ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಆಸ್ತಿ ಮೌಲ್ಯ ಎಷ್ಟಿರಬಹುದು? 2022ರ ಆದಾಯ ಎಷ್ಟು?

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಸ್ಟಾರ್ ಆಟಗಾರರಿಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ವಿಶ್ರಾಂತಿ ನೀಡಿದೆ. ಹೀಗಾಗಿ ಶಿಖರ್ ಧವನ್ ಭಾರತ ತಂಡವನ್ನು ಕೆರಿಬಿಯನ್ ಅಂಗಳದಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಶಿಖರ್ ಧವನ್ ಭಾರತ ಕ್ರಿಕೆಟ್ ತಂಡದ ನೆಚ್ಚಿನ ಆಟಗಾರರಲ್ಲಿ ಒಬ್ಬರು. ಭಾರತವು ತನ್ನ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದಾಗ ಧವನ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದರು. ಪ್ರಸ್ತುತ, ಭಾರತವು ಒಡಿಐ ಸ್ವರೂಪದಲ್ಲಿ ಮಾತ್ರ ಶಿಖರ್ ಧವನ್‌ಗೆ ಅವಕಾಶವನ್ನು ನೀಡುತ್ತಿದೆ. ಆದರೆ ಒಂದು ಸಮಯದಲ್ಲಿ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡದ ಆಧಾರ ಸ್ತಂಭವಾಗಿದ್ದರು.

ಶಿಖರ್ ಧವನ್ ಆಸ್ತಿ ಮೌಲ್ಯ ಎಷ್ಟಿರಬಹುದು?
ಭಾರತೀಯ ಅಭಿಮಾನಿಗಳಿಂದ ಗಬ್ಬರ್ ಎಂದು ಕರೆಯುವ ಶಿಖರ್ ಧವನ್ ಅವರ ಆಸ್ತಿ ಎಷ್ಟು ಗೊತ್ತಾ? ಇದುವರೆಗಿನ ವೃತ್ತಿ ಜೀವನದಲ್ಲಿ ಕೋಟಿ ಕೋಟಿ ಗಳಿಸುವಲ್ಲಿ ಧವನ್ ಯಶಸ್ವಿಯಾಗಿದ್ದಾರೆ. ಅವರು 2010 ರಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಸಾಕಷ್ಟು ಹಣವನ್ನ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯವು 110 ಕೋಟಿಗೂ ಹೆಚ್ಚು. ಧವನ್ ಬಿಸಿಸಿಐನಿಂದ ಬರುವ ಆದಾಯದ ಹೊರತಾಗಿ ಜಾಹೀರಾತುಗಳಿಂದ ದೊಡ್ಡ ಆದಾಯವನ್ನು ಹೊಂದಿದ್ದಾರೆ.

ಅನೇಕ ಬ್ರ್ಯಾಂಡ್‌ಗಳಿಗೆ ಶಿಖರ್ ರಾಯಭಾರಿ
ಶಿಖರ್ ಧವನ್ ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿ. ಈಗಾಗಲೇ ಐಪಿಎಲ್ ಮೂಲಕ ಕೋಟಿ ಕೋಟಿ ಗಳಿಸಿದ್ದಾರೆ. ಧವನ್ ಪ್ರಸ್ತುತ ಬಿಸಿಸಿಐನ ಸಿ ಗುತ್ತಿಗೆಯಲ್ಲಿದ್ದಾರೆ. ಇದರ ಪ್ರಕಾರ ಧವನ್ ಪ್ರತಿ ವರ್ಷ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಮೈದಾನದಲ್ಲಿ ವಿಭಿನ್ನ ಸ್ಟೈಲ್ ನಿಂದ ಅಭಿಮಾನಿಗಳನ್ನು ರಂಜಿಸುತ್ತಿರುವ ಸ್ಟಾರ್ ಗಳಲ್ಲಿ ಧವನ್ ಕೂಡ ಒಬ್ಬರು.
ಪ್ರಸ್ತುತ ಧವನ್ ಅವರ ವಾರ್ಷಿಕ ಸರಾಸರಿ ಗಳಿಕೆ ಸುಮಾರು 12 ಕೋಟಿ ರೂಪಾಯಿಗೆ ಏರಿದೆ. ಧವನ್ ಸದ್ಯ ಐಪಿಎಲ್‌ನಲ್ಲಿ 8.25 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಏಕದಿನ ಪಂದ್ಯಗಳಲ್ಲಿ ಧವನ್ ಪಂದ್ಯದ ಶುಲ್ಕವಾಗಿ 6 ಲಕ್ಷ ರೂ. ಪಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಧವನ್ ಆದಾಯದಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಒಂದೇ ಇನ್ನಿಂಗ್ಸ್‌ನಲ್ಲಿ 400ಕ್ಕೂ ಹೆಚ್ಚು ರನ್ ಕಲೆಹಾಕಿದ ಸ್ಯಾಮ್: ಬ್ರಿಯಾನ್ ಲಾರಾ ದಾಖಲೆ ಪಟ್ಟಿಗೆ ಸೇರ್ಪಡೆ

ಧವನ್ ಪ್ರಮುಖ ಜಾಹೀರಾತುಗಳು
ಧವನ್ ಪ್ರಸ್ತುತ ಜಾಹೀರಾತಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧವನ್ Jio, Nerolac Paints, Mutual Funds, Stansbeam, Dream 11, Ariel India ಮತ್ತು V Star ಜೊತೆಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಧವನ್ ಅಭಿಮಾನಿಗಳನ್ನು ಖುಷಿಪಡಿಸುವ ಸ್ಟಾರ್ ಆಗಿರುವುದರಿಂದ ಅವರ ಜಾಹೀರಾತುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಡಿಸೆಂಬರ್ 2022ರವರೆಗೆ ಟೀಂ ಇಂಡಿಯಾದ ಸಂಪೂರ್ಣ ಕ್ರಿಕೆಟ್ ವೇಳಾಪಟ್ಟಿಯ ಅಪ್‌ಡೇಟ್

ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಇಲ್ಲ!
ಕಾರುಗಳ ಬಗ್ಗೆ ಶಿಖರ್‌ಗೆ ಅತಿಯಾದ ವ್ಯಾಮೋಹ ಇಲ್ಲದಿದ್ದರೂ, ಧವನ್ ಬಳಿಯಲ್ಲಿ ಐಷಾರಾಮಿ ಕಾರುಗಳು ಖಂಡಿತವಾಗಿಯೂ ಇವೆ. BMW M8 Coupe, Audi A, Mercedes GL350 CDi ಮತ್ತು ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಧವನ್ ಹೊಂದಿರುವ ಎಲ್ಲಾ ಪ್ರಮುಖ ವಾಹನಗಳಾಗಿವೆ. 2015ರಲ್ಲಿ ಧವನ್ ಆಸ್ಟ್ರೇಲಿಯದಲ್ಲಿ ಬೃಹತ್ ಮನೆಯೊಂದನ್ನು ಖರೀದಿಸಿದ್ದರು. ಧವನ್ ಪ್ರಸ್ತುತ ದೆಹಲಿಯಲ್ಲಿ 5 ಕೋಟಿಗೂ ಹೆಚ್ಚು ಮೌಲ್ಯದ ಮನೆಯಲ್ಲಿ ನೆಲೆಸಿದ್ದಾರೆ.
ಕಳೆದ ವರ್ಷ ಅವರು ತಮ್ಮ ಪತ್ನಿ ಆಯೇಷಾ ಮುಖರ್ಜಿಗೆ ವಿಚ್ಛೇದನ ನೀಡಿದ್ದರು. ಈ ಮೂಲಕ ತಮ್ಮ 9 ವರ್ಷಗಳ ವೈವಾಹಿಕ ಜೀವನವನ್ನ ಕೊನೆಗೊಳಿಸಿದರು. ಆದರೆ ಧವನ್ ತಮ್ಮ ಕೌಟುಂಬಿಕ ಜೀವನವನ್ನು ಬದಿಗಿಟ್ಟು ಕ್ರಿಕೆಟ್ ಕಡೆಗೆ ಗಮನ ಹರಿಸಲು ಸಮರ್ಥರಾಗಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications