For Quick Alerts
ALLOW NOTIFICATIONS  
For Daily Alerts
 

ಭೇಟಿ ನೀಡುವುದಕ್ಕಾಗಿ ಕೇರಳ ಸಂಪೂರ್ಣ ಸುರಕ್ಷಿತವಾಗಿದೆ: ವಿರಾಟ್ ಕೊಹ್ಲಿ

Kerala is absolutely safe to come to Virat Kohli writes in special note

ತಿರುವನಂತಪುರಂ, ಅಕ್ಟೋಬರ್ 31: ದೇವರ ನಾಡೆಂಡು ಕರೆಯಲ್ಪಡುವ ಕೇರಳ, ದೇಸಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ಇತ್ತೀಚೆಗೆ ಪ್ರವಾಹದಿಂದಾಗಿ ಕೇರಳ ಭಾಗಶಃ ಅಸ್ತವ್ಯಸ್ತಗೊಂಡಿತ್ತು. ಆದರೆ ಪ್ರವಾಸಿಗರು ಭೇಟಿ ಕೊಡುವುದಕ್ಕಾಗಿ ಕೇರಳ ಈಗ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಅಗಸ್ಟ್ ತಿಂಗಳಲ್ಲಿ ಕೇರಳ ರಾಜ್ಯವನ್ನು ಪ್ರವಾಹ ಕಾಡಿಸಿತ್ತು. ಹತ್ತಿರ 500 ಮಂದಿಯನ್ನು ಇದೇ ನೆರೆ ಹಾವಳಿ ಬಲಿ ತೆಗೆದುಕೊಂಡಿತ್ತು. ಸುಮಾರು ನೂರು ವರ್ಷಗಳ ಬಳಿಕ ಕಾಡಿದ್ದ ಈ ಭೀಕರ ಪ್ರವಾಹದಿಂದಾಗಿ ಇಡೀ ಕೇರಳವೇ ತತ್ತರಿಸಿತ್ತು. ಆದರೆ ಇದೀಗ ಕೇರಳ ಸಂಪೂರ್ಣ ಚೇತರಿಸಿಕೊಂಡಿದೆ. ಮತ್ತದೆ ಸೌಂದರ್ಯದ ತಾಣವಾಗಿ ಪ್ರವಾಸಿಗರನ್ನು ಕರೆಯತೊಡಗಿದೆ.

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಕೇರಳದ ತಿರುವನಂತಪುರಕ್ಕೆ ತಲುಪಿದೆ. ಪ್ರವಾಹ ಭೀತಿಯನ್ನು ಹೋಗಲಾಡಿಸೋಕೆ ಕೊಹ್ಲಿ ಕೇರಳದ ಬಗ್ಗೆ ವಿಶೇಷ ಸೂಚನೆಯೊಂದನ್ನು ಬರೆದುಕೊಂಡಿದ್ದಾರೆ. 'ಭೇಟಿ ನೀಡುವುದಕ್ಕಾಗಿ ಕೇರಳ ಸಂಪೂರ್ಣ ಸುರಕ್ಷಿತವಾಗಿದೆ. ಇಲ್ಲಿಗೆ ಬರಲು ತುಂಬಾ ಖುಷಿಯೆನಿಸುತ್ತೆ' ಎಂದು ತನ್ನ ಕೈಯಾದರೆ ಚಂದದ ಸಾಲುಗಳನ್ನು ಕೊಹ್ಲಿ ಗೀಚಿದ್ದಾರೆ.

'ಕೇರಳದ ಸೌಂದರ್ಯವನ್ನು ಎಲ್ಲರೂ ಸವಿಯಬೇಕು. ಇಲ್ಲಿಗೆ ಮತ್ತೆ ಭೇಟಿ ಕೊಡುವುದಕ್ಕಾಗಿ ಈ ತಾಣ ಸಂಪೂರ್ಣ ಸುರಕ್ಷಿತವಾಗಿದೆ ಎಂದು ನಿಮ್ಮೆಲ್ಲರಿಗೂ ನಾನು ಶಿಫಾರಸು ಮಾಡುತ್ತೇನೆ' ಎಂದು ಕೊಹ್ಲಿ ಬರೆದಿರುವುದು ಜಾಲತಾಣಗಳಲ್ಲಿ ಓಡಾಡುತ್ತಿವೆ. 5ನೇ ಏಕದಿನ ಪಂದ್ಯ ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 1) 1.30pmಗೆ ಆರಂಭಗೊಳ್ಳಲಿದೆ.

Story first published: Wednesday, October 31, 2018, 15:52 [IST]
Other articles published on Oct 31, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+