿ20 ಕ್ರಿಕೆಟ್‌ಗೆ ಕಾಲಿಟ್ಟ ಈಕೆ, ಚುಟುಕು ಫಾರ್ಮೆಟ್‌ನಲ್ಲಿ ಮಿಂಚಲು ವಿಫಲಗೊಂಡಿದ್ದಾರೆ. 9 ಪಂದ್ಯಗಳಲ್ಲಿ 9 ರನ್ ಕಲೆಹಾಕಿದ್ದಾರೆ.
ಇವರ ವೃತ್ತಿಜೀವನದಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ್ದು, ದೇಶೀಯ ಟೂರ್ನಮೆಂಟ್‌ನಲ್ಲಿ ಕರ್ನಾಟಕ ಹಾಗೂ ಸೌತ್ ಜೋನ್ ಮಹಿಳಾ ತಂಡದ ಪರ ಆಡಿದ್ದಾರೆ.
ಇನ್ನು ಅವರು 2005 ರ ಮಹಿಳಾ ವಿಶ್ವಕಪ್ ತಂಡದ ಭಾಗವಾಗಿದ್ದರು, ಅಲ್ಲಿ ಭಾರತವು ರನ್ನರ್-ಅಪ್ ಆಗಿ ಟೂರ್ನಿ ಮುಗಿಸಿತು. ಬ್ಯಾಕ್-ಅಪ್ ವಿಕೆಟ್ ಕೀಪರ್ ಆಗಿ ಅವರು 2013 ರಲ್ಲಿ ಮಹಿಳಾ ವಿಶ್ವಕಪ್ ಮತ್ತು 2014 ರಲ್ಲಿ ಮಹಿಳಾ ಟಿ20 ವಿಶ್ವಕಪ್ ಆಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications