ಡೆಹ್ರಾಡೂನ್, ಅಕ್ಟೋಬರ್ 16: ಭಾರತದ ಡೆಹ್ರಾಡೂನ್ನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್ ನಡುವಿನ ಏಕದಿನ ಮತ್ತು ಟಿ20ಐ ಸರಣೆಗೆ ವೆಸ್ಟ್ ಇಂಡೀಸ್ ತಂಡವನ್ನು ಕೀರನ್ ಪೊಲಾರ್ಡ್ ಮುನ್ನಡೆಸಲಿದ್ದಾರೆ. ಮೂರೂ ಮಾದರಿಯ ವಿಂಡೀಸ್ ತಂಡಲ್ಲಿ ಸ್ಥಾನ ಪಡೆದಿರುವ ಜೇಸನ್ ಹೋಲ್ಡರ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಟಿ20 ಟೂರ್ನಮೆಂಟ್ ನಲ್ಲಿ ಬ್ಯಾಟ್ ಬೀಸಲಿರುವ ಸಚಿನ್, ಸೆಹ್ವಾಗ್, ಲಾರಾ
ಇತ್ತೀಚೆಗೆ ಮುಕ್ತಾಯಗೊಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅನೇಕ ಆಟಗಾರರು ವೆಸ್ಟ್ ಇಂಡೀಸ್ ಟಿ20ಐ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ವಿಂಡೀಸ್-ಅಫ್ಘಾನ್ ಸರಣಿ ನವೆಂಬರ್ 5ರಿಂದ ಟಿ20 ಸರಣಿ ಮೂಲಕ ಆರಂಭಗೊಳ್ಳಲಿದೆ. ಸರಣಿಯು 3 ಟಿ20ಐ, 3 ಏಕದಿನ ಮತ್ತು 1 ಟೆಸ್ಟ್ ಪಂದ್ಯವನ್ನು ಒಳಗೊಂಡಿದೆ.
ಕೋಪದಲ್ಲಿ ಯಾಮಾರಿ ಕೈ ಮುರಿದುಕೊಂಡ ಆಸ್ಟ್ರೇಲಿಯಾ ಆಲ್ ರೌಂಡರ್!
ವೆಸ್ಟ್ ಇಂಡೀಸ್ ಟಿ20 ತಂಡ: ಕೀರನ್ ಪೊಲಾರ್ಡ್ (ಸಿ), ನಿಕೋಲಸ್ ಪೂರನ್, ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮೈಯರ್, ಶೆರ್ಫೇನ್ ರುದರ್ಫೋರ್ಡ್, ಬ್ರಾಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಜೇಸನ್ ಹೋಲ್ಡರ್, ಹೇಡನ್ ವಾಲ್ಷ್ ಜೂನಿಯರ್, ಲೆಂಡ್ಲ್ ಸಿಮ್ಮನ್ಸ್, ಖಾರಿ ಪಿಯರೆ, ಶೆಲ್ಡನ್ ಕಾಟ್ರೆಲ್, ದೆನೇಶ್ ರಾಮ್ದಿನ್, ಕೆಸ್ರಿಕ್ ವಿಲಿಯಮ್ಸ್, ಅಲ್ಜಾರಿ ಜೋಸೆಫ್.
ಕಣ್ಸನ್ನೆ ಹುಡುಗೀನೇ ಸರಿಗಟ್ಟೋ ಕ್ರಿಕೆಟ್ ಸುಂದರಿ ಪ್ರಿಯಾ ಪೂನಿಯಾ!
ವಿಂಡೀಸ್ ಏಕದಿನ ತಂಡ: ಕೀರನ್ ಪೊಲಾರ್ಡ್ (ಸಿ), ಶೈ ಹೋಪ್, ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮೈಯರ್, ಸುನಿಲ್ ಆಂಬ್ರಿಸ್, ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಹೇಡನ್ ವಾಲ್ಷ್ ಜೂನಿಯರ್, ಖಾರಿ ಪಿಯರೆ, ಶೆಲ್ಡನ್ ಕಾಟ್ರೆಲ್, ಕೀಮೋ ಪಾಲ್, ಅಲ್ಜಾರಿ ಜೋಸೆಫ್, ರೊಮಾರಿಯೋ ಶೆಫರ್ಡ್.
ಆಸೀಸ್ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಇನ್ಸ್ಟಾಗ್ರಾಮ್ನಲ್ಲಿ ಅಶ್ಲೀಲ ಚಿತ್ರ
ವಿಂಡೀಸ್ ಟೆಸ್ಟ್ ತಂಡ: ಜೇಸನ್ ಹೋಲ್ಡರ್ (ಸಿ), ಶೈ ಹೋಪ್, ಜಾನ್ ಕ್ಯಾಂಪ್ಬೆಲ್, ಕ್ರೈಗ್ ಬ್ರಾಥ್ವೈಟ್, ಶಿಮ್ರಾನ್ ಹೆಟ್ಮಿಯರ್, ಶಮ್ರಾ ಬ್ರೂಕ್ಸ್, ರೋಸ್ಟನ್ ಚೇಸ್, ಶೇನ್ ಡೌರಿಚ್, ಸುನಿಲ್ ಆಂಬ್ರಿಸ್, ಜೋಮೆಲ್ ವಾರ್ರಿಕನ್, ರಾಹಕೀಮ್ ಕಾರ್ನ್ವಾಲ್, ಕೆಮರ್ ರೋಚ್, ಕೀಮೋ ಪಾಲ್, ಅಲ್ಜಾರಿ ಜೋಸೆಫ್.