For Quick Alerts
ALLOW NOTIFICATIONS  
For Daily Alerts
 

IPL 2023: ಮಳೆ ಬಾಧಿತ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡಕ್ಕೆ ಭರ್ಜರಿ ಗೆಲುವು

ಶನಿವಾರ, ಏಪ್ರಿಲ್ 1ರಂದು ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಡಕ್ವರ್ತ್ ಲೂಯಿಸ್ (ಡಿಎಲ್ಎಸ್) ವಿಧಾನದಡಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ ಇನ್ನಿಂಗ್ಸ್‌ನ 16 ಓವರ್‌ಗಳ ನಂತರ ಸುರಿದ ಭಾರೀ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಆಗ ಎರಡು ತಂಡಗಳ ರನ್ ಹಾಗೂ ವಿಕೆಟ್ ಲೆಕ್ಕಾಚಾರದಲ್ಲಿ ಪಂಜಾಬ್ ಕಿಂಗ್ಸ್ ಮುನ್ನಡೆ ಸಾಧಿಸಿದ್ದರಿಂದ ಡಿಎಲ್ಎಸ್ ವಿಧಾನದಡಿಯಲ್ಲಿ 7 ರನ್‌ಗಳ ಜಯ ಕಂಡಿತು.

KKR vs PBKS IPL 2023: Punjab Kings Won By 7 Runs Against Kolkata Knight Riders By DLS Method

ಪಂಜಾಬ್ ಕಿಂಗ್ಸ್ ತಂಡ ನೀಡಿದ್ದ 192 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ 16 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತ್ತು. ಗೆಲುವಿಗೆ ಇನ್ನೂ 24 ಎಸೆತಗಳಲ್ಲಿ ಕಷ್ಟಸಾಧ್ಯವೆನಿಸಿದ 46 ರನ್‌ಗಳ ಅವಶ್ಯಕತೆ ಇತ್ತು. ಆದರೆ ಕೇವಲ ಮೂರು ವಿಕೆಟ್‌ಗಳು ಮಾತ್ರ ಕೈಯಲ್ಲಿದ್ದವು. ಮಳೆ ಅವರ ಗೆಲುವಿನ ಅದೃಷ್ಟವನ್ನು ಕಸಿದುಕೊಂಡಿತು.

ಕೆಕೆಆರ್ ತಂಡದ ಪರ ಮನ್‌ದೀಪ್ ಸಿಂಗ್ 2 ರನ್, ರಹಮಾನುಲ್ಲಾ ಗುರ್ಬಾಜ್ 22 ರನ್, ಅನುಕೂಲ್ ರಾಯ್ 4 ರನ್, ಇಂಪ್ಯಾಕ್ಟ್ ಪ್ಲೇಯರ್ ವೆಂಕಟೇಶ್ ಅಯ್ಯರ್ 34 ರನ್, ನಾಯಕ ನಿತೀಶ್ ರಾಣಾ 24 ರನ್, ಆಂಡ್ರೆ ರಸೆಲ್ 35 ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ ಮತ್ತು ಆಂಡ್ರೆ ರಸೆಲ್ ಗೆಲುವಿನ ಆಸೆ ಮೂಡಿಸಿದ್ದರೂ, ಅವರ ವಿಕೆಟ್ ಬೀಳುತ್ತಿದ್ದಂತೆ, ಸೋಲು ಖಚಿತವೆನಿಸಿತ್ತು.

Punjab Kings won Against KKR

ಬೌಲಿಂಗ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಅರ್ಶ್‌ದೀಪ್ ಸಿಂಗ್ 3 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಸ್ಯಾಮ್ ಕರ್ರಾನ್, ನಾಥನ್ ಎಲ್ಲಿಸ್, ಸಿಕಂದರ್ ರಾಝಾ ಮತ್ತು ರಾಹುಲ್ ಚಹಾರ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಭಾನುಕ ರಾಜಪಕ್ಸ ಅವರ ಭರ್ಜರಿ ಅರ್ಧಶತಕ ಮತ್ತು ಶಿಖರ್ ಧವನ್ ಅವರ ನಾಯಕದ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‌ಗಳನ್ನು ಕಲೆಹಾಕಿತು.

ಪಂಜಾಬ್ ಕಿಂಗ್ಸ್ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಪ್ರಭ್‌ಸಿಮ್ರಾನ್ ಸಿಂಗ್ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ, ಕೇವಲ 12 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 23 ರನ್ ಬಾರಿಸಿ ಔಟಾದರು. ನಂತರ ಜೊತೆಗೂಡಿದ ಶಿಖರ್ ಧವನ್ ಮತ್ತು ಭಾನುಕ ರಾಜಪಕ್ಸ 86 ರನ್‌ಗಳ ಜೊತೆಯಾಟ ನೀಡಿದರು.

Punjab Kings won Against KKR

ಭಾನುಕ ರಾಜಪಕ್ಸ ಕೇವಲ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಮೇತ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಶಿಖರ್ ಧವನ್ 29 ಎಸೆತಗಳಲ್ಲಿ 6 ಬೌಂಡರಿಗಳ ಸಮೇತ 40 ರನ್ ಗಳಿಸಿ ಔಟಾದರು. ನಂತರ ಬಂದ ಜಿತೇಶ್ ಶರ್ಮಾ 11 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ 21 ರನ್‌ಗಳ ಕಾಣಿಕೆ ನೀಡಿದರು.

ಇದೇ ವೇಳೆ ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಾಝಾ 13 ಎಸೆತಗಳಲ್ಲಿ 16 ರನ್ ಗಳಿಸಿದರು. ಇದರಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿದೆ. ಅಂತಿಮವಾಗಿ ಐಪಿಎಲ್‌ನ ದುಬಾರಿ ಆಟಗಾರ ಸ್ಯಾಮ್ ಕರ್ರಾನ್ 17 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 26 ರನ್ ಬಾರಿಸಿದರೆ, ಶಾರೂಖ್ ಖಾನ್ 11 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಟಿಮ್ ಸೌಥಿ 4 ಓವರ್‌ಗಳಲ್ಲಿ 54 ರನ್ ನೀಡಿ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದರು. ಇನ್ನು ಉಮೇಶ್ ಯಾದವ್ 4 ಓವರ್‌ಗಳಲ್ಲಿ 27 ರನ್ ನೀಡಿ 1 ವಿಕೆಟ್ ಪಡೆದರೆ, ಸುನಿಲ್ ನರೈನ್ 4 ಓವರ್‌ಗಳಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದರು.

Story first published: Saturday, April 1, 2023, 20:19 [IST]
Other articles published on Apr 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+