For Quick Alerts
ALLOW NOTIFICATIONS  
For Daily Alerts
 

IPL 2023: ರಾಜಪಕ್ಸ, ಧವನ್ ಭರ್ಜರಿ ಬ್ಯಾಟಿಂಗ್; ಕೆಕೆಆರ್‌ಗೆ ಬೃಹತ್ ಗುರಿ ನೀಡಿದ ಪಂಜಾಬ್ ಕಿಂಗ್ಸ್

ಶನಿವಾರ, ಏಪ್ರಿಲ್ 1ರಂದು ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಭಾನುಕ ರಾಜಪಕ್ಸ ಅವರ ಭರ್ಜರಿ ಅರ್ಧಶತಕ ಮತ್ತು ಶಿಖರ್ ಧವನ್ ಅವರ ನಾಯಕದ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‌ಗಳನ್ನು ಕಲೆಹಾಕಿದ್ದು, ಕೆಕೆಆರ್ ತಂಡಕ್ಕೆ 192 ರನ್‌ಗಳ ಬೃಹತ್ ಗುರಿ ನೀಡಿದೆ.

KKR vs PBKS IPL 2023: Kolkata Knight Riders Need 192 Runs To Win Against Punjab Kings

ಪಂಜಾಬ್ ಕಿಂಗ್ಸ್ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಪ್ರಭ್‌ಸಿಮ್ರಾನ್ ಸಿಂಗ್ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಕೇವಲ 12 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 23 ರನ್ ಬಾರಿಸಿ ಔಟಾದರು. ನಂತರ ಜೊತೆಗೂಡಿದ ಶಿಖರ್ ಧವನ್ ಮತ್ತು ಭಾನುಕ ರಾಜಪಕ್ಸ 86 ರನ್‌ಗಳ ಜೊತೆಯಾಟ ನೀಡಿದರು.

ಭಾನುಕ ರಾಜಪಕ್ಸ ಕೇವಲ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಮೇತ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಶಿಖರ್ ಧವನ್ 29 ಎಸೆತಗಳಲ್ಲಿ 6 ಬೌಂಡರಿಗಳ ಸಮೇತ 40 ರನ್ ಗಳಿಸಿ ಔಟಾದರು. ನಂತರ ಬಂದ ಜಿತೇಶ್ ಶರ್ಮಾ 11 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ 21 ರನ್‌ಗಳ ಕಾಣಿಕೆ ನೀಡಿದರು.

KKR vs PBKS IPL 2023: Kolkata Knight Riders Need 192 Runs To Win Against Punjab Kings

ಇದೇ ವೇಳೆ ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಾಝಾ 13 ಎಸೆತಗಳಲ್ಲಿ 16 ರನ್ ಗಳಿಸಿದರು. ಇದರಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿದೆ. ಅಂತಿಮವಾಗಿ ಐಪಿಎಲ್‌ನ ದುಬಾರಿ ಆಟಗಾರ ಸ್ಯಾಮ್ ಕರ್ರಾನ್ 17 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 26 ರನ್ ಬಾರಿಸಿದರೆ, ಶಾರೂಖ್ ಖಾನ್ 11 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಟಿಮ್ ಸೌಥಿ 4 ಓವರ್‌ಗಳಲ್ಲಿ 54 ರನ್ ನೀಡಿ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದರು. ಇನ್ನು ಉಮೇಶ್ ಯಾದವ್ 4 ಓವರ್‌ಗಳಲ್ಲಿ 27 ರನ್ ನೀಡಿ 1 ವಿಕೆಟ್ ಪಡೆದರೆ, ಸುನಿಲ್ ನರೈನ್ 4 ಓವರ್‌ಗಳಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದರು.

ಪಂಜಾಬ್ ಕಿಂಗ್ಸ್ vs ಕೆಕೆಆರ್ ಆಡುವ 11ರ ಬಳಗ
ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಸಾ, ನಾಥನ್ ಎಲ್ಲಿಸ್, ಶಾರುಖ್ ಖಾನ್, ಜಿತೇಶ್ ಶರ್ಮಾ, ಸ್ಯಾಮ್ ಕರ್ರಾನ್, ಸಿಕಂದರ್ ರಝಾ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್.

ಕೆಕೆಆರ್ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಮನ್‌ದೀಪ್ ಸಿಂಗ್, ಆಂಡ್ರೆ ರಸ್ಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಅನುಕೂಲ್ ರಾಯ್, ಟಿಮ್ ಸೌಥಿ, ವರುಣ್ ಚಕ್ರವರ್ತಿ.

Story first published: Saturday, April 1, 2023, 17:19 [IST]
Other articles published on Apr 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+