For Quick Alerts
ALLOW NOTIFICATIONS  
For Daily Alerts
 

ಕೋಲ್ಕತ್ತಾ-ರಾಜಸ್ಥಾನ್ ಮುಖಾಮುಖಿ: ಎರಡೂ ತಂಡಗಳು ಸಮಬಲ

KKR vs RR Preview: kolkata take on charged up Rajasthan

ಕೋಲ್ಕತ್ತಾ, ಮೇ 15: ಐಪಿಎಲ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು 4ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ನಡುವೆ ಇಂದು ಕೋಲ್ಕತ್ತಾದ ಈಡನ್ ಗಾರ್ನ್ ನಲ್ಲಿ ಕಾದಾಟ ನಡೆಯಲಿದೆ.

ಎರಡೂ ತಂಡಗಳಿಗೂ ಇಂದಿನ ಗೆಲುವು ಅನಿವಾರ್ಯವೇ. ಅಂಕಪಟ್ಟಿಯಲ್ಲಿ ಅಕ್ಕಪಕ್ಕದಲ್ಲಿರುವ ಎರಡೂ ತಂಡಗಳು ಪ್ರಬಲ ತಂಡವೆನ್ನುವುದಕ್ಕೆ ಸಾಕ್ಷಿಯಾಗಿವೆ. ಪ್ಲೇ ಆಫ್ ನಿಟ್ಟಿನಲ್ಲಿ ಎರಡೂ ತಂಡಗಳು ಇಂದು ಭರ್ಜರಿ ಪೈಪೋಟಿ ನಡೆಸುವ ಸಾಧ್ಯತೆಗಳಿವೆ.

ಒಟ್ಟು 12 ಪಂದ್ಯಗಳನ್ನು ಆಡಿರುವ ಕೋಲ್ಕತ್ತಾ 6 ಜಯ 6 ಸೋಲುಗಳನ್ನು ಕಂಡಿದ್ದು, ಅಂಕಪಟ್ಟಿಯಲ್ಲಿ 12 ಅಂಕಗಳನ್ನು ಪಡೆದಿದೆ. ಇತ್ತ ರಾಜಸ್ಥಾನ್ ಕೂಡ ಕೋಲ್ಕತ್ತಾಗೆ ಸಮಬಲ ಸಾಧಿಸಿದೆ. ಆದರೆ ರನ್ ರೇಟ್ ಆಧಾರದಲ್ಲಿ ಮಾತ್ರ ರಾಜಸ್ಥಾನ್ ಅಂಕಪಟ್ಟಿಯಲ್ಲಿ ಕೋಲ್ಕತ್ತಾಗಿಂತ ಕೆಳಗಿದೆಯಷ್ಟೇ.

ಹಿಂದಿನ ಅನಿವಾರ್ಯ ಪಂದ್ಯದಲ್ಲಿ ಕೋಲ್ಕತ್ತಾ ಪಂಜಾಬ್ ವಿರುದ್ಧ 31ರನ್ ಗೆಲುವು ಸಾಧಿಸಿತ್ತು. ರಾಜಸ್ಥಾನ್ ತಂಡವೂ ಮುಂಬೈ ಎದುರಿನ ಸೆಣಸಾಟದಲ್ಲಿ 7 ವಿಕೆಟ್ ಜಯ ದಾಖಲಿಸಿತ್ತು. ಆದರೆ ಇಂದು ಐಪಿಎಲ್ 49ನೇ ಪಂದ್ಯವಾಗಿ ನಡೆಯುವ ಹಣಾಹಣಿಯಲ್ಲಿ ಗೆಲುವು ಯಾರ ತೆಕ್ಕೆಗ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Tuesday, May 15, 2018, 19:05 [IST]
Other articles published on May 15, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+