ಸಚಿನ್ ಹೆಸರಿನಲ್ಲಿರುವ ಸಾರ್ವಕಾಲಿಕ ದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ : ಬ್ರಾಡ್ ಹಾಗ್

ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರ ಸಚಿನ್ ತೆಂಡೂಲ್ಕರ್ ಅದೆಷ್ಟೋ ಅಸಾಧ್ಯವೆನಿಸುವ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಅತಿ ಹೆಚ್ಚು ಶತಕ, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಶತಕ ಈ ದಾಖಲೆಯನ್ನು ಮುರಿಯುವುದು ಯಾವುದೇ ಆಟಗಾರನಿಗೂ ಸುಲಭ ಸಾಧ್ಯವಿಲ್ಲ.
ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ವಿಶೇಷ ದಾಖಲೆಯನ್ನು ಮುರಿಯಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ. ವಿರಾಟ್ ಕೊಹ್ಲಿಯ ಒಂದು ವಿಶೇಷ ಸಾಮರ್ಥ್ಯದ ಕಾರಣದಿಂದಾಗಿ ಆ ದಾಖಲೆಯನ್ನು ಮುರಿಯಲಿ ಸಾಧ್ಯವಿದೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

ಹಾಗ್ ಪ್ರಕಾರ ವಿರಾಟ್ ಮುರಿಯುವ ದಾಖಲೆ
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. ಸಚಿನ್ ಶತಕಗಳ ಶತಕವನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇದರ ಸಮೀಪ ಯಾವ ಆಟಗಾರನೂ ಇಲ್ಲ. ಆದರೆ ವಿರಾಟ್ ಕೊಹ್ಲಿ ಇದನ್ನು ಮುರಿಯಲಿದ್ದಾರೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

ಕಾರಣ ಹೇಳಿದ ಬ್ರಾಡ್ ಹಾಗ್
ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಬಾರಿಸಿದ ಶತಕಗಗಳ ಶತಕ ದಾಖಲೆಯನ್ನು ಮುರಿಯುತ್ತಾರೆ ಎಂದು ಬ್ರಾಡ್ ಹಾಗ್ ಸುಮ್ಮನೆ ಹೇಳಿಲ್ಲ. ಅದಕ್ಕೆ ಅವರು ಕಾರಣವೂ ನೀಡಿದ್ದಾರೆ. ವಿರಾಟ್ ಬಳಿಯಿರುವ ಫಿಟ್‌ನೆಸ್ ಈ ದಾಖಲೆಯನ್ನು ಮುರಿಯಲು ಪೂರಕವಾಗಿದೆ ಎಂದು ಹಾಗ್ ಹೇಳಿದ್ದಾರೆ. ಅದೇ ಕಾರಣದಿಂದ ಈ ದೊಡ್ಡ ಹೇಳಿಕೆಯನ್ನು ವಿಶ್ವಾಸದಿಂದ ಹಾಗ್ ನೀಡಿದ್ದಾರೆ.

ಸಚಿನ್‌ಗಿಂತ ಉತ್ತಮ ಫಿಟ್‌ನೆಸ್
ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಖಂಡಿತಾ ಮುರಿಯುತ್ತಾರೆ. ಸಚಿನ್‌ಗೆ ಇದ್ದ ಫಿಟ್‌ನೆಸ್‌ಗಿಂತ ಉತ್ತಮವಾದ ಫಿಟ್‌ನೆಸ್‌ಅನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಈಗ ಅತ್ಯುತ್ತಮ ಫಿಟ್‌ನೆಸ್ ತರಬೇತಿದಾರ ಸಹಾಯ ಪಡೆಯಲು ಸಾಧ್ಯವಿದೆ. ಉತ್ತಮ ಫಿಸಿಯೋ ಡಾಕ್ಟರ್‌ಗಳ ಸಲಹೆಗಳು ಲಭ್ಯವಾಗುತ್ತದೆ. ಇದು ಕೊಹ್ಲಿಗೆ ಉಪಯುಕ್ತವಾಗಲಿದೆ ಎಂದು ಬ್ರಾ್ಡ ಹಾಗ್ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಶತಕ ದಾಖಲೆ
ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 51 ಶತಕವನ್ನು ಬಾರಿಸಿದ್ದರೆ ಏಕದಿನ ಕ್ರಿಕೆಟ್‌ನಲ್ಲಿ 49 ಶತಕವನ್ನು ಬಾರಿಸಿದ್ದಾರೆ. ಈಗೆ ಒಟ್ಟಾರೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ 100 ಅಂತಾರಾಷ್ಟ್ರೀಯ ಶತಕಗಳು ದಾಖಲಾಗಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 71 ಶತಕವನ್ನು ಗಳಿಸಿದ್ದಾರೆ.

ದಾಖಲೆ ಬೆನ್ನತ್ತಿದ್ದಾರೆ ವಿರಾಟ್
ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಬೆನ್ನಟ್ಟಿದ್ದಾರೆ. ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ದಾಖಲೆಯ ಸಮೀಪದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ 43 ಶತಕ ಬಾರಿಸಿದ್ದು ಸಚಿನ್ ದಾಖಲೆಯ 49 ಶತಕಗಳ ಸಮೀಪದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ 27 ಶತಕಗಳನ್ನು ಬಾರಿಸಿದ್ದು ಒಟ್ಟಾರೆ 70 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications