KKR vs PBKS IPL 2023: ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ vs ಕೆಕೆಆರ್ ಹೆಡ್-ಟು-ಹೆಡ್ ದಾಖಲೆ; ಪಂದ್ಯದ ವಿವರ
ಶನಿವಾರ, ಏಪ್ರಿಲ್ 1ರ ಮಧ್ಯಾಹ್ನ 3 ಗಂಟೆಗೆ ಮೊಹಾಲಿಯಲ್ಲಿ ನಡೆಯಲಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡನೇ ಪಂದ್ಯದಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ.
ಹೊಸ ನಾಯಕ ಶಿಖರ್ ಧವನ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡ ಪ್ರಶಸ್ತಿ ಗೆಲುವಿನ ಭರವಸೆ ಮತ್ತು ನಿರೀಕ್ಷೆಗಳೊಂದಿಗೆ ಈ ಬಾರಿಯ ಋತುವನ್ನು ಪ್ರಾರಂಭಿಸಲಿದೆ. ಪಂಜಾಬ್ ಕಿಂಗ್ಸ್ ಯುವ ಮತ್ತು ಪ್ರತಿಭಾವಂತ ಆಟಗಾರರಿಂದ ಕೂಡಿದ ಅತ್ಯುತ್ತಮ ತಂಡವನ್ನು ಹೊಂದಿದೆ.

ಸ್ಯಾಮ್ ಕುರ್ರಾನ್ ಟಾಪ್ ಆಗಿದ್ದರೆ, ಕಗಿಸೊ ರಬಾಡ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ತಂಡದ ಆಧಾರವಾಗಲಿದ್ದಾರೆ. ಒಂದೆರಡು ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ತಂಡವು ಬಲಿಷ್ಠವಾಗಿದ್ದು, ಎಂದೂ ಗೆಲ್ಲದ ಐಪಿಎಲ್ ಟ್ರೋಫಿಗಾಗಿ ಈ ಬಾರಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ.
ಇನ್ನು ಗಾಯಾಳು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡವು ಯುವ ಮತ್ತು ಅನುಭವಿ ಆಟಗಾರರ ಸಮತೋಲನವನ್ನು ಹೊಂದಿದೆ. ತಮ್ಮ ಐಪಿಎಲ್ ಅಭಿಯಾನವನ್ನು ಗೆಲುವಿನ ಮೂಲಕ ಪ್ರಾರಂಭಿಸಲು, ಕೆಕೆಆರ್ ತಂಡ ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ಅವರಂತಹ ಪ್ರಮುಖ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ಎದುರು ನೋಡುತ್ತಿದೆ.

ಪಂಜಾಬ್ ಕಿಂಗ್ಸ್ vs ಕೆಕೆಆರ್ ಹೆಡ್ ಟು ಹೆಡ್ ದಾಖಲೆ
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ ಇತಿಹಾಸದಲ್ಲಿ 30 ಬಾರಿ ಮುಖಾಮುಖಿಯಾಗಿವೆ. 30 ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 20 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ತಂಡ 10 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ನಡುವೆ ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಗರಿಷ್ಠ ಮೊತ್ತ - 245 ರನ್
ಪಂಜಾಬ್ ಕಿಂಗ್ಸ್ ಗರಿಷ್ಠ ಮೊತ್ತ - 214 ರನ್
ಕೋಲ್ಕತ್ತಾ ನೈಟ್ ರೈಡರ್ಸ್ ಕನಿಷ್ಠ ಮೊತ್ತ - 79 ರನ್
ಪಂಜಾಬ್ ಕಿಂಗ್ಸ್ ಕನಿಷ್ಠ ಮೊತ್ತ - 119 ರನ್
ಪಂಜಾಬ್ ಕಿಂಗ್ಸ್ vs ಕೆಕೆಆರ್ ಆಟಗಾರರ ವೈಯಕ್ತಿಕ ಪ್ರದರ್ಶನ
ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ - ಗೌತಮ್ ಗಂಭೀರ್ (ಕೆಕೆಆರ್) - 492 ರನ್
ಹೆಚ್ಚು ವಿಕೆಟ್ ಪಡೆದ ಬೌಲರ್ - ಸುನಿಲ್ ನರೈನ್ (ಕೆಕೆಆರ್) - 32 ವಿಕೆಟ್‌ಗಳು
ಅತ್ಯಧಿಕ ಮೊತ್ತ - ವೃದ್ಧಿಮಾನ್ ಸಹಾ (ಪಂಜಾಬ್ ಕಿಂಗ್ಸ್) - ಅಜೇಯ 115 ರನ್
ಅತ್ಯುತ್ತಮ ಬೌಲಿಂಗ್ ಪ್ರದರ್ಶನ - ಸುನಿಲ್ ನರೈನ್ (ಕೆಕೆಆರ್) - 19 ರನ್‌ಗೆ 5 ವಿಕೆಟ್

ಪಂಜಾಬ್ ಕಿಂಗ್ಸ್ vs ಕೆಕೆಆರ್ ಸಂಭಾವ್ಯ ಆಡುವ 11ರ ಬಳಗ
ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್ (ನಾಯಕ), ಮ್ಯಾಟ್ ಶಾರ್ಟ್, ಸಿಕಂದರ್ ರಜಾ, ಶಾರುಖ್ ಖಾನ್, ಜಿತೇಶ್ ಶರ್ಮಾ (ವಿಕಟ್ ಕೀಪರ್), ಸ್ಯಾಮ್ ಕುರ್ರಾನ್, ರಿಷಿ ಧವನ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್.
ಕೆಕೆಆರ್ ತಂಡ: ವೆಂಕಟೇಶ್ ಅಯ್ಯರ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಮನ್‌ದೀಪ್ ಸಿಂಗ್, ಆಂಡ್ರೆ ರಸ್ಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications