For Quick Alerts
ALLOW NOTIFICATIONS  
For Daily Alerts
 

ಸ್ಕ್ಯಾನಿಂಗ್ ಫಲಿತಾಂಶ: ಇಂಗ್ಲೆಂಡ್ ವಿರುದ್ಧ ಮೊದಲ ODI ಪಂದ್ಯದಲ್ಲಿ ಕೊಹ್ಲಿ ಆಡುವುದು ಅನುಮಾನ

VK

ಕೆನ್ನಿಂಗ್ಟನ್ ಓವಲ್‌ನಲ್ಲಿ ಮಂಗಳವಾರ ನಡೆಯಲಿರುವ ಭಾರತ-ಇಂಗ್ಲೆಂಡ್ ಮೊದಲ ಏಕದಿನ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ಟೀಂ ಇಂಡಿಯಾಗೆ ಇಂಜ್ಯುರಿ ಸಮಸ್ಯೆ ಕಾಡುತ್ತಿದೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತೊಡೆಸಂದು ನೋವಿನಿಂದ ಬಳಲುತ್ತಿದ್ದು, ಆಡುವುದು ಅನುಮಾನ ಎನಿಸಿದೆ.

ಈಗಾಗಲೇ ಇದೇ ಇಂಜ್ಯುರಿಯಿಂದಾಗಿ ಕನ್ನಡಿಗ ಕೆ.ಎಲ್ ರಾಹುಲ್ ದಕ್ಷಿಣ ಆಫ್ರಿಕಾ, ಐರ್ಲೆಂಡ್, ಇಂಗ್ಲೆಂಡ್ ಸರಣಿಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ಇದ್ರ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ವಿರಾಟ್ ಕೊಹ್ಲಿ ಕೂಡ ಸಮಸ್ಯೆಗೆ ತುತ್ತಾಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸ್ಕ್ಯಾನಿಂಗ್ ಫಲಿತಾಂಶದ ಮೇಲೆ ಕೊಹ್ಲಿ ಆಟ

ಸ್ಕ್ಯಾನಿಂಗ್ ಫಲಿತಾಂಶದ ಮೇಲೆ ಕೊಹ್ಲಿ ಆಟ

ಬಿಸಿಸಿಐ ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ, ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾಗವಹಿಸುವಿಕೆಯು ಸ್ಕ್ಯಾನಿಂಗ್ ಫಲಿತಾಂಶದ ಮೇಲೆ ಅವಲಂಬಿಸಿರುತ್ತದೆ. ಈಗಾಗಲೇ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಆರಂಭಿಕ ಹಂತದ ತೊಡೆಸಂದು ಗಾಯದಿಂದ ಬಳಲುತ್ತಿದ್ದು, ಸ್ಕ್ಯಾನಿಂಗ್ ಫಲಿತಾಂಶಕ್ಕೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಎದುರು ನೋಡುತ್ತಿದೆ.

"ಈ ಹಂತದಲ್ಲಿ ಗಾಯವು ಗಂಭೀರವಾಗಿ ಕಾಣುತ್ತಿಲ್ಲ. ವೈದ್ಯಕೀಯ ತಂಡವು ಪರೀಕ್ಷಿಸುತ್ತಿದೆ. ಅವರನ್ನು ಸ್ಕ್ಯಾನ್‌ಗಾಗಿ ಕಳುಹಿಸಲಾಗಿದೆ ಮತ್ತು ಅವರು ಆಡುವ ಅವಕಾಶಗಳು ಸ್ಕ್ಯಾನ್ ಫಲಿತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಮೂಲಗಳು ಕ್ರಿಕ್‌ಬಜ್‌ಗೆ ತಿಳಿಸಿವೆ.

ಟೀಂ ಇಂಡಿಯಾ ಬೆಂಚ್‌ ಸ್ಟ್ರೆಂಥ್ ಹೇಗಿದೆ?

ಟೀಂ ಇಂಡಿಯಾ ಬೆಂಚ್‌ ಸ್ಟ್ರೆಂಥ್ ಹೇಗಿದೆ?

ಟೀಂ ಇಂಡಿಯಾ ಕೋವಿಡ್-19 ಹಾಗೂ ಇಂಜ್ಯುರಿ ಕಾರಣಗಳ ಹಿನ್ನಲೆಯಲ್ಲಿ 17 ಆಟಗಾರರನ್ನೊಳಗೊಂಡ ಸ್ಕ್ವಾಡ್ ಅನ್ನು ಹೊಂದಿದೆ. ಹೀಗಾಗಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬ್ಯಾಕ್ ಆಪ್ ಆಗಿ ಆಟಗಾರರು ಬೆಂಚ್‌ನಲ್ಲಿದ್ದಾರೆ. ಮೊದಲ ಏಕದಿನ ಪಂದ್ಯವು ಓವಲ್‌ನಲ್ಲಿ ಎರಡು ಮತ್ತು ಮೂರನೇ ಏಕದಿನ ಪಂದ್ಯ ಲಾರ್ಡ್ಸ್ ಮತ್ತು ಓಲ್ಡ್‌ ಟ್ರಾಫರ್ಡ್‌ನಲ್ಲಿ ಕ್ರಮವಾಗಿ ಜುಲೈ 14 ಮತ್ತು ಜುಲೈ 17ರಂದು ನಡೆಯಲಿದೆ.

ಪಾಕಿಸ್ತಾನ ಈ ಬಾರಿ ಭಾರತವನ್ನ ಅಷ್ಟು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ: ಶೋಯೆಬ್ ಅಖ್ತರ್

ಅಭ್ಯಾಸಕ್ಕಿಳಿಯಲಿಲ್ಲ ಪ್ರಮುಖ ಆಟಗಾರರು!

ಅಭ್ಯಾಸಕ್ಕಿಳಿಯಲಿಲ್ಲ ಪ್ರಮುಖ ಆಟಗಾರರು!

ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದ ಬಳಿಕ ಓವಲ್‌ಗೆ ಬಂದಿಳಿದ ಆಟಗಾರರಲ್ಲಿ ಹಲವರು ಸೋಮವಾರ ಅಭ್ಯಾಸ ನಡೆಸಲಿಲ್ಲ. ಟಿ20 ಪಂದ್ಯದಲ್ಲಿ ಆಟವಾಡಿದ್ದ ಆಟಗಾರರು ವಿಶ್ರಾಂತಿ ಪಡೆದರು. ಆದರೆ ಶಿಖರ್ ಧವನ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ ಮತ್ತು ಮೊಹಮ್ಮದ್ ಸಿರಾಜ್ ಸೋಮವಾರ ಮಧ್ಯಾಹ್ನ ಅಭ್ಯಾಸದಲ್ಲಿ ಭಾಗಿಯಾಗಿದ್ದರು.

ರೋಹಿತ್ ರನ್ ಬಾರಿಸದಿದ್ರೂ ಯಾರೂ ಕೇಳಲ್ಲ!: ಕೊಹ್ಲಿ ಬೆಂಬಲಕ್ಕೆ ನಿಂತ ಸುನಿಲ್ ಗವಾಸ್ಕರ್

ಏಕಾಏಕಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಗೆ ಹೋದ Dhoni | *Cricket | OneIndia Kannada
ವೆಸ್ಟ್‌ ಇಂಡೀಸ್ ವಿರುದ್ಧದ ಟಿ20 ಸರಣಿಗೆ ತಂಡ ಘೋಷಣೆ ಸಾಧ್ಯತೆ

ವೆಸ್ಟ್‌ ಇಂಡೀಸ್ ವಿರುದ್ಧದ ಟಿ20 ಸರಣಿಗೆ ತಂಡ ಘೋಷಣೆ ಸಾಧ್ಯತೆ

ಮುಂಬರುವ ವೆಸ್ಟ್‌ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಈಗಾಗಲೇ ತಂಡವನ್ನು ಘೋಷಣೆ ಮಾಡಲಾಗಿದೆ. ಹೀಗಾಗಿ ತದನಂತರ ನಡೆಯಲಿರುವ ಟಿ20 ಸರಣಿಗೆ ಸ್ಕ್ವಾಡ್ ಅನ್ನು ಒಂದು ಅಥವಾ ಎರಡು ದಿನಗಳಲ್ಲಿ ಘೋಷಣೆ ಮಾಡುವ ಸಾಧ್ಯತೆಯಿದೆ. ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿರುವ ಪ್ರಮುಖ ಹಿರಿಯ ಆಟಗಾರರು ಟಿ20 ಸರಣಿಯಲ್ಲಿ ಭಾಗಿಯಾಗುವ ಸಾಧ್ಯತೆಯಿದ್ದು, ಕೊಹ್ಲಿ ಮಾತ್ರ ಆಯ್ಕೆಯಾಗುವುದು ಅನುಮಾನ ಮೂಡಿಸಿದೆ.

ಈಗಾಗಲೇ ಕಳಪೆ ಫಾರ್ಮ್‌ನಿಂದ ದೀರ್ಘಕಾಲದಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಸ್ವತಃ ಏಕದಿನ ಸರಣಿ ಜೊತೆಗೆ ಟಿ20ಗೂ ವಿಶ್ರಾಂತಿ ಕೇಳಿದ್ದಾರೆ ಎಂದು ವರದಿಯಾಗಿದೆ. ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳಲ್ಲಿ ಭಾಗಿಯಾಗಲಿದೆ. ಸರಣಿಯು ಜುಲೈ 22ರಿಂದ ಆಗಸ್ಟ್‌ 7ರವರೆಗೆ ನಡೆಯಲಿದ್ದು ಕೆರಿಬಿಯನ್ ಮತ್ತು ಅಮೆರಿಕಾ ಆತಿಥ್ಯ ವಹಿಸಲಿದೆ.

Story first published: Tuesday, July 12, 2022, 12:16 [IST]
Other articles published on Jul 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+